ಆದರೆ, ಆ ನಿರ್ದೇಶಕ ಅಲ್ಲಿಗೇ ನಿಲ್ಲಿಸಲಿಲ್ಲವಂತೆ. ಶಿಖಾ ಅವರ ವರ್ತನೆ ಕಂಡು, ನೋಡು, ಸಿನಿಮಾಗಳಲ್ಲಿ ಇದೆಲ್ಲಾ ಮಾಮೂಲಿ. ಚಿತ್ರದಲ್ಲಿ ಹೀಗೆಲ್ಲಾ ಇರುತ್ತದೆ. ನೀನು ಪಕ್ಕಾ ಹೀರೋಯಿನ್ ಮೆಟೀರಿಯಲ್ ಎಂದು ಪುಸಲಾಯಿಸಲು ನೋಡಿದ್ದಾನೆ. ಅಲ್ಲದೆ, ಏನಾಯ್ತು ಈಗ? ಕುಳಿತುಕೋ.. ಇದೆಲ್ಲಾ ಚಿತ್ರರಂಗದಲ್ಲಿ ನಡೆಯುತ್ತಿರುತ್ತದೆ ಎಂದು ಸಮಾಧಾನ ಪಡಿಸಲು ಯತ್ನಿಸಿದ್ದಾನೆ. ಆದರೆ ಅದಕ್ಕೆ ಧೃತಿಗೆಡದ ಶಿಖಾ, ಸರ್, ಇದೆಲ್ಲಾ ನಡೆದರೆ ನನ್ನಿಂದ ಈ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಅಲ್ಲಿಂದ ಹೊರಟು ಬಂದಿದ್ದರಂತೆ.