

ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೋರ್ವ ಬೇರೊಂದು ಸಮುದಾಯಕ್ಕೆ ಸೇರಿದ ಸಹಪಾಠಿಯ ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ಐ ಲವ್ ಯೂ ಎಂದು ಪತ್ರ ಬರೆದಿರುವ ಘಟನೆ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಲುಹಾರಿಯಾ ಗ್ರಾಮದಲ್ಲಿ ನಡೆದಿದೆ.
ಘಟನೆ ಸಂಬಂಧ ಲುಹಾರಿಯಾ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಬಾಲಕಿಯ ಸಂಬಂಧಿಕರು ಹಾಗೂ ಜಾತಿ ಮುಖಂಡರು ಪ್ರತಿಟಭಟನೆ ನಡೆಸಿ ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಬಾಲಕಿ ಹಾಗೂ ಆರೋಪಿ ಇಬ್ಬರು ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಂತ್ರಸ್ತೆ ಅನ್ಯ ಆಜತಿಗೆ ಸೇರಿದವಳು ಎಂದು ತಿಳಿದು ಬಂದಿದೆ. ಶುಕ್ರವಾರ ಮಧ್ಯಾಹ್ನ ಊಟದ ಬಳಿಕ ಬಾಲಕಿ ನೀರು ತನ್ನ ಬಾಟಲಿಯಲ್ಲಿರುವ ನೀರು ಕುಡಿದಿದ್ದಾಳೆ. ಈ ವೇಳೆ ಆಕೆಗೆ ತನ್ನ ಬಾಟಲಿಯಲ್ಲಿ ಇರುವುದು ನೀರಲ್ಲ ಮೂತ್ರ ಎಂಬುದು ತಿಳಿದು ಬಂದಿದೆ.
ಬಳಿಕ ತನ್ನ ಬ್ಯಾಗಿನ ಮೇಲೆ ಐ ಲವ್ ಯೂ ಎಂದು ಬರೆರಿದುವುದನ್ನು ಗಮನಿಸಿದ ಬಾಲಕಿಯು ಕೂಡಲೇ ಈ ವಿಚಾರವನ್ನು ತಮ್ಮ ಶಾಲೆಯ ಪ್ರಾಂಶುಪಾಲರಿಗೆ ತಿಳಿಸಿದ್ದಾಳೆ. ಆದರೆ, ಪ್ರಾಂಶುಪಾಲರು ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ವಿದ್ಯಾರ್ಥಿಯನ್ನು ವಾಪಸ್ ಕಳುಹಿಸಿದ್ದಾರೆ.
ಈ ವಿಚಾರ ತಿಳಿದ ವಿದ್ಯಾರ್ಥಿನಿಯ ಪೋಷಕರು ಹಾಗು ಜಾತಿ ಮುಖಂಡರು ಮೊದಲಿಗೆ ಪ್ರತಿಭಟನೆ ನಡೆಸಿ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದಾದ ಕೆಲ ಕ್ಷಣದ ಬಳಿಕ ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಉದ್ರಿಕ್ತರ ಗುಂಪು ನ್ಯಾಯ ಸಿಗುವವರೆಗು ಹೋರಾಟ ನಿಲ್ಲಿಸುವುದಿಲ್ಲ ಎಂದು ಆಗ್ರಹಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಹಾಗೂ ಶಾಲೆಯ ಪ್ರಾಂಶುಪಾಲ ತಲೆಮಾರಿಸಿಕೊಂಡಿದ್ದು, ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಲು ಹಿಂಜರಿಯುತ್ತಿದ್ದಾರೆ ಎಂದು ವರದಿಯಾಗಿದೆ.