ವಿಶ್ವದಾಖಲೆ ಬರೆದ ಸಮಯ್ ರೈನಾ: ಅತಿ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಹೆಗ್ಗಳಿಕೆ ಗಳಿಸಿದ Still Alive

 ಹಾಸ್ಯ ಕಲಾವಿದ ಸಮಯ್​ ರೈನಾ
ಹಾಸ್ಯ ಕಲಾವಿದ ಸಮಯ್​ ರೈನಾ
Published on
ವೈರಲ್​: ತನ್ನ ಡಾರ್ಕ್​ ಹ್ಯೂಮರ್​ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಹಾಸ್ಯ ಕಲಾವಿದ (Comedian) ಎಂದರೆ ಅದು ಸಮಯ್​ ರೈನಾ ಎನ್ನಬಹುದು. ಇತ್ತೀಚೆಗೆ ಈ ಸಮಯ್​ ರೈನಾ ಬಿಡುಗಡೆಮಾಡಿದ್ದ ಸ್ಟಿಲ್ ಅಲೈವ್​ (Still Alive) ಎಂಬ ವಿಡಿಯೋ ಈದೀಗ ಪ್ರಪಂಚದಾದ್ಯಂತ ಅತಿ ಹೆಚ್ಚು ವೀಕ್ಷಣೆ ಪಡೆದ ವಿಶೇಷ ಹಾಸ್ಯ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಿಡುಗಡೆಯಾದ ಒಂದೇ ವಾರದಲ್ಲಿ ಕೋಟಿ ದಾಟಿದ ವೀವ್ಸ್!

ಸಮಯ್​ ರೈನಾ ಈ ವಿಡಿಯೋವನ್ನು ಏಪ್ರಿಲ್​ 7 ರಂದು ಯೂಟ್ಯೂಬ್​ನಲ್ಲಿ ಹಂಚಿಕೊಂಡಿದ್ದರು. ಇಂದು (ಏಪ್ರಿಲ್​ 22) ಈ ವಿಡಿಯೋ ಸುಮಾರು 53.78 ಮಿಲಿಯನ್​ (5 ಕೋಟಿ 40 ಲಕ್ಷ ) ವೀಕ್ಷಣೆಯನ್ನು ಪಡೆದಿದ್ದು, ಸುಮಾರು 30 ಲಕ್ಷ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಹಾಗೆಯೇ ಈ ವಿಡಿಯೋಗೆ 2 ಲಕ್ಷ ಕಮೆಂಟ್​ಗಲು ಬಂದಿವೆ.

ವಿಡಿಯೋನಲ್ಲಿ ಸಮಯ್​ ಏನು ಹೇಳಿದ್ದಾನೆ?

ಈ ವಿಡಿಯೋನಲ್ಲಿ ಸಮಯ್​ ರೈನಾ ತಾವು ಇಂಡಿಯಾಸ್​ ಗೊಟ್​ ಲೇಟೆಂಟ್​ ಕಾರ್ಯಕ್ರಮ ವಿವಾದಕ್ಕೆ ಕಾರಣವಾದಾಗ ಅನುಭವಿಸಿದ ನೋವನ್ನು, ಆ ಸಮಯದಲ್ಲಿ ಎದುರಾದ ಸವಾಲನ್ನು ಮತ್ತು ಅದರಿಂದ ಹೊರಬಂದ ರೀತಿಯನ್ನು ವಿವರಿಸಿದ್ದಾರೆ.
ಇದರ ಜೊತೆಗೆ ತಮ್ಮ ಕಾಶ್ಮೀರಿ ಪಂಡಿತರ ಸಮುದಾಯದ ಬಗ್ಗೆ, 1990 ರ ಸಮಯದಲ್ಲಿ ಕಾಶ್ಮೀರದಲ್ಲಿ ಅವರ ಕುಟುಂಬ ಎದುರಿಸಿ ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದರ ಜೊತೆಗೆ ರೈನಾ ತನ್ನ ಶಾಲಾ ದಿನಗಳಲ್ಲಿ ಅನುಭವಿಸಿದ ನೋವುಗಳನ್ನು ಸಹ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಇದರ ಜೊತೆಗೆ ನಗೆಯ ಚಟಾಕಿಗಳನ್ನುಹಾರಿಸಿದ ಸಮಯ್​, ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಅಮಿತಾಭ್​ ಬಚ್ಚನ್​ ಜೊತೆಗಿನ ಅನುಭವ ಹಾಗೂ ಇಂಡಿಯಾಸ್​ ಗೊಟ್​ ಲೇಟೆಂಟ್​ನಲ್ಲಿ ನಡೆಯುತ್ತಿದ್ದ ಹಾಸ್ಯಮಯ ಸನ್ನಿವೇಶವನ್ನು ವಿವರಿಸಿದ್ದಾರೆ.

ಇಂಡಿಯಾಸ್ ಗಾಟ್ ಲೇಟೆಂಟ್ ವಿವಾದ

2025ರ ಫೆಬ್ರವರಿಯಲ್ಲಿ ಸಮಯ್ ರೈನಾ ಅವರ ಈ ಕಾಮಿಡಿ ಶೋ ಭಾರಿ ವಿವಾದಕ್ಕೆ ಗುರಿಯಾಯಿತು. ಈ ಕಾರ್ಯಕ್ರಮದ ಒಂದು ಎಪಿಸೋಡ್‌ನಲ್ಲಿ ಅತಿಥಿ ತೀರ್ಪುಗಾರರಾಗಿ ಭಾಗವಹಿಸಿದ್ದ ಪ್ರಸಿದ್ಧ ಪಾಡ್‌ಕಾಸ್ಟರ್ ರಣವೀರ್ ಅಲ್ಲಹಾಬಡಿಯಾ (BeerBiceps), ಸ್ಪರ್ಧಿಯೊಬ್ಬರಿಗೆ ಪೋಷಕರು ಮತ್ತು ಲೈಂಗಿಕತೆಗೆ ಸಂಬಂಧಿಸಿದಂತೆ ಅತ್ಯಂತ ಅಸಭ್ಯ ಮತ್ತು ಆಕ್ಷೇಪಾರ್ಹ ಪ್ರಶ್ನೆಯೊಂದನ್ನು ಕೇಳಿದ್ದರು.
ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಮತ್ತು ಸಂಪ್ರದಾಯವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಸಮಯ್ ರೈನಾ, ರಣವೀರ್ ಅಲ್ಲಹಾಬಡಿಯಾ ಮತ್ತು ಇತರ ಅತಿಥಿಗಳ ವಿರುದ್ಧ ಮುಂಬೈ ಹಾಗೂ ಅಸ್ಸಾಂನಲ್ಲಿ ಎಫ್‌ಐಆರ್ ದಾಖಲಾಯಿತು. ಅಷ್ಟೇ ಅಲ್ಲದೆ, ವಿಕಲಚೇತನರನ್ನು ಅಣಕಿಸಿದ ಆರೋಪದ ಮೇಲೆ ಸುಪ್ರೀಂ ಕೋರ್ಟ್ ಕೂಡ ಈ ತಂಡಕ್ಕೆ ಸಮನ್ಸ್ ಜಾರಿ ಮಾಡಿತ್ತು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net