ಸಂಘದಿಂದ 175 ಕೋಟಿ ರೂ. ವ್ಯವಹಾರ ಗುರಿ

byn (1)
Published on

ವಿಜಯವಾಣಿ ಸುದ್ದಿಜಾಲ ಉಪ್ಪುಂದ

ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂವು ಆರ್ಥಿಕ ವರ್ಷದಲ್ಲಿ 149.69 ಕೋಟಿ ರೂ. ವ್ಯವಹಾರ ನಡೆಸಿದ್ದು ವಾರ್ಷಿಕ 45.23 ಲಕ್ಷ ರೂ. ಲಾಭ ಗಳಿಸಿದೆ. ಸಂದ ಸದಸ್ಯರಿಗೆ ಶೇ.12ರ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಮುಂದಿನ ಆರ್ಥಿಕ ಸಾಲಿನಲ್ಲಿ 175 ಕೋಟಿ ರೂ. ವ್ಯವಹಾರದ ಗುರಿ ಹೊಂದಿದ್ದೇವೆ ಎಂದು ಸಂ ಅಧ್ಯಕ್ಷ ಮೋಹನ ಪೂಜಾರಿ ಹೇಳಿದರು.

ಉಪ್ಪುಂದ ಶಾಲೆಬಾಗಿಲು ವಾತೃಶ್ರೀ ಸಭಾಭವನದಲ್ಲಿ ಭಾನುವಾರ ಜರುಗಿದ ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂದ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾವಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಸಂಸ್ಥೆಯ ಶ್ರೇಯೋಭಿವದ್ಧಿ ಹಾಗೂ ವಿಸ್ತರಿಸುವ ಜವಾಬ್ದಾರಿ ಅದರ ಪ್ರತಿ ಸದಸ್ಯರದ್ದೂ ಆಗಿದ್ದು, ಒಗ್ಗಟ್ಟಾಗಿ ಮುನ್ನಡೆದಾಗ ವಾತ್ರ ಅದು ಸಾಧ್ಯವಾಗಲಿದೆ. ಸಮುದಾಯದ ಜನರಿಗೆ ಉತ್ತಮ ಸೇವೆ ಒದಗಿಸುವುದರ ಮೂಲಕ ಸಂಸ್ಥೆಯು ಸವಾಜದ ಸ್ವತ್ತಾಗಲು ಶ್ರಮವಹಿಸಬೇಕಿದೆ. ಮುಂದಿನ ಆರ್ಥಿಕ ವರ್ಷಗಳಲ್ಲಿ ಸಂದ ಪ್ರಧಾನ ಕಚೇರಿಗೆ ನೂತನ ಸಹಕಾರಿ ಕಟ್ಟಡ ನಿರ್ವಾಣ, ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಶಾಖೆ ತೆರೆಯುವುದು, ವಿದ್ಯಾರ್ಥಿಗಳು ಹಾಗೂ ಸಂದ ಸದಸ್ಯರಿಗೆ ನೆರವು ಇವುಗಳ ಜತೆಗೆ ಸಂಸ್ಥೆಯಲ್ಲಿ ಠೇವಣಿ ಹಾಗೂ ಸಾಲವನ್ನು ಹೆಚ್ಚಿಸಿ ಗರಿಷ್ಠ ಲಾಭ ಗಳಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.

ಸಂ ಪ್ರಧಾನ ವ್ಯವಸ್ಥಾಪಕ ಮಹೇಶ್ ಎಚ್. ಸ್ವಾಗತಿಸಿ, ವಾರ್ಷಿಕ ವರದಿ, ಮುಂದಿನ ಸಾಲಿನ ಅಂದಾಜು ಬಜೆಟ್ ಮಂಡಿಸಿ ಅನುಮೋದನೆ ಪಡೆದರು. ಈ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸಂದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಜತೆಗೆ ಹಿಂದಿನ ಆಡಳಿತ ಮಂಡಳಿ ಸದಸ್ಯರುಗಳನ್ನು ಸನ್ಮಾನಿಸಲಾಯಿತು.

ಸಂ ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ, ನಿರ್ದೇಶಕರಾದ ಎಚ್.ನರಸಿಂಹ ಪೂಜಾರಿ, ಬಿ.ನಾರಾಯಣ ಪೂಜಾರಿ, ಎಂ. ಮಂಜ ಪೂಜಾರಿ, ರಾಜು ಪೂಜಾರಿ ಕೆರ್ಗಾಲು, ಸುರೇಶ ಪೂಜಾರಿ, ಸಂತೋಷ, ಶಾರದಾ, ಲಕ್ಷ್ಮೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net