ಅವಳೊಬ್ಬ ಅದ್ಭುತ ನಟಿ..ಅವಳ ಜೊತೆ ನಟಿಸಿದ್ದು ಸಂತೋಷ ನೀಡಿದೆ: ನ್ಯಾಷನಲ್ ಕ್ರಶ್ ರಶ್ಮಿಕಾ ಬಗ್ಗೆ ಶಾಹಿದ್ ಕಪೂರ್ ಹೇಳಿದ್ದೇನು? Shahid Kapoor on Rashmika Mandanna

ಸಿನಿಮಾದಲ್ಲಿ ಜೊತೆಯಲ್ಲಿ ನಟಿಸಿದ ರಶ್ಮಿಕಾ  ಬಗ್ಗೆ ಶಾಹಿದ್​ ಕಪೂರ್​ ಮೆಚ್ಚುಗೆ
ಸಿನಿಮಾದಲ್ಲಿ ಜೊತೆಯಲ್ಲಿ ನಟಿಸಿದ ರಶ್ಮಿಕಾ ಬಗ್ಗೆ ಶಾಹಿದ್​ ಕಪೂರ್​ ಮೆಚ್ಚುಗೆ
Published on

ಪ್ರಮುಖ ಮುಖ್ಯಾಂಶಗಳು

  • ಕಾಕ್‌ಟೇಲ್ 2 ಸಿನಿಮಾದಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ
  • ಸಿನಿಮಾದಲ್ಲಿ ಜೊತೆಯಲ್ಲಿ ನಟಿಸಿದ ರಶ್ಮಿಕಾ ಬಗ್ಗೆ ಶಾಹಿದ್​ ಕಪೂರ್​ ಮೆಚ್ಚುಗೆ
  • ರಶ್ಮಿಕಾ ಒಬ್ಬಳು ಅದ್ಭುತ ಕಲಾವಿದೆ ಎಂದ ಶಾಹಿದ್​
ಮುಂಬೈ: ಸ್ಯಾಂಡಲ್​ವುಡ್​ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಇದೀಗ ಕನ್ನಡಕ್ಕಿಂತ ಬೇರೆ ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೆ ಹೆಚ್ಚು. ಕಿರಿಕ್​ ಪಾರ್ಟಿ ಮೂಲಕ ನಾಯಕ ನಟಿಯಾಗಿ ಕಾಣಿಸಿಕೊಂಡ ರಶ್ಮಿಕಾ, ನಂತರದ ದಿನಗಳಲ್ಲಿ ನ್ಯಾಷನಲ್​ ಕ್ರಶ್​​ ಆಗಿ ಹೊರಹಿಮ್ಮಿದಳು.
ಕನ್ನಡದ ನಂತರ ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕಂಡ ನಟಿ, ವಿಜಯ್​ ದೇವರಕೊಂಡನನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಕಾಕ್​ಟೇಲ್​ 2 ಸಿನಿಮಾದಲ್ಲಿ ಕೃತಿ ಸನೊನ್​ ಹಾಗೂ ಶಾಹಿದ್​ ಕಪೂರ್ (Shahid Kapoor on Rashmika Mandanna)​​ ಜೊತೆಗೆ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ನಲ್ಲಿ ಸಹ ತನ್ನ ಛಾಪನ್ನು ಮೂಡಿಸುವಲ್ಲಿ ನಿರತರಾಗಿದ್ದಾರೆ.

ರಶ್ಮಿಕಾ ಒಬ್ಬ ಅದ್ಭುತ ನಟಿ: ಶಾಹಿದ್​ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಜೊತೆ ಕಾಕ್​ಟೇಲ್ 2​ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಶಾಹಿದ್​ ಕಪೂರ್, ರಶ್ಮಿಕಾ ಕೆಲಸದಲ್ಲಿ ತುಂಬಾ ವೃತ್ತಿಪರರಿದ್ದಾರೆ. ಅವರ ಜೊತೆ ಅಭಿನಯಿಸಿದ್ದು ನನಗೆ ತುಂಬಾ ಸಂತೋಷವನ್ನು ತಂದುಕೊಟ್ಟಿದ್ದು, ಅವರೊಬ್ಬ ಅದ್ಭುತ ನಟಿ ಎಂದು ಹೊಗಳಿದ್ದಾರೆ.
ರಶ್ಮಿಕಾ ಈಗಾಗಲೇ ಹಲವಾರು ಭಾಷೆಯ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಬಹುತೇಕ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಹೀಗಾಗಿ ಅವರೊಬ್ಬ ಯಶಸ್ವಿ ನಟಿ ಎಂದು ಹೇಳಿದರೆ ಸುಳ್ಳಲ್ಲ ಎಂದು ಶಾಹಿದ್​ ಮುಕ್ತಕಂಠದಿಂದ ಹೊಗಳಿದ್ದಾರೆ.

ಕಾಕ್​ಟೇಲ್​ 2 ಬಗ್ಗೆ

ಕಾಕ್​ಟೇಲ್​ 2 ಇದು ಜೂನ್​ 19 ರಂದು ಬಿಡುಗಡೆಯಾದ ಹಿಂದಿ ಭಾಷೆಯ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಹೋಮಿ ಅಡಜಾನಿಯಾ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ. ಈ ಚಿತ್ರವು 2012ರಲ್ಲಿ ಬಿಡುಗಡೆಯಾದ ಕಾಕ್​ಟೇಲ್​ ಚಿತ್ರದ ಮುಂದುವರಿದ ಭಾಗ ಎಂದು ಪರಿಗಣಿಸಲಾಗುತ್ತದೆ. ಚಿತ್ರದಲ್ಲಿ ಶಾಹಿದ್ ಕಪೂರ್​, ಕೃತಿ ಸನೊನ್​ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆಯು ದೀರ್ಘಕಾಲದಿಂದ ಒಟ್ಟಿಗೆ ಜೀವನ ನಡೆಸುತ್ತಿರುವ ಕುನಾಲ್ ಮತ್ತು ದಿಯಾ ಎಂಬ ಜೋಡಿಯ ಸುತ್ತ ಸುತ್ತುತ್ತದೆ. ಅವರ ಜೀವನಕ್ಕೆ ಹಳೆಯ ಸ್ನೇಹಿತೆ ಅಲಿ ಮತ್ತೆ ಪ್ರವೇಶಿಸಿದಾಗ ಸಂಬಂಧಗಳಲ್ಲಿ ಹೊಸ ತಿರುವುಗಳು, ಭಾವನಾತ್ಮಕ ಗೊಂದಲಗಳು ಮತ್ತು ತ್ರಿಕೋನ ಪ್ರೇಮದ ಘಟನೆಗಳು ನಡೆಯುತ್ತವೆ. ಆಧುನಿಕ ಸಂಬಂಧಗಳು, ನಂಬಿಕೆ, ಪ್ರೀತಿ ಮತ್ತು ಸ್ನೇಹದ ಸಂಕೀರ್ಣತೆಯನ್ನು ಮನರಂಜನಾತ್ಮಕ ಹಾಗೂ ಭಾವನಾತ್ಮಕ ಶೈಲಿಯಲ್ಲಿ ಚಿತ್ರಿಸಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net