ನಿನ್ನೆ ಮೊಮ್ಮಗ, ಇಂದು ಅಜ್ಜ ಹುಲಿದಾಳಿಗೆ ಬಲಿ; ಇಬ್ಬರನ್ನು ಕೊಂದ ಹುಲಿಯನ್ನು ಶೂಟ್ ಮಾಡಿ ಸಾಯಿಸಿ ಎಂದು ಪಟ್ಟುಹಿಡಿದ ಜನರು

ಕೊಡಗು: ಒಬ್ಬರ ಸಾವಿನ ಬೆನ್ನಿಗೇ ಇನ್ನೊಬ್ಬರು ಸಾವಿಗೀಡಾಗುವ ಮೂಲಕ ಇಲ್ಲೊಂದು ಕುಟುಂಬದ ಪಾಲಿಗೆ ಆಘಾತದ ಮೇಲೆ ಆಘಾತ ಎದುರಾಗಿದ್ದು, ತೀವ್ರ ಶೋಕ ಆವರಿಸಿಕೊಂಡುಬಿಟ್ಟಿದೆ. ಅಂದರೆ ನಿನ್ನೆ ಹುಲಿದಾಳಿಗೆ ಬಲಿಯಾದ ಮೊಮ್ಮಗನ ಅಂತಿಮದರ್ಶನಕ್ಕೆ ಬಂದಿದ್ದ ಅಜ್ಜನೂ ಇಂದು ಹುಲಿದಾಳಿಯಿಂದಾಗಿ ಸಾವಿಗೀಡಾಗಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಡ ಸಮೀಪದ ನಾಲ್ಕೇರಿ ಗ್ರಾಮದಲ್ಲಿ ಎನ್.ಪೂಣಚ್ಚ ಎಂಬವರಿಗೆ ಸೇರಿದ ತೋಟಕ್ಕೆ ಕಾಫಿ ಕೊಯ್ಲು ಮಾಡಲು ವೀರಹೊಸನಹಳ್ಳಿ ಸೊಳ್ಳೆಪುರ ನಿವಾಸಿ ಚೇತನ್ (18) ಬಂದಿದ್ದ. ಆದರೆ ತೋಟದ ಸಮೀಪ ಸಂಜೆ ನಾಲ್ಕು ಗಂಟೆ ಸುಮಾರಿಗೆ ಹುಲಿ ಮೈಮೇಲೆರಗಿ ಚೇತನ್ ಸಾವಿಗೀಡಾಗಿದ್ದ.

ಚೇತನ್ ವೀಣಾಕುಮಾರಿ ಎಂಬವರ ಮಗನಾಗಿದ್ದು, ಈಕೆಯ ತಂದೆ ರಾಜು ತಮ್ಮ ಮೊಮ್ಮಗನ ಸಾವಿನ ಸುದ್ದಿ ಕೇಳಿ ಆತನನ್ನು ನೋಡಲು ಬಂದಿದ್ದರು. ಹಾಗೆ ಬಂದವರು ಲೈನ್​ಮನೆಯಲ್ಲಿ ಉಳಿದುಕೊಂಡಿದ್ದರು. ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದ ರಾಜು ಮೇಲೆ ಕೂಡ ಹುಲಿ ದಾಳಿ ಮಾಡಿದ್ದು, ಅವರು ಸಾವಿಗೀಡಾದರು.

ಇದನ್ನೂ ಓದಿ: ಯುವಕನ ಮೇಲೆ ಹುಲಿ ದಾಳಿ; ಮಗನನ್ನು ಹುಡುಕಲು ಹೋದ ತಂದೆಯ ಮೇಲೂ ಎರಗಿದ ವ್ಯಾಘ್ರ!

ದಿನಕ್ಕೊಬ್ಬರಂತೆ ಇಬ್ಬರು ಹುಲಿದಾಳಿಗೆ ಬಲಿಯಾದ್ದರಿಂದ ಸ್ಥಳೀಯ ಜನರು ಆಕ್ರೋಶಗೊಂಡಿದ್ದು, ಇಬ್ಬರನ್ನು ಕೊಂದ ಹುಲಿಯನ್ನು ಶೂಟ್ ಮಾಡಿ ಸಾಯಿಸಿ ಎಂದು ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲ, ಬೆಳಗಿನಿಂದ ರಾಜು ಶವ ತೆಗೆಯದೆ ಪ್ರತಿಭಟನೆ ನಡೆಸಿದ್ದು, ಹುಲಿಯನ್ನು ಶೂಟ್ ಮಾಡಿ ಸಾಯಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹುಲಿಯನ್ನು ಸಾಯಿಸಲು ಸರ್ಕಾರದ ಆದೇಶ ಬೇಕು ಎಂದು ಅಧಿಕಾರಿಗಳು ಹೇಳಿದರೆ, ಆದೇಶ ಬರುವವರೆಗೂ ಶವ ಇರಿಸಿಕೊಂಡು ಕಾಯುವುದಾಗಿ ಆಕ್ರೋಶಿತ ಜನರು ಹೇಳಿದ್ದಾರೆ. ಪರಿಣಾಮವಾಗಿ ಪೊನ್ನಂಪೇಟೆಯ ಚೂರಿಕಾಡು ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ.

ಟರ್ಕಿಯಲ್ಲೀಗ ಇದು ಹಿಂದೆಂದಿಗಿಂತಲೂ ಭಯಂಕರ ಭೂಕಂಪ; ಸತ್ತವರ ಸಂಖ್ಯೆ 33 ಸಾವಿರಕ್ಕೂ ಅಧಿಕ

ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…