ರೀಲ್ಸ್​ಗಾಗಿ ಯುವಕರ ಹುಚ್ಚು ಸಾಹಸ..ಅಣೆಕಟ್ಟೆ ಕೋಡಿ ಮೇಲೇರಿದ ಹುಡುಗ ಏನಾದ ಗೊತ್ತಾ?

stunt (1)
Published on

ಮುಂಬೈ: ರೀಲ್ಸ್​ ಹುಚ್ಚು ಯುವ ಜನರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಇತ್ತೀಚೆಗಷ್ಟೇ ಇಂತಹದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಜಲಾಶಯಕ್ಕೆ ತೆರಳಿ ರಿಸ್ಕ್ ಸ್ಟಂಟ್ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೂವರು ಯುವಕರು ನಾಗ್ಪುರದ ಉಮ್ರೆಡ್ ಪಟ್ಟಣದ ಸಮೀಪವಿರುವ ಮಕರಧೋಕ್ಡಾ ಅಣೆಕಟ್ಟು ವೀಕ್ಷಣೆಗೆ ತೆರಳಿದ್ದರು. ಮಳೆಗೆ ಅಣೆಕಟ್ಟಿನ ಕೋಡಿ ಬಿದ್ದಿದ್ದು, ಯುವಕರು ತುಂಬಾಇಳಿಜಾರು ಮತ್ತು ಜಾರಿಬೀಳುವ ರೀತಿ ಇರುವ ಕೋಡಿ ಮೇಲೆ ಹತ್ತಲು ಮುಂದಾಗಿದ್ದಾರೆ.

ಅವರಲ್ಲಿ ಒಬ್ಬ ಮೇಲಕ್ಕೆ ಬಂದು ವಿಜಯದ ಸಂಕೇತವನ್ನು ನೀಡುತ್ತಾನೆ. ಬಳಿಕ ಮತ್ತೊಬ್ಬ ಸ್ನೇಹಿತನನ್ನು ಮೇಲಕ್ಕೆ ಎಳೆಯಲು ಯತ್ನಿಸಿದ್ದಾನೆ. ಆದರೆ ಅವನು ಕೈಜಾರಿ ಬಿದ್ದಿದ್ದಾನೆ. ಉಳಿದ ಇಬ್ಬರು ಸಹ ಕೆಳಗೆ ಜಾರಿದ್ದಾರೆ. ಒಬ್ಬ ಯುವಕ ಅಣೆಕಟ್ಟೆಗೆ ಬಿದ್ದಿದ್ದು, ಈಜಲು ಬಾರದ ಕಾರಣ ಮುಳುಗಿದ್ದಾನೆ. ಸ್ಥಳೀಯರು ಆತನನ್ನು ಗಮನಿಸಿ ಹೊರತೆಗೆಯಲು ಪ್ರಯತ್ನಿಸುವ ಮೊದಲು ಅವನು ಸಂಪೂರ್ಣವಾಗಿ ಮುಳುಗಿದ್ದಾನೆ.

ಮೋಜಿಗೆ ಬಂದ ಯುವಕರು ಹುಚ್ಚು ಸಾಹಸಕ್ಕೆ ಇಳಿದು ಒಬ್ಬ ಪ್ರಾಣ ತೆತ್ತಿದ್ದಾನೆ. ಈ ವೇಳೆ ನೆರೆದಿದ್ದ ಕೆಲವರು ಯುವಕ ನೀರಿನಲ್ಲಿ ಮುಳುಗುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗಿವೆ. ಈಜುಗಾರರ ಸಹಾಯದಿಂದ ಮೃತ ದೇಹವನ್ನು ಹೊರ ತೆಗೆಯಲಾಗಿದೆ.

ಇತ್ತೀಚಿಗೆ ಯುವಕರು ಕೇವಲ ಮೋಜಿಗಾಗಿ ಮತ್ತು ವೈರಲ್ ಆಗಲು ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net