ನಂತರ ಈ ಮೊತ್ತವನ್ನು ಬೆನ್ನತ್ತಿದ ಎಲ್ಎಸ್ಜಿ ತಂಡದಲ್ಲಿ ಸಂಘಟಿತ ಹೋರಾಟ ಕಂಡುಬರದ ಹಿನ್ನಲೆಯಲ್ಲಿ 20 ಓವರ್ಗಳಲ್ಲಿ ಕೇವಲ 200 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಗೆಲುವಿನೊಂದಿಗೆ, ಕಿಂಗ್ಸ್ ತಂಡವು ತಮ್ಮ ಅಜೇಯ ಸರಣಿಯನ್ನು ಆರು ಪಂದ್ಯಗಳಿಗೆ ವಿಸ್ತರಿಸಿತು ಮತ್ತು 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪಿದೆ. ಪಂಜಾಬ್ ಕಿಂಗ್ಸ್ ಶನಿವಾರ (ಏ.25) ರಂದು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ,(ಏಜನ್ಸೀಸ್).