ಮದ್ವೆಗೆ ಮನೆಯವ್ರು ಒಪ್ಲಿಲ್ಲ ಅಂತ ಪ್ರಿಯಕರ ನೇಣು ಹಾಕಿಕೊಂಡ; ಪ್ರೇಮಿ ಸತ್ತಿದ್ದಕ್ಕೆ ಊಟ ಬಿಟ್ಟ ಪ್ರೇಯಸಿ ಬೆಂಕಿ ಹಾಕಿಕೊಂಡು ಸತ್ತಳು..!

Lovers
ಸಾಂದರ್ಭಿಕ ಚಿತ್ರ
Published on

ಚೆನ್ನೈ: ಇದೊಂದು ಅತಿ ದುಃಖಾಂತ್ಯದ ಪ್ರೇಮಕಥೆ. ಮದುವೆಯಲ್ಲಿ ಸುಖಾಂತ್ಯವಾಗಬೇಕಿದ್ದ ಈ ಪ್ರೇಮಿಗಳಿಬ್ಬರ ಬದುಕು ಆತ್ಮಹತ್ಯೆಯಲ್ಲಿ ಕೊನೆಗೊಂಡಿದೆ. ಪ್ರೀತಿಸುತ್ತಿದ್ದ ಇಬ್ಬರೂ ಒಬ್ಬರ ಹಿಂದೊಬ್ಬರಂತೆ ಪ್ರಾಣತ್ಯಾಗ ಮಾಡಿದ್ದಾರೆ.

ತಮಿಳುನಾಡಿನ ಚೆನ್ನೈನಲ್ಲಿನ 20 ವರ್ಷದ ವಿದ್ಯಾರ್ಥಿನಿ ಎಂ. ಸುಜಾತಾ ಹಾಗೂ 24 ವರ್ಷದ ಯುವಕ ಸಿಲಂಬರಸನ್​ ಸಂಬಂಧಿಗಳಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸುಜಾತಾ ಜತೆ ಮದುವೆ ಆಗುವುದಕ್ಕೆ ಸಿಲಂಬರಸನ್ ಮನೆಯವರ ವಿರೋಧವಿತ್ತು. ಅತ್ತ ಮನೆಯವರನ್ನು ಒಪ್ಪಿಸಲಾಗದೆ, ಇತ್ತ ಸುಜಾತಾಳನ್ನು ಬಿಟ್ಟಿರಲಾಗದೆ ಇಕ್ಕಟ್ಟಿಗೆ ಸಿಲುಕಿದ ಸಿಲಂಬರಸನ್​ ದಿಕ್ಕೆಟ್ಟು ಚಿತ್ತೂರಿನಲ್ಲಿರುವ ತನ್ನ ಮನೆಯಲ್ಲಿ ಫೆ. 22ರಂದು ನೇಣು ಹಾಕಿಕೊಂಡು ಮೃತಪಟ್ಟಿದ್ದ.

ಪ್ರೇಮಿ ಸಿಲಂಬರಸನ್​ ಆತ್ಮಹತ್ಯೆ ಮಾಡಿಕೊಂಡು ಅಗಲಿದ್ದಕ್ಕೆ ತೀವ್ರ ಬೇಸರಗೊಂಡ ಸುಜಾತಾ ತೀರ ಖಿನ್ನತೆಗೆ ಒಳಗಾಗಿದ್ದಳು. ಮನೆ ಬದಲಿಸಿದರೆ ಸರಿಯಾಗಬಹುದು ಎಂದುಕೊಂಡು ಮನೆಯವರು ಆಕೆಯನ್ನು ಸಂಬಂಧಿಕರೊಬ್ಬರ ಮನೆಗೆ ಕಳುಹಿಸಿದ್ದರು. ಆದರೆ ಆ ಬೇಸರದಿಂದ ಹೊರಬರದ ಸುಜಾತಾ ಊಟ-ತಿಂಡಿ ತ್ಯಜಿಸಿದ್ದಳು. ಉಪವಾಸದಿಂದ ಕೃಶವಾಗಿದ್ದ ಸುಜಾತ, ಸಿಲಂಬರಸನ್ ಸತ್ತ ಒಂದೇ ವಾರಕ್ಕೆ ಸ್ವತಃ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net