Saweety Boora: ಭಾರತದ ಮಾಜಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತೆ ಸವೀತಿ ಬೂರಾ, ತಮ್ಮ ಪತಿಯಾದ ಮಾಜಿ ಭಾರತೀಯ ಕಬಡ್ಡಿ ಆಟಗಾರ, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ದೀಪಕ್ ಹೂಡಾ ಮತ್ತು ಅವರ ಕುಟುಂಬದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಗೊತ್ತಾಯಿದೆ. ಇಬ್ಬರ ನಡುವೆ ಯಾವುದೂ ಸರಿಯಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಸವೀತಿ, ಪತಿಯಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದರು. ಪೊಲೀಸ್ ಠಾಣೆಯಲ್ಲಿ ತಮ್ಮ ಕುಟುಂಬಸ್ಥರ ಜತೆಗೆ ಕುಳಿತಿದ್ದ ಸವೀತಿ, ಪತಿಯ ಮಾತಿಗೆ ಕೆರಳಿ ಏಕಾಏಕಿ ಥಳಿಸಲು ಮುಂದಾಗಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ವಿಜಯಪುರ ಮಹಾನಗರ ಪಾಲಿಕೆ ಸದಸ್ಯರಿಗೆ ಶಾಕ್, ಪ್ರಾದೇಶಿಕ ಆಯುಕ್ತರಿಂದ ಮಹತ್ವದ ಆದೇಶ, ಎಲ್ಲ ಸದಸ್ಯರ ಸದಸ್ಯತ್ವ ರದ್ದು !
ವಿಚ್ಛೇದನ ಅರ್ಜಿ ಸಲ್ಲಿಸಿ ಕೆಲವು ದಿನಗಳಷ್ಟೇ ಕಳೆದಿದೆ. ಪ್ರಸ್ತುತ ಅರ್ಜಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಮಧ್ಯೆಯೇ ಇಬ್ಬರ ನಡುವೆ ಗುದ್ದಾಟ ನಡೆದಿರುವುದು ಇಬ್ಬರ ಕುಟುಂಬಸ್ಥರಲ್ಲಿ ಬೇಸರ ತಂದಿದೆ. ಅಸಲಿಗೆ ಈ ಘಟನೆ ಮಾರ್ಚ್ 15ರಂದು ಹರಿಯಾಣದ ಹಿಸಾರ್‌ನ ಪೊಲೀಸ್ ಠಾಣೆಯಲ್ಲಿ ಸಂಭವಿಸಿರುವುದು ಎಂದು ವರದಿಯಾಗಿದೆ. ಠಾಣೆಯೊಳಗೆ ತಮ್ಮ ಪೋಷಕರೊಂದಿಗೆ ಕುಳಿತಿದ್ದ ಸವೀತಿ, ತನ್ನ ಎದುರಿಗಿದ್ದ ಪತಿ ದೀಪಕ್ ಜತೆಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಮಾಜಿ ವಿಶ್ವ ಚಾಂಪಿಯನ್, ಏಕಾಏಕಿ ಪತಿಯ ಶರ್ಟ್ ಹಿಡಿದು ಥಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಪೊಲೀಸ್ ದೂರು ಕೊಟ್ಟಿದ್ದೇಕೆ?
ಹೆಚ್ಚುವರಿ ವರದಕ್ಷಿಣೆ ಬೇಡಿಕೆ ಇಟ್ಟಿದ್ದಕ್ಕಾಗಿ ಸವೀತಿ ಪತಿ ವಿರುದ್ಧ ದೂರು ದಾಖಲಿಸಿದ್ದರು ಎಂದು ಮೂಲಗಳು ತಿಳಿಸಿವೆ. ಸವೀತಿ ನೀಡಿರುವ ದೂರಿನ ಆಧಾರದ ಮೇರೆಗೆ ಪತಿ ದೀಪಕ್ ಹೂಡಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹರಿಯಾಣದ ಹಿಸಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು.
ಇದನ್ನೂ ಓದಿ: ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ
ವಿಚ್ಛೇದನಕ್ಕೆ ಕಾರಣವೇನು?
ದೀಪಕ್ ಹೂಡಾ ಹೆಚ್ಚುವರಿ ವರದಕ್ಷಿಣೆ ಜತೆಗೆ ತಮ್ಮಿಂದ ದುಬಾರಿ ಮೌಲ್ಯದ ಫಾರ್ಚೂನರ್ ಕಾರನ್ನು ವರದಕ್ಷಿಣೆ ರೂಪದಲ್ಲಿ ಕೇಳಿ, ನನ್ನನ್ನು ಪೀಡಿಸುತ್ತಿದ್ದಾರೆ ಎಂದು ಸವೀತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಬೆನ್ನಲ್ಲೇ ದೀಪಕ್ ಹೂಡಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 85ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
🚨 World Champion Boxer Saweety Bora tried to assault her husband Kabbadi Star Deepak Hooda in Police Station
They have reportedly filed for divorce!pic.twitter.com/TNEkdVujvU https://t.co/lzyyjeLv3W
— The Khel India (@TheKhelIndia) March 25, 2025
ಪತಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಕುಟುಂಬದಿಂದ ವರದಕ್ಷಿಣೆಯಾಗಿ ಒಂದು ಎಸ್‌ಯುವಿ ಕಾರು ಮತ್ತು 1 ಕೋಟಿ ರೂ. ಹಣ ಕೊಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎಂದು ಸವೀತಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಸವೀತಿ ಅವರ ಪತಿ ಹೂಡಾ, ಬೂರಾ ಅವರ ಕುಟುಂಬವು ತನ್ನ ಆಸ್ತಿಯನ್ನು ಕಬಳಿಸಿ ಬೆದರಿಕೆ ಹಾಕಿದೆ ಎಂದು ಆರೋಪಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).