ತ್ರಿಷಾ ನನ್ನ ಬಾಲ್ಯದ ಗೆಳತಿ, ಅವಳು ವಿಜಯ್‌ನನ್ನೇ ಮದುವೆಯಾಗಲಿ: ದಳಪತಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರಾಖಿ ಸಾವಂತ್! Rakhi Sawant on Trisha and Vijay Marriage

ನನಗೆ ಅವರಿಬ್ಬರು ಮದುವೆಯಾದರೆ ಸಂತೋಷ: ರಾಖಿ ಸಾವಂತ್​
ನನಗೆ ಅವರಿಬ್ಬರು ಮದುವೆಯಾದರೆ ಸಂತೋಷ: ರಾಖಿ ಸಾವಂತ್​
Published on

ಪ್ರಮುಖ ಮುಖ್ಯಾಂಶಗಳು

  • ತ್ರಿಷಾ ಕೃಷ್ಣನ್ ನನ್ನ ಬಾಲ್ಯದ ಗೆಳತಿ!
  • ಅವಳು ವಿಜಯ್​ನನ್ನೇ ಮದುವೆಯಾಗಲಿ
  • ನನಗೆ ಅವರಿಬ್ಬರು ಮದುವೆಯಾದರೆ ಸಂತೋಷ: ರಾಖಿ ಸಾವಂತ್​
ಮುಂಬೈ: ತಮಿಳು ನಟ ಹಾಗೂ ರಾಜಕಾರಣಿ ದಳಪತಿ ವಿಜಯ್​ ಮತ್ತು ನಟಿ ತ್ರಿಷಾ ನಡುವಿನ ಸಂಬಂಧದ ವದಂತಿಗಳು ಬಹು ಕಾಲದಿಂದ ಕೇಳುತ್ತಲೆ ಬರುತ್ತಿದೆ. ಅದರಲ್ಲೂ ಇತ್ತೀಚೆಗೆ, ವಿಜಯ್​ ನೇತೃತ್ವದ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸೀಟ್​ಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿದ ನಂತರ ಈ ಡೇಟಿಂಗ್​ ವಿಚಾರ ಮತ್ತೆ ಮ,ಉನ್ನಲೆಗೆ ಬಂದಿದೆ.
ವಿಜಯ್​ ಮತ್ತು ತ್ರಿಷಾ ನಡುವಿನ ಸಂಬಂಧಕ್ಕೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್​ ನಟಿ ರಾಖಿ ಸಾವಂತ್ (Rakhi Sawant on Trisha and Vijay Marriage)​ ಇವರಿಬ್ಬರು ಮದುವೆಯಾಗುವುದು ಉತ್ತಮ ಎಂಬ ಹೇಳಿಕೆ ನೀಡಿದ್ದಾರೆ.

ತ್ರಿಷಾ ನನ್ನ ಬಾಲ್ಯದ ಗೆಳತಿ!

ಇವರು ಹೀಗೆ ಜನರ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡುವ ಬದಲು ವಿಜಯ್​ ಮತ್ತು ತ್ರಿಷಾ ಮದುವೆಯಾದರೆ ಒಳ್ಳೆಯದು, ನಾನು ಇವರ ಮದುವೆಯಲ್ಲಿ ಖಂಡಿತವಾಗಿ ಭಾಗವಹಿಸುತ್ತೆನೆಂದು ರಾಖಿ ಹೇಳಿದ್ದಾಳೆ.
ನಾನು ತ್ರಿಷಾಳನ್ನು ಬಹಳ ಸಣ್ಣ ವಯಸ್ಸಿನಿಂದ ನೋಡಿದ್ದೆನೆ. ಮೊದಲು ತ್ರಿಷಾ ಬಾಲಿವುಡ್​ನಲ್ಲಿ ಕೆಲಸ ಮಾಡುತ್ತಿದ್ದಳು, ನಾನು ಆಗ ಬಾಲಿವುಡ್​ನಲ್ಲಿ ಅವಕಾಶಕ್ಕಾಗಿ ಅಲೆಯುತ್ತಿದೆ. ನಂತರ ಅವಳು ದಕ್ಷಿಣದ ಸಿನಿಮಾರಂಗದೆಡೆಗೆ ಹೋದಳು ಎಂದು ಹೇಳಿದ್ದಾಳೆ.

ನನಗೆ ವಿಜಯ್​ ಜೊತೆ ನಟಿಸುವ ಕನಸಿತ್ತು!

ಹಾಗೆಯೇ ನಟ ವಿಜಯ್​ ಬಗ್ಗೆ ಮಾತನಾಡಿದ ರಾಖಿ, ನನಗೆ ವಿಜಯ್​ ಬಹಳ ಇಷ್ಟವಾಗುವ ವ್ಯಕ್ತಿ, ಅವರು ತುಂಬಾ ಒಳ್ಳೆಯವರು. ನನಗೆ ಅವರೊಂದಿಗೆ ಒಂದು ಹಾಡಿನಲ್ಲಿ ನೃತ್ಯ ಮಾಡಬೇಕೆಂಬ ಕನಸ್ಸಿತ್ತು, ಆದರೆ ಅದು ಸಾಧ್ಯವಾಗಲಲ್ಲ. ವಿಜಯ್​ ಈಗ ಒಬ್ಬ ಕ್ರಿಶ್ಚಿಯನ್​ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬ ತಮಿಳುನಾಡಿನ ಮುಖ್ಯಮಂತ್ರಿ ಆಗಲು ಹೊರಟಿರುವುದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ ಎಂದು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net