More

  ಉದ್ಯೋಗಿಗಳಿಗೆ ಹಾಗಲಕಾಯಿ ತಿನ್ನಿಸಿದ ಕಂಪನಿ; ಕಾರಣ ತಿಳಿದರೆ ಶಾಕ್ ಆಗ್ತೀರಾ…

  ಚೀನಾ: ಕಾರ್ಪೊರೇಟ್ ಕಂಪನಿ ಎಂದರೆ ಟಾರ್ಗೆಟ್ ನೀಡುವುದು ಸಾಮಾನ್ಯ. ಐಟಿ ಕಂಪನಿಗಳು ನೀಡಿದ ಗುರಿಗಳನ್ನು ಪೂರ್ಣಗೊಳಿಸಬೇಕು. ಚೀನಾದ ಕಾರ್ಪೊರೇಟ್ ಕಂಪನಿಯ ಉದ್ಯೋಗಿಗಳಿಗೆ ಕೆಲಸದ ಒತ್ತಡ, ಟಾರ್ಗೆಟ್​​ ಮತ್ತು ಶಿಫ್ಟ್‌ಗಳು ಸಾಮಾನ್ಯವಾಗಿದೆ. ಕೊಟ್ಟಿರುವ ಗುರಿಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕು ಎಂದು ಎಲ್ಲಾ ಕಂಪನಿಗಳು ಕಟ್ಟುನಿಟ್ಟಾಗಿ ಹೇಳುತ್ತವೆ. ಇಲ್ಲದಿದ್ದರೆ ಇನ್ಕ್ರಿಮೆಂಟ್ ಇರುವುದಿಲ್ಲ. ಬಡ್ತಿ ಇರುವುದಿಲ್ಲ, ಉದ್ಯೋಗವೂ ಕೈ ತಪ್ಪಬಹುದು. ಆದರೆ ಇಲ್ಲೊಂದು ಕಂಪನಿ ನೀಡಿರುವ ಶಿಕ್ಷೆ ಮಾತ್ರ ವಿಚಿತ್ರವಾಗಿದೆ.

  ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ವಿಚಿತ್ರ ಶಿಕ್ಷೆ ನೀಡಿದೆ. ಕಂಪನಿ ನೀಡಿದ ಟಾರ್ಗೆಟ್​​​ ಮುಟ್ಟದ ಉದ್ಯೋಗಿಗಳಿಗೆ ಮೇಲಧಿಕಾರಿಗಳು ಕಹಿ ಹಾಗಲಕಾಯಿ ತಿನ್ನಿಸಿದ್ದಾರೆ. ಉದ್ಯೋಗಿಯೊಬ್ಬರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ನಂತರ ವಿಷಯ ಬೆಳಕಿಗೆ ಬಂದಿದೆ.

  ಇದನ್ನೂ ಓದಿ: ಬೆಲೆ ಏರಿಕೆಯ ಬಿಸಿ ನಡುವೆ ಕೆಜಿಗೆ 60 ರೂ.ಗೆ ಮಾರಾಟವಾದ ಟೊಮ್ಯಾಟೊ; ಕೊಂಡಾಡಿದ ಜನತೆ 

  ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಶಿಕ್ಷಣ ಮತ್ತು ತರಬೇತಿ ಕಂಪನಿಯಾಗಿರುವ ಸುಝೌ ದನಾವೊ ಫಂಗ್ಚೆಂಗ್ಶಿ ಮಾಹಿತಿ ಸಲಹಾ ಕಂಪನಿಯು ತನ್ನ ಅನೇಕ ಉದ್ಯೋಗಿಗಳಿಗೆ ನೀಡಿದ ಟಾರ್ಗೆಟ್​​​ ತಲುಪಿಲ್ಲ ಅಂತಾ ಹಸಿ ಹಾಗಲಕಾಯಿಯನ್ನು ತಿನ್ನುವಂತೆ ಒತ್ತಾಯಿಸಿತು. ಜಾಂಗ್ ಎಂಬ ಉದ್ಯೋಗಿ ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ವೈರಲ್ ಆಗಿದೆ. ಈ ವಿಚಿತ್ರ ಶಿಕ್ಷೆಗೆ ನೆಟಿಜನ್‌ಗಳು ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.

  ಇದನ್ನೂ ಓದಿ: ತಾಯಿಯನ್ನು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿದ ಆಧುನಿಕ ಶ್ರವಣಕುಮಾರ; ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

  ಕಂಪನಿಯ ಆಡಳಿತ ಮಂಡಳಿಯನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಇದು ಕಂಪನಿಯ ಪ್ರತಿಫಲ ಮತ್ತು ಶಿಕ್ಷೆ ನೀತಿಯ ಭಾಗವಾಗಿದೆ ಎಂದು ಮ್ಯಾನೇಜ್‌ಮೆಂಟ್ ಹೇಳುತ್ತದೆ. ನೌಕರರಿಗೆ ಕೆಲಸ ನೀಡಿದರೂ, ಅದಕ್ಕೆ ಗಡುವು ನೀಡಿದರೂ ಕಾಮಗಾರಿ ಪೂರ್ಣಗೊಳಿಸದ ಕಾರಣ ಈ ರೀತಿ ಶಿಕ್ಷೆ ನೀಡಲಾಗಿದೆ ಎನ್ನಲಾಗಿದೆ.

  19 ವರ್ಷದ ನಂತರ ಮರಳಿ ಬಂದ ಪತ್ನಿ ಜತೆ ಮತ್ತೆ ಮದುವೆಯಾದ ಪತಿ; ಅಸಲಿ ಕಥೆ ಇಂತಿದೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts