

ಜಮ್ಮು: ಕಳೆದ ವಾರವಷ್ಟೇ (ಜುಲೈ 8) ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಕಾರ್ಯಕಾರಿ ಸದಸ್ಯ ವಾಸೀಂ ಬರಿ ಅವರನ್ನು ಬಂಡಿಪೋರಾದ ಮನೆಯ ಹೊರಗೆ ಭಯೋತ್ಪಾದಕರು ಗುಂಡಿಟ್ಟು ಹತ್ಯೆಗೈದಿದ್ದರು.
ಇದರ ಸುದ್ದಿ ಆರುವ ಮುನ್ನವೇ ಇದೀಗ ಜಮ್ಮು-ಕಾಶ್ಮೀರ್ ಸೋಪೋರ್ ಜಿಲ್ಲೆಯ ವಾಟರ್ಗಾಮ್ ಮುನ್ಸಿಪಲ್ ಸಮಿತಿಯ ಉಪಾಧ್ಯಕ್ಷ, ಬಿಜೆಪಿ ಮುಖಂಡ ಮೆಹ್ರಾಜುದ್ದೀನ್ ಮಲ್ಲಾ ಅವರನ್ನು ಅಪಹರಿಸಲಾಗಿದೆ.
ಇದನ್ನೂ ಓದಿ: ಹಿಂದೂ ಯುವಕನ ಗಂಟಲು ಸೀಳಿ ನದಿಗೆ ಎಸೆದ ಪಾಕ್ ಪಾಪಿಗಳು!
ಇಂದು ಬೆಳಗ್ಗೆ ಈ ಅಪರಹಣ ನಡೆದಿದ್ದು, ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿ ಖಚಿತಪಡಿಸಿದ್ದಾರೆ. ಅವರು ಮನೆ ಸಮೀಪದ ರಸ್ತೆ ಬಳಿ ನಿಂತಿದ್ದಾಗ ಬೆಳಗ್ಗೆ ಎಂಟೂವರೆ ಹೊತ್ತಿಗೆ ಕೆಲವು ಅಪರಿಚಿತ ವ್ಯಕ್ತಿಗಳು ಆಗಮಿಸಿ ಬಲವಂತವಾಗಿ ಎಳೆದೊಯ್ದಿದ್ದು, ಈವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಆರೋಪಿಗಳ ಬಂಧನಕ್ಕಾಗಿ ಭದ್ರತಾ ಪಡೆಯ ನೆರವು ಕೋರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೋಪೋರಾದ ಎಲ್ಲಾ ಪ್ರವೇಶ ದ್ವಾರ ಮತ್ತು ಹೊರ ಹೋಗುವ ದಾರಿಗಳಲ್ಲಿ ಬಿಗಿ ಭದ್ರತೆಯಲ್ಲಿ ಕಣ್ಗಾವಲು ಇಡುವಂತೆ ಪೊಲೀಸರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.