ವಿರುಷ್ಕಾ ಭೇಟಿ ನೀಡಿದ ಹೋಟೆಲ್‌ಗೆ ಪೊಲೀಸ್ ನೋಟಿಸ್! ಕಾರಣ ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ... Anushka Sharma

Anushka Sharma ಚಿತ್ರ Instagram
Anushka Sharma ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ರಸ್ತೆಗಳಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವುದು ಹೊಸ ವಿಷಯವಲ್ಲ
  • ವಿರಾಟ್ ಕೊಹ್ಲಿ ದಂಪತಿ ಜನಪ್ರಿಯತೆ ಎಂಥದ್ದು ಎಂಬುದಕ್ಕೆ ಈ ಘಟನೆ ಸಾಕ್ಷಿ
  • ನಮ್ಮ ರೆಸ್ಟೋರೆಂಟ್‌ಗೆ ಅಷ್ಟು ದೊಡ್ಡ ತಾರೆಯರು ಬರುವುದು ಸಾಧ್ಯವೇ?
  • ಸೆಲೆಬ್ರಿಟಿಗಳು ಭೇಟಿ ನೀಡಲು ಯೋಜಿಸಿದಾಗ ಅಧಿಕಾರಿಗಳಿಗೆ ಮುಂಚಿತವಾಗಿಯೇ ತಿಳಿಸಬೇಕು
ಬೆಂಗಳೂರು: ಇಲ್ಲಿನ ರಸ್ತೆಗಳಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವುದು ಹೊಸ ವಿಷಯವಲ್ಲ, ಆದರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಜನಪ್ರಿಯತೆ ಎಂಥದ್ದು ಎಂಬುದಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆಯೇ ಸಾಕ್ಷಿ. ಆದಾಗ್ಯೂ, ದಂಪತಿ ನಗರದ ಜನಪ್ರಿಯ ರೆಸ್ಟೋರೆಂಟ್​ಗೆ ಭೇಟಿ ನೀಡಿದ ನಂತರ ಆದಂತಹ ಉದ್ವಿಗ್ನತೆ ಎಲ್ಲೆಡೆ ಗಮನ ಸೆಳೆಯುತ್ತಿದೆ.

ಘಟನೆ ಏನು?

ಬೆಂಗಳೂರಿನ ಐಕಾನಿಕ್ ರೆಸ್ಟೋರೆಂಟ್ ಸೆಂಟ್ರಲ್ ಟಿಫಿನ್ ರೂಮ್‌ನ ನಿರ್ದೇಶಕ ಗಣೇಶ್ ಪೂಜಾರಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, 2023 ರಲ್ಲಿ ವಿರಾಟ್ ಮತ್ತು ಅನುಷ್ಕಾ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ನಂತರ ಸಂಭವಿಸಿದ ಅವ್ಯವಸ್ಥೆಯನ್ನು ನೆನಪಿಸಿಕೊಂಡಿದ್ದಾರೆ.
ದಂಪತಿ ಭೇಟಿಯಾಗುವ ಮೂರು ದಿನಗಳ ಮುಂಚೆಯೇ ಕರೆ ಬಂದಿತ್ತು. ಅದರಲ್ಲಿ ಸ್ಟಾರ್ ದಂಪತಿ ಬರಲಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ, ನಮ್ಮ ರೆಸ್ಟೋರೆಂಟ್‌ಗೆ ಅಷ್ಟು ದೊಡ್ಡ ತಾರೆಯರು ಬರುವುದು ಸಾಧ್ಯವೇ? ಎಂದು ಯೋಚಿಸಿ ಅದನ್ನು ಫೇಕ್​ ಕಾಲ್ ಎಂದು ಭಾವಿಸಿದ್ದೆ ಎಂದರು.
ಅಷ್ಟಲ್ಲದೇ, ಭೇಟಿಗೆ ಮುನ್ನ ವಿಐಪಿ ಚಲನೆಯನ್ನು ನಿರ್ವಹಿಸುವ ಸ್ಥಳೀಯ ಉಲ್ಲೇಖದಿಂದ ಹಲವಾರು ಕರೆಗಳು ಬರುತ್ತಿದ್ದವು. ಅದನ್ನು ನಾನು ಯಾರೋ ತಮಾಷೆ ಮಾಡುತ್ತಿದ್ದಾರೆ ಎಂದು ತಳ್ಳಿಹಾಕಿದೆ. ಅಂತಿಮವಾಗಿ ದಂಪತಿ ರೆಸ್ಟೋರೆಂಟ್​ಗೆ ಬರುವುದು ಖಾತ್ರಿಯಾತಿತು ಎಂದು ಹೇಳಿದರು.
ಇದಾದ ಬಳಿಕ ದಂಪತಿ ಹೋಟೆಲ್​ನ ದ್ವಾರಕ್ಕೆ ಆಗಮಿಸಿದರು. ಅವರ ಭೇಟಿಗಾಗಿ ಇಡೀ ಮಹಡಿಯನ್ನೇ ತೆರವುಗೊಳಿಸಬೇಕಾಯಿತು. ಈ ವೇಳೆ ಅನುಷ್ಕಾ ಅವರೊಂದಿಗೆ ಮಾತನಾಡಿದೆ ಈ ಹೋಟೆಲ್​ ಬಗ್ಗೆ ಹೇಗೆ ಗೊತ್ತು ಎಂದು ಕೇಳಿದಾಗ ನಟಿ ತನ್ನ ಕಾಲೇಜು ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿಕೊಂಡರು ಎಂದರು.
ಆದಾಗ್ಯೂ, ದಂಪತಿ ಯಾರಿಗೂ ಮಾಹಿತಿ ನೀಡದೇ ರೆಸ್ಟೋರೆಂಟ್‌ಗೆ ಪ್ರವೇಶಿಸಿದ್ದರು. ಆದರೆ, ಕೊಹ್ಲಿ ದಂಪತಿಗಳು ರೆಸ್ಟೋರೆಂಟ್‌ನಲ್ಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ನೂರಾರು ಅಭಿಮಾನಿಗಳು ರೆಸ್ಟೋರೆಂಟ್‌ನತ್ತ ಧಾವಿಸಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡವು.
ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಯಾವುದೇ ಉನ್ನತ ಮಟ್ಟದ ಸೆಲೆಬ್ರಿಟಿಗಳು ಭೇಟಿ ನೀಡಲು ಯೋಜಿಸಿದಾಗ ಅಧಿಕಾರಿಗಳಿಗೆ ಮುಂಚಿತವಾಗಿಯೇ ತಿಳಿಸಬೇಕು ಎಂದು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದರು ಎಂದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net