ಮಹಿಳಾ ಹಂತಕಿಯರನ್ನ ಏಕೆ ಲೈಂಗಿಕ ವಸ್ತು ರೀತಿ ತೋರಿಸುತ್ತಿರಿ? ಬಾಲಿವುಡ್​ನಲ್ಲಿ ಪುರುಷ ಪ್ರಧಾನ ಸಂಸ್ಕೃತಿ ಕೊನೆಯಾಗಲಿ; ಚಿತ್ರರಂಗದ ವಿರುದ್ಧ ಸಿಡಿದೆದ್ದ ಹುಮಾ ಖುರೇಶಿ! Huma Qureshi on Bollywood

ಬಾಲಿವುಡ್‌ನ ಪುರುಷ ಪ್ರಧಾನ ಸಂಸ್ಕೃತಿ ವಿರುದ್ಧ ನಟಿ ಹುಮಾ ಖುರೇಶಿ ಆಕ್ರೋಶ
ಬಾಲಿವುಡ್‌ನ ಪುರುಷ ಪ್ರಧಾನ ಸಂಸ್ಕೃತಿ ವಿರುದ್ಧ ನಟಿ ಹುಮಾ ಖುರೇಶಿ ಆಕ್ರೋಶ
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಹಂತಕಿಯರನ್ನು ಕೇವಲ ಸೆಕ್ಸ್ ಸಿಂಬಲ್ ಆಗಿ ತೋರಿಸುವುದೇಕೆ?
  • ಬಾಲಿವುಡ್‌ನ ಪುರುಷ ಪ್ರಧಾನ ಸಂಸ್ಕೃತಿ ವಿರುದ್ಧ ನಟಿ ಹುಮಾ ಖುರೇಶಿ ಆಕ್ರೋಶ
  • "ನನ್ನ ‘ಬೇಬಿ ಡು ಡೈ ಡು’ ಚಿತ್ರದಲ್ಲಿ ಮಾದಕತೆ ಇಲ್ಲ, ಕಿವುಡಿ-ಮೂಕಿ ಹಂತಕಿಯ ಪಾತ್ರವಿದೆ
ಮುಂಬೈ: ಬಾಲಿವುಡ್​ನಲ್ಲಿ ಮಹಿಳಾ ಹಂತಕಿ ಪಾತ್ರವನ್ನು ಅತಿಯಾದ ಲೈಂಗಿಕ ಪ್ರದರ್ಶಕಿಯಂತೆ ತೋರಿಸಲಾಗುತ್ತದೆ. ಆದರೆ ನನ್ನ ಈ ಸಿನಿಮಾ ಬೇಬಿ ಡು ಡೈ ಡು (Baby Do Die Do) ನಲ್ಲಿ ಹಂತಕಿಯನ್ನು ಕೇವಲ ಹಂತಕಿಯಂತೆ ಚಿತ್ರಿಸಲಾಗಿದೆ ಎಂದು ನಟಿ ಹುಮಾ ಖುರೇಶಿ (Huma Qureshi on Bollywood) ಹೇಳಿದ್ದಾರೆ.
ಬಾಲಿವುಡ್​ನಲ್ಲಿ ಹೆಣ್ಣಿನ ಪಾತ್ರವನ್ನು ಒಂದ ಸೌಮ್ಯ ಸ್ವಭಾವದಲ್ಲಿ ತೋರಿಸಿದರೆ, ಇನ್ನೊಮ್ಮೆ ಅತಿಯಾದ ಲೈಂಗಿಕ ಸೌಂದರ್ಯವನ್ನು ಹೊಂದಿರುವಂತೆ ಚಿತ್ರಿಸಲಾಗುತ್ತದೆ. ಇದು ಬಾಲಿವುಡ್​ನಲ್ಲಿರುವ ಪುರುಷ ಪ್ರಧಾನ ಸಂಸ್ಕೃತಿಯ ಪ್ರತಿಬಿಂಬ ಎಂದು ಆಕ್ರೋಶ ಹೊರಹಾಕಿದ್ದಾರೆ.

ನನ್ನ ಸಿನಿಮಾದಿಂದ ಬದಲಾವಣೆ ಸಾಧ್ಯ!

ಆದರೆ ನನ್ನ ಈ ಬೇಬಿ ಡು ಡೈ ಡು (Baby Do Die Do) ಸಿನಿಮಾದಲ್ಲಿ ಹಂತಕಿ ಅತಿಯಾದ ಮಾದಕತೆ ಹಾಗೂ ಲೈಂಗಿಕ ಸೌಂದರ್ಯವನ್ನು ಹೊಂದಿಲ್ಲ. ಈ ಸಿನಿಮಾದಲ್ಲಿ ನಾನು (ಹುಮಾ ಖುರೇಶಿ) ಒಬ್ಬ ಕಿವುಡಿ ಹಾಗೂ ಮೂಕಿಯ ಪಾತ್ರವನ್ನು ನಿರ್ವಹಿಸಿದ್ದೆನೆ.
ಮಹಿಳಾ ಹಂತಕಿ ಆದವಳು ಕೇವಲ ಲೈಂಗಿಕ ಸೌಂದರ್ಯ ಮಾತ್ರವಲ್ಲ, ಮೂಕಿ ಅಥವಾ ಕಿವುಡಿ ಆಗಿದ್ದರೂ ಪಾತ್ರವನ್ನು ಸೃಷ್ಟಿಸಬಹುದೆಂದು ಈ ಸಿನಿಮಾ ಚಿತ್ರರಂಗಕ್ಕೆ ತಿಳಿಸಿದೆ ಎಂದಿದ್ದಾರೆ.
ನನ್ನ ಈ ಸಿನಿಮಾ ಮೂಲಕ ಮುಂಬರುವ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳನ್ನು ಕೇವಲ ಐಟಂ ಗರ್ಲ್​ ಬದಲಿಗೆ, ಸಿನಿಮಾಗೆ, ಕಥೆಗೆ ಅಗತ್ಯವಿರುವ ಪಾತ್ರವನ್ನು ನೀಡುವ ಗುಣ ಬೆಳೆದರೆ ನನ್ನ ಈ ಸಿನಿಮಾ ಗೆದ್ದಂತೆಯೇ ಎಂದು ನಟಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net