ಮೊಗೇರ ಸಂಘದಿಂದ ಪುಸ್ತಕ ವಿತರಣೆ : ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

New Project (14)
Published on

ವಿಜಯವಾಣಿ ಸುದ್ದಿಜಾಲ ಕಡಬ

ಆಲಂಕಾರು ಮೊಗೇರ ಸಂಘ ಮಂಡಲ ವತಿಯಿಂದ ಶೈಕ್ಷಣಿಕ ಮಾಹಿತಿ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮ ಆಲಂಕಾರು ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ನಡೆಯಿತು.

ಉಳ್ಳಾಲ ಕಂದಾಯ ಇಲಾಖೆ ಉಪತಹಸೀಲ್ದಾರ ವಿಜಯ್ ವಿಕ್ರಂ ಗಾಂಧಿ ಪೇಟೆ ಉದ್ಘಾಟಿಸಿದರು. ಉಪನ್ಯಾಸಕ ಐತ್ತಪ್ಪ ಅಲೆಕ್ಕಾಡಿ ದಿಕ್ಸೂಚಿ ಭಾಷಣ ಮಾಡಿದರು. ಕುಕ್ಕೆ ಸುಬ್ರಹ್ಮಣ್ಯ ದೇವಳ ಟ್ರಸ್ಟಿ ಡಾ.ರಘು ಬೆಳ್ಳಿಪ್ಪಾಡಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಜಾತಾ ಏಕನಾಥ್ ಕೊಂಡಾಣ, ಉಪವಲಯ ಅರಣ್ಯಾಧಿಕಾರಿ ರವಿಚಂದ್ರ ಪಡುಬೆಟ್ಟು, ಉಷಾ ಕೋಡಿ, ಕರಿಯ ಗಾಣಂತಿ, ವಿಜಯ್ ಪಾಟಾಜೆ, ವಿ.ಕೆ.ಕಡಬ ಶುಭಹಾರೈಸಿದರು .

ಪೊಲೀಸ್ ಇಲಾಖೆ ಕುರಿತು ಕಡಬ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಸುಂದರ ಶೆಟ್ಟಿ, ಹೆಡ್ ಕಾನ್‌ಸ್ಟೆಬಲ್ ಹರೀಶ್ ಮತ್ತು ಮಹಿಳಾ ಪೋಲಿಸ್ ಕವಿತಾ ಬಿ. ಮಾಹಿತಿ ನೀಡಿದರು. 2025ನೇ ಸಾಲಿನಲ್ಲಿ ಡಿಸ್ಟಿಂಕ್ಷನ್ ಪಡೆದ ಐದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು. ಮೊಗೇರ ಸಂಘ ಅಧ್ಯಕ್ಷ ಬಾಲಕೃಷ್ಣ ಕೇಪುಳು ಅಧ್ಯಕ್ಷತೆ ವಹಿಸಿದ್ದರು. ಶೀನಪ್ಪ ದೇರೋಡಿ ಸ್ವಾಗತಿಸಿದರು. ಉಪಾಧ್ಯಕ್ಷ ತಾರಾನಾಥ ಕಡೀರಡ್ಕ ವಾರ್ಷಿಕ ವರದಿ ವಾಚಿಸಿದರು. ಮಹಾಬಲ ಪಡುಬೆಟ್ಟು ಪ್ರಸ್ತಾವನೆಗೈದರು. ಕೃಷ್ಣ ಗಾಣಂತಿ ವಂದಿಸಿದರು. ಸಂದೀಪ್ ಪಾಂಜೋಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net