ಕಾಶೀ ಮಠಾಧೀಶರಿಂದ ಸೀಮೋಲ್ಲಂಘನೆ

gan (9)
Published on

ಕುಂದಾಪುರ: ಇಲ್ಲಿನ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ ವ್ರತ ಸಂಪನ್ನದ ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನ ಭಾನುವಾರ ನೆರವೇರಿತು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿ ತೀರ್ಥದಲ್ಲಿ ಮೃತ್ತಿಕಾ ವಿಸರ್ಜನೆ ನೆರವೇರಿದ್ದು, ಬಳಿಕ ನಡೆದ ಸೀಮೋಲ್ಲಂಘನಕ್ಕಾಗಿ ಹೆಮ್ಮಾಡಿ ಶ್ರೀ ಕಾಶೀ ಮಠಕ್ಕೆ ಭೇಟಿ ನೀಡಿದರು. ಸಂಜೆ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಮಂದಿರದಲ್ಲಿ ಚಾತುರ್ಮಾಸ ವ್ರತದ ಧರ್ಮಸಭೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net