

ಹೈದರಾಬಾದ್: ಮಕರ ಸಂಕ್ರಾಂತಿ ಹಬ್ಬ ಎಳ್ಳು ಬೆಲ್ಲವನ್ನು ಹಂಚಿ ಗಾಳಿಪಟ ಹಾರಿಸುವ ಪದ್ಧತಿ ಕೂಡಾ ಬೆಸೆದುಕೊಂಡಿದೆ. ಹಬ್ಬದ ಸಂಭ್ರಮದಲ್ಲಿದ್ದ ಬಾಲಕ ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಅತ್ತಾಪುರ ಪ್ರದೇಶದಲ್ಲಿ ನಡೆದಿದೆ.
ತನಿಷ್ಕ್ (11) ಮೃತ ಮೃತ. ಗಾಳಿಪಟ ಹಾರಿಸುವ ಖಷಿಯಲ್ಲಿ ಪುಟ್ಟ ಬಾಲಕ ಮನೆಯ ಟೆರೇಸ್ ಮೇಲೆ ಹೋಗಿದ್ದಾನೆ. ಗಾಳಿ ಪಟ ಹಾರಿಸುವ ವೇಳೆ ಗಾಳಿ ಪಟದ ದಾರ ವಿದ್ಯುತ್ ತಂತಿಗೆ ಸಿಲುಕಿಕೊಂಡಿದೆ. ಅದನ್ನು ಬಿಡಿಸಲು ಹೋದಾಗ ಬಾಲಕಿನಿಗೆ ವಿದ್ಯುತ್ ಪ್ರವಹಿಸಿದೆ. ತಕ್ಷಣ ಬಾಲಕ ಕಿರುಚಿಕೊಂಡಿದ್ದಾನೆ.
ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತಪಟ್ಟಿರುವುದು ಹಬ್ಬದ ಮನೆಯಲ್ಲಿ ಸೂತಕದ ವಾತಾವಾರಣಕ್ಕೆ ಕಾರಣವಾಗಿದೆ.