

ಬೆಂಗಳೂರು: ದೇಶದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದ್ದು, ಈ ಮದ್ಯೆ ಕರ್ನಾಟಕ ಮಿಲ್ಕ್ ಫೆಡರೇಷನ್(KMF) ಆಗಷ್ಟ್ 1ರಿಂದ ಜಾರಿಗೆ ಬರುವಂತೆ ಹಾಲಿನ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಹಾಲಿನ ದರ ಹೆಚ್ಚಳದ ಶಾಕ್ನಿಂದ ಜನತೆ ಹೊರಬರುವುದಕ್ಕು ಮುನ್ನವೇ ಇದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು, ಈ ಸುದ್ದಿಯಂತು ತಿಂಡಿ ಪ್ರಿಯರಿಗೆ ದೊಡ್ಡ ಆಘಾತ ಒಂದನ್ನು ನೀಡಿದೆ.
ನಂದಿನ ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ, ಟೀ, ತಿಂಡಿ, ಊಟದ ಬೆಲೆ ಏರಿಕೆ ಮಅಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಲಾಗಿದೆ. ನಾಳೆಯಿಂದ ಜಾರಿಗೆ ಬರುವಂತೆ ಹೋಟೆಲ್ ತಿಂಡಿಗಳ ದರ ಕುಡ ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಬೆಲೆ ಏರಿಕೆ ಸಾಧ್ಯತೆ ದಟ್ಟವಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದಂತು ಗ್ಯಾರಂಟಿ ಎಂದು ಹೇಳಲಾಗಿದೆ.
ಶೇ. 10ರಷ್ಟು ದರ ಏರಿಕೆ ಮಾಡಲು ನಿರ್ಧರಿಸಿಲಾಗಿದ್ದು, ಆಯಾ ದರ್ಶಿನಿ, ಹೋಟೆಲ್ ನಿರ್ಧಾರಕ್ಕೆ ತಕ್ಕಂತೆ ರೇಟ್ ಹೈಕ್ ಮಾಡಲು ಚಿಂತನೆ ನಡೆದಿದೆ. ಕೇವಲ ಹಾಲಿನ ಬೆಲೆ ಮಾತ್ರವಲ್ಲ, ತರಕಾರಿ, ದವಸ ಧಾನ್ಯಗಳ ಬೆಲೆ ಹೆಚ್ಚಳದ ಕಾರಣ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೋಟೆಲ್ ಮಾಲೀಕರ ಸಂಘಟನೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.