More

    ಪಂಚರಾಜ್ಯಗಳ ಚುನಾವಣೆ: ಚುನಾವಣಾ ಪೂರ್ವ ಸಮೀಕ್ಷೆಗಳು ಏನು ಹೇಳುತ್ತವೆ?

    ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭೆಗೆ ದಿನಾಂಕವನ್ನು ಪ್ರಕಟಿಸಿದೆ. ಮಾರ್ಚ್​ 27 ರಿಂದ ಏಪ್ರೀಲ್ 29ರವರೆಗೆ ಐದೂ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

    ಈಗಾಗಲೇ ಈ ಐದೂ ರಾಜ್ಯಗಳಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಬೇಕು ಎಂದು ಬಿಜೆಪಿ ಹವಣಿಸುತ್ತಿದೆ. ಅದೇ ರೀತಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಅಲ್ಲಿಯೂ ಅಧಿಕಾರದ ಕನಸು ಕಾಣುತ್ತಿದೆ. ಕೇರಳದಲ್ಲಿಯೂ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಅಸ್ಸಾಂ ಹಾಗೂ ಪುದುಚೇರಿ ಬಿಜೆಪಿಗೆ ಸುಲಭದ ತುತ್ತಾಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ.

    ಈ ಕುರಿತು ಎಬಿಪಿ ನ್ಯೂಸ್, ಐಎಎನ್​ಎಸ್​ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು, ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿಯೇ ಜಯಶಾಲಿಯಾಗಲಿದ್ದು, ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದಿವೆ. ಕೇರಳದಲ್ಲಿ ಎಡರಂಗಗಳ ಸರ್ಕಾರ ಬರಲಿದ್ದು, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದಿವೆ.

    ಎಬಿಪಿ ನ್ಯೂಸ್ ಸಮೀಕ್ಷೆ
    ಕೇರಳ: ಒಟ್ಟು ಸ್ಥಾನ 141, ಎಲ್​ಡಿಎಫ್-83 ರಿಂದ 90, ಯುಡಿಎಫ್-47 ರಿಂದ 55, ಬಿಜೆಪಿ-2
    ತಮಿಳುನಾಡು: ಒಟ್ಟು ಸ್ಥಾನ 234, ಡಿಎಂಕೆ ಮತ್ತು ಕಾಂಗ್ರೆಸ್ 154 ರಿಂದ 162, ಎಐಎಡಿಎಂಕೆ ಮತ್ತು ಬಿಜೆಪಿ 58 ರಿಂದ 66
    ಪಶ್ಚಿಮ ಬಂಗಾಳ: ಒಟ್ಟು ಸ್ಥಾನ 294, ಟಿಎಂಸಿ-148 ರಿಂದ 164, ಬಿಜೆಪಿ 92 ರಿಂದ 108, ಕಾಂಗ್ರೆಸ್ ಮತ್ತು ಇತರೆ 31 ರಿಂದ 39
    ಅಸ್ಸಾಂ: ಒಟ್ಟು ಸ್ಥಾನ 126: ಬಿಜೆಪಿ 68 ರಿಂದ 76, ಕಾಂಗ್ರೆಸ್ 43 ರಿಂದ 51, ಇತರರು 5 ರಿಂದ 10
    ಪುದುಚೇರಿ: ಒಟ್ಟು ಕ್ಷೇತ್ರ 33; ಬಿಜೆಪಿ 17 ರಿಂದ 21, ಕಾಂಗ್ರೆಸ್ 12

    ಐಎಎನ್​ಎಸ್​ ಸಮೀಕ್ಷೆ
    ಕೇರಳ: ಎಲ್​ಡಿಎಫ್-87, ಯುಡಿಎಫ್ 51, ಬಿಜೆಪಿ 1
    ತಮಿಳುನಾಡು: ಡಿಎಂಕೆ+ಕಾಂಗ್ರೆಸ್-158, ಎಐಎಡಿಎಂಕೆ 62
    ಪಶ್ಚಿಮ ಬಂಗಾಳ: ಟಿಎಂಸಿ-156, ಬಿಜೆಪಿ 100, ಕಾಂಗ್ರೆಸ್+35
    ಅಸ್ಸಾಂ: ಬಿಜೆಪಿ-72, ಕಾಂಗ್ರೆಸ್ 47, ಇತರರು 7
    ಪುದುಚೇರಿ: ಬಿಜೆಪಿ 19, ಕಾಂಗ್ರೆಸ್ 10

    ಕೇರಳದಲ್ಲಿ ಕೇಸರಿ ಅಲೆ ಆರಂಭ! ಇಬ್ಬರು ಮಾಜಿ ನ್ಯಾಯಮೂರ್ತಿಗಳು ಸೇರಿ 18 ಮಂದಿ ಬಿಜೆಪಿ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts