ಈ ಸಿನಿಮಾವನ್ನು ಖಂಡಿತವಾಗಿ ನೋಡುತ್ತೇವೆ: 'ರಾಮಾಯಣ' ಟ್ರೇಲರ್​ಗೆ 'ಪಾಕಿಸ್ತಾನ' ಫಿದಾ; ಯಶ್​ 'ರಾವಣ' ನ ಅವತಾರಕ್ಕೆ ಪಾಕ್​ ಬಹುಪರಾಕ್​! Pakistan Reaction on Ramayana Trailer

ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾದ ಟ್ರೇಲರ್ ನೋಡಿ ಪಾಕಿಸ್ತಾನ ಫಿದಾ!
ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾದ ಟ್ರೇಲರ್ ನೋಡಿ ಪಾಕಿಸ್ತಾನ ಫಿದಾ!
Published on

ಪ್ರಮುಖ ಮುಖ್ಯಾಂಶಗಳು

  • ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾದ ಟ್ರೇಲರ್ ನೋಡಿ ಪಾಕಿಸ್ತಾನ ಫಿದಾ!
  • ರಾವಣನ ಅವತಾರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರ ಲುಕ್ ಹಾಗೂ ನಟನೆಗೆ ಪಾಕ್ ಪ್ರೇಕ್ಷಕರ ಮೆಚ್ಚುಗೆ
  • ಸೋಷಿಯಲ್​ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿರುವ ರಾಮಾಯಣ ಟ್ರೇಲರ್​
ಇಸ್ಲಾಮಾಬಾದ್​: ಕಳೆದ ಕೆಲ ವರ್ಷಗಳಿಂದ ಭಾರತದ ಮಣ್ಣಿನ ಕಥೆಗಳನ್ನು ಬಳಸಿಕೊಂಡು ಅದಕ್ಕೆ ಸಿನಿಮಾ ಟಚ್​ ಕೊಡುವ ಸಂಸ್ಕೃತಿ ಬೆಳೆದು ಬರುತ್ತಿದೆ. ನಿನ್ನೆ (ಗುರುವಾರ, ಜು.30) ನಿಮಿತ್​ ಮಲೋತ್ರಾ ನಿರ್ದೇಶನದ ರಾಮಾಯಣ ಭಾಗ 1 ರ ಟ್ರೇಲರ್​ ರಿಲೀಸ್​ ಆಗಿದ್ದು, ಇದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಈ ಟ್ರೇಲರ್​ ಖ್ಯಾತಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಪಕ್ಕದ ದೇಶ ಪಾಕಿಸ್ತಾನ (Pakistan Reaction on Ramayana Trailer) ದಲ್ಲಿ ಕೂಡ ಇದರ ಕ್ರೇಜ್​ ಮುಗಿಲು ಮುಟ್ಟುತ್ತಿದೆ. ಆ ದೇಶದ ಜನರು ಅನುಸರಿಸುವ ಧರ್ಮ ಬೇರೆಯೇಯಾದರೂ, ಪ್ರಭು ಶ್ರೀರಾಮನ ಪಾತ್ರಧಾರಿ ರಣಬೀರ್​ ಕಪೂರ್​ ಹಾಗೂ ರಾಕಿಂಗ್​ ಸ್ಟಾರ್​ ಯಶ್​ನ ರಾವಣನ ಲುಕ್​ಗೆ ಮನಸೋತಿದ್ದಾರೆ.

ನಾವು ಈ ಸಿನಿಮಾವನ್ನು ಖಂಡಿತವಾಗಿ ನೋಡುತ್ತೇವೆ!

ನಿನ್ನೆ ಬೆಳಿಗ್ಗೆ 4 ಗಂಟೆಗೆ ಅಂದರೆ ಹಿಂದೂಗಳಿಗೆ ಅತ್ಯಂತ ಪವಿತ್ರ ಸಮಯವಾದ ಬ್ರಹ್ಮ ಮುಹೂರ್ತದಲ್ಲಿ ಟ್ರೇಲರ್​ ರಿಲೀಸ್​ ಮಾಡುವ ಮೂಲಕ ಸಿನಿಮಾದಲ್ಲಿ ನಾವು ಪಾವಿತ್ರ್ಯತೆ ಕಾಪಾಡಿಕೊಂಡಿದ್ದೆವೆ ಹಾಗೂ ಸಂಪ್ರದಾಯಬದ್ಧವಾಗಿ ಸಿನಿಮಾ ತಯಾರಿಸಿದ್ದೇವೆ ಎಂಬ ಸಂದೇಶವನ್ನು ಸಿನಿತಂಡ ಪ್ರೇಕ್ಷಕರಿಗೆ ತಿಳಿಸಿದೆ.
ಈಗ ಈ ಟ್ರೇಲರ್​ ಅನ್ನು ವೀಕ್ಷಿಸಿರುವ ಪಾಕಿಸ್ತಾನಿ ಯುಟ್ಯೂಬರ್​​ಗಳು ರಾಮಾಯಣ ಸಿನಿಮಾದ ಟ್ರೇಲರ್​ ಅನ್ನು ಹಾಡಿ ಹೊಗಳುತ್ತಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಮಾವಿಯ ಉಮರ್ ಫಾರೂಕಿ ಎಂಬ ಪಾಕಿಸ್ತಾನಿ ಯುವಕ, ನಾನು ಇಂದು ಹಿಂದೂಸ್ತಾನದಲ್ಲಿ ಬಿಡುಗಡೆಯಾಗಿರುವ ರಾಮಾಯಣ ಸಿನಿಮಾದ ಟ್ರೇಲರ್​ ನೋಡಿದೆ. ಈ ಸಿನಿಮಾ ಟ್ರೇಲರ್​ ಬಹಳ ಅದ್ಭುತವಾಗಿದೆ.
https://youtube.com/shorts/hGij_SWkSYE?si=eHzrNLqbHGGUGmIo
ನನಗೆ ತಿಳಿದ ಪ್ರಕಾರ ಈ ಸಿನಿಮಾಗೆ ಸುಮಾರು 1000 ಕೋಟಿ ಖರ್ಚು ಮಾಡಿದ್ದಾರಂತೆ. ಅದು ಟ್ರೇಲರ್​ನಲ್ಲಿ ಕಾಣಿಸುತ್ತಿದೆ. ರಣಬೀರ್​ ಕಪೂರ್​ ಹಾಗೂ ಯಶ್​ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ನಾನು ಈ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೆನೆ ಎಂದು ಹೇಳಿದ್ದಾರೆ.

ಯಶ್​ ಅಭಿನಯ ಸೂಪರ್​!

ಇನ್ನೊಬ್ಬ ಪಾಕಿಸ್ತಾನಿ ಯುಟ್ಯೂಬರ್​​, ಹಸ್ನಾತ್ ಖಾನ್ ಕೂಡ ಈ ಟ್ರೇಲರ್​ನಲ್ಲಿರುವ ಆ್ಯಕ್ಷನ್​ ದೃಶ್ಯಗಳನ್ನು ಹೊಗಳಿದ್ದು, ಯಶ್​ ರಾವಣನಾಗಿ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈ ಸಿನಿಮಾ ಕೇವಲ ಭಾರತ, ಪಾಕಿಸ್ತಾನ ಮಾತ್ರವಲ್ಲ ಪ್ರಪಂಚದ ತುಂಬೆಲ್ಲಾ ಸಕ್ಕತ್​ ಸೌಂಡ್​ ಮಾಡಲಿದೆ. ನನಗಂತೂ ಈ ಸಿನಿಮಾದ ವಿಎಫ್​ಎಕ್ಸ್​​ ಹಾಗೂ ಆ್ಯಕ್ಷನ್​ ದೃಶ್ಯಗಳು ಬಹಳ ಇಷ್ಟವಾದವು. ನಾನು ಸಿನಿಮಾ ಬಿಡುಗಡೆಯಾದ ದಿನವೇ ಈ ಸಿನಿಮಾವನ್ನು ನೋಡಲಿದ್ದೆನೆ ಎಂದಿದ್ದಾರೆ, (ಏಜನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net