ಬಿಜೆಪಿ ಕಾರ್ಯಕರ್ತರ ಮೇಲೆ ಬಾಂಬ್ ಧಾಳಿ

bjp
Published on

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಏರುತ್ತಿರುವಂತೆ, ಪಕ್ಷಗಳ ನಡುವಿನ ಸಂಘರ್ಷವು ಹಿಂಸಾತ್ಮಕ ತಿರುವು ಪಡೆಯುತ್ತಿದೆ. ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಆರು ಬಿಜೆಪಿ ಕಾರ್ಯಕರ್ತರ ಮೇಲೆ ಕ್ರೂಡ್​ ಬಾಂಬ್‌ಗಳಿಂದ ಹಲ್ಲೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಕಾರ್ಯಕರ್ತರು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ತಮ್ಮ ಮೇಲೆ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಶುಕ್ರವಾರ ರಾತ್ರಿ, ಆರು ಬಿಜೆಪಿ ಕಾರ್ಯಕರ್ತರು ವಿವಾಹ ಸಮಾರಂಭವೊಂದನ್ನು ಮುಗಿಸಿ ವಾಪಸಾಗುತ್ತಿದ್ದಾಗ, ದುಷ್ಕರ್ಮಿಗಳು ಅವರ ಮೇಲೆ ಕ್ರೂಡ್ ಬಾಂಬ್​ಗಳನ್ನು ಎಸೆದಿದ್ದಾರೆ. ಈ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಕಾರ್ಯಕರ್ತರನ್ನು ತಕ್ಷಣ ಕಾನ್ನಿಂಗ್ ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.

ಶೋವನ್ ದೇಬನಾಥ್, ವಿಕ್ರಮ್ ಶಿಲ್, ಅರ್ಪಣ್ ದೇಬನಾಥ್, ಸ್ವಪನ್ ಕುರಳಿ, ಮಹಾದೇವ್ ನಾಯಕ್ ಮತ್ತು ಮತ್ತೊಬ್ಬರು ಗಾಯಗೊಂಡಿರುವ ಕಾರ್ಯಕರ್ತರು. ತಮ್ಮೆಡೆಗೆ ಬಾಂಬ್ ಎಸೆದದ್ದು ಟಿಎಂಸಿ ಕಾರ್ಯಕರ್ತರು ಎಂದು ಅವರು ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಮತ್ತೊಂದೆಡೆ, ಗೊಸಬ ವಿಧಾನಸಭೆಯ ಟಿಎಂಸಿ ಚುನಾವಣಾ ಅಭ್ಯರ್ಥಿ ಜಯಂತ್ ನಸ್ಕರ್, ಬಿಜೆಪಿ ನಾಯಕ ವರುಣ್ ಪ್ರಮಾಣಿಕ್ ಅವರು ದುಷ್ಕರ್ಮಿಗಳೊಂದಿಗೆ ಬಾಂಬ್ ಇಡಲು ಪ್ರಯತ್ನಿಸಿದಾಗ, ಆರು ಜನರು ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net