

ಅಪ್ಪ ಅಮ್ಮನೊಂದಿಗೆ ಖುಷಿಯಾಗಿ ಪಿಕ್ನಿಕ್ಗೆ ಹೋಗಿದ್ದ ಮೂರು ವರ್ಷದ ಪುಟ್ಟ ಮಗುವಿನ ಬದುಕು ಇದೀಗ ತೀರ ದಯನೀಯ ಸ್ಥಿತಿಯಲ್ಲಿದೆ.
ಈ ಪುಟ್ಟ ಮಗುವಿನ ಹೆಸರು ಲೆವಿಸ್ ವೈಸ್. ಲಂಡನ್ನ ಲೈಟ್ವಾಟರ್ ಕಂಟ್ರಿ ಪಾರ್ಕ್ಗೆ ತನ್ನ ತಂದೆ-ತಾಯಿಯ ಜತೆ ಪಿಕ್ನಿಕ್ಗೆ ಹೋಗಿದ್ದ. ಆದರೆ ಅಲ್ಲಿಯೇ ಅವನಿಗೆ ಒಂದು ದುರಂತ ಕಾದಿತ್ತು. ಆ ಪುಟ್ಟ ಮಗುವಿನ ಕಾಲಿಗೆ ಅತ್ಯಂತ ವಿಷಕಾರಿ ಆ್ಯಡರ್ ಹಾವು ಕಚ್ಚಿದೆ.
ಲೆವಿಸ್ ಅಲ್ಲೇ ಹುಲ್ಲಿನ ಮೇಲೆ ಗೊಂಬೆಯಾಟ ಆಡುತ್ತಿದ್ದ. ಗೊಂಬೆಯನ್ನು ಎಸೆದು ಅದನ್ನು ಹುಡುಕಲೆಂದು ಹುಲ್ಲಿನ ಮೇಲೆ ಹೋಗುತ್ತಿದ್ದವನ ಕಾಲಿಗೆ ಹಾವು ಕಚ್ಚಿದೆ. ಆದರೆ ಅದೆಷ್ಟು ವಿಷಕಾರಿ ಹಾವು ಎಂದರೆ, ಆ ಮಗು ಪಾರ್ಶ್ವವಾಯುವಿಗೆ ಒಳಗಾಗಿದ್ದಾನೆ.
ತನ್ನ ಮಗುವಿಗೆ ಹಾವು, ಕಚ್ಚಿ ನರಳಾಡುತ್ತಿದ್ದರೂ ಅವನ ಅಪ್ಪ ಒಳ್ಳೆಯ ಕೆಲಸವೊಂದನ್ನು ಮಾಡಿದ್ದಾರೆ. ಪಾರ್ಕ್ಗೆ ಮಕ್ಕಳೊಂದಿಗೆ ಆಗಮಿಸಿ ಆಡುತ್ತಿದ್ದ ಉಳಿದ ಪಾಲಕರಿಗೆ ಹಾವಿನ ಬಗ್ಗೆ ಎಚ್ಚರಿಸಿದ್ದಾರೆ. ಇಲ್ಲಿ..ಹಾವಿದೆ ಮಕ್ಕಳನ್ನು ಬಿಡಬೇಡಿ ಎಂದು ಕೂಗಿ ಹೇಳಿದ್ದಾರೆ. ಆದರೆ ಹಾವು ಕಚ್ಚಿದ ಕೆಲವೇ ಕ್ಷಣದಲ್ಲಿ ಲೆವಿಸ್ ಕಾಲು ಕಪ್ಪುಬಣ್ಣಕ್ಕೆ ತಿರುಗಿತು. ಊದಿಕೊಳ್ಳಲಾರಂಭಿಸಿತ್ತು.
ಲೇವಿಸ್ ತಂದೆ ಡೇನಿಯಲ್ ಅವರು ಸ್ಥಳೀಯ ಮಾಧ್ಯಮಕ್ಕೆ ಘಟನೆಯ ಬಗ್ಗೆ ವಿವರಿಸಿದ್ದಾರೆ. ನನ್ನ ಮಗ ಗೊಂಬೆ ಹುಡುಕುತ್ತ ಹೋಗುತ್ತಿದ್ದವನು ಬಹುಶ್ಯಃ ಹಾವನ್ನು ಮೆಟ್ಟಿದ್ದಾನೆ. ತಕ್ಷಣವೇ ಅದು ಅವನ ಕಾಲಿಗೆ ಕಚ್ಚಿದೆ. ಅತ್ಯಂತ ನೋವಿನಿಂದ ಒದ್ದಾಡುತ್ತಿದ್ದ. ಅದಕ್ಕೂ ಹೆಚ್ಚಾಗಿ ಅವನ ಹೃದಯಬಡಿತ ವಿಪರೀತವಾಗಿತ್ತು. ಅವನು ಅದೆಷ್ಟರ ಮಟ್ಟಿಗೆ ಟೆನ್ಷನ್ ಆಗಿದ್ದ ಅಂದರೆ ಅವನನ್ನು ಸಮಾಧಾನ ಮಾಡುವುದೇ ದೊಡ್ಡ ಸವಾಲಾಗಿ ಹೋಯಿತು ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಮುಖಂಡನ ಕೊಲೆ ಬೆನ್ನಲ್ಲೇ ಮತ್ತೊಬ್ಬ ಮುಖಂಡನ ಕಿಡ್ನಾಪ್!
ಅವನ ಮೈಯಲ್ಲಿ ವಿಷ ಏರದಂತೆ ಪ್ರಾಥಮಿಕ ಚಿಕಿತ್ಸೆ ಮಾಡಿ ಸಮೀಪದ ಆಸ್ಪತ್ರೆಗೆ ಸೇರಿಸಿದೆವು. ಲೆವಿಸ್ ಕಾಲುಗಳು ಕಪ್ಪುಬಣ್ಣಕ್ಕೆ ತಿರುಗಿವೆ. ತೊಡೆಸಂದಿನವರೆಗೂ ಊದಿದೆ. ಅವನಿಗೆ ಮೂರು ಬಾಟಲಿಗಳಷ್ಟು ಆ್ಯಂಟಿವೆನೋಮ್ ನೀಡಲಾಯಿತು. ಇನ್ನೂ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದಾನೆ. ಅವನಿಗೆ ಪ್ಯಾರಾಲಿಸಿಸ್ ಅಟ್ಯಾಕ್ ಆಗಿದ್ದು, ಒಂದು ಸ್ವಲ್ಪವೂ ಚಲನೆ ಸಾಧ್ಯವಾಗುತ್ತಿಲ್ಲ. ವೈದ್ಯರು ಅವನನ್ನು ಗುಣಪಡಿಸುವ ಭರವಸೆ ನೀಡಿದ್ದಾರೆ ಎಂದು ಡೇನಿಯಲ್ ತಿಳಿಸಿದ್ದಾರೆ.
ಆ್ಯಡರ್ ತಣ್ಣನೆಯ ರಕ್ತದ ಹಾವು. ಸಾಮಾನ್ಯವಾಗಿ ಬಿಸಿಲು ಬಿದ್ದಾಗ ಹೊರಗೆ ಬಿಸಲಲ್ಲಿ ಬಂದು ಮಲಗುತ್ತವೆ. ಹಾಗೇ ಪಾರ್ಕ್ನಲ್ಲಿ ಇತ್ತು ಎಂದಿದ್ದಾರೆ. (ಏಜೆನ್ಸೀಸ್)
ಇದನ್ನೂ