ಅಮಿತಾಬ್ ಬಚ್ಚನ್ ಬಗ್ಗೆ ಸಮಯ್ ರೈನಾ ಕಿಂಡಲ್: ಕಂಡಲ್ಲಿ ಕಪಾಳಕ್ಕೆ ಹೊಡೆಯುವೆ ಎಂದ ಅಜಾಜ್ ಖಾನ್! Ajaz Khan on Samay Raina

ಸಮಯ್​ ರೈನಾನನ್ನು ಕಂಡಲ್ಲಿ ಹೊಡೆಯುತ್ತೆನೆ ಎಂದ ಅಜಾಜ್​ ಖಾನ್​
ಸಮಯ್​ ರೈನಾನನ್ನು ಕಂಡಲ್ಲಿ ಹೊಡೆಯುತ್ತೆನೆ ಎಂದ ಅಜಾಜ್​ ಖಾನ್​
Published on

ಪ್ರಮುಖ ಮುಖ್ಯಾಂಶಗಳು

  • ಅಮಿತಾಬ್​ ಬಚ್ಚನ್​ನ್ನು ಹೀಯಾಳಿಸಿದ ಸಮಯ್​ ರೈನಾ
  • ಸಮಯ್​ ರೈನಾನನ್ನು ಕಂಡಲ್ಲಿ ಹೊಡೆಯುತ್ತೆನೆ ಎಂದ ಅಜಾಜ್​ ಖಾನ್​
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​
ಮುಂಬೈ: ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಎಂದರೆ ಭಾರತದಲ್ಲಿ ಕೋಟ್ಯಂತರ ಜನರಿಗೆ ಅಚ್ಚುಮೆಚ್ಚು. ಆದರೆ, ಇತ್ತೀಚೆಗೆ ಖ್ಯಾತ ಸ್ಟ್ಯಾಂಡಪ್ ಕಾಮಿಡಿಯನ್ ಸಮಯ್ ರೈನಾ ತಮ್ಮ ಸ್ಟಿಲ್ ಅಲೈವ್ (Still Alive) ಶೋನಲ್ಲಿ ಬಚ್ಚನ್ ಕುಟುಂಬದ ಬಗ್ಗೆ ಮಾಡಿದ ಕೆಲವು ಹಾಸ್ಯಗಳು ಈಗ ಚರ್ಚೆಗೆ ನಾಂದಿ ಹಾಡಿವೆ. ಈ ವಿಚಾರವಾಗಿ ಬಾಲಿವುಡ್‌ನ ವಿವಾದಾತ್ಮಕ ನಟ ಅಜಾಜ್ ಖಾನ್ (Ajaz Khan on Samay Raina) ಈಗ ಸಮಯ್ ರೈನಾಗೆ ಬೆದರಿಕೆ ಹಾಕಿದ್ದಾರೆ.

ಏನಿದು ವಿವಾದ? ಕಾಮಿಡಿ ಹೆಸರಲ್ಲಿ ಅತಿರೇಕವಾಯ್ತಾ?

ಸಮಯ್ ರೈನಾ ಅಂದ್ರೆನೇ ಹಾಗೆ, ಅವರ ಡಾರ್ಕ್ ಹ್ಯೂಮರ್ ಕೆಲವು ಸಲ ಗಡಿ ಮೀರುತ್ತದೆ ಅನ್ನೋದು ನೆಟ್ಟಿಗರ ವಾದ. ಇತ್ತೀಚಿನ ಶೋನಲ್ಲಿ ಸಮಯ್ ರೈನಾ, ತಾವು 2025ರಲ್ಲಿ ಕೌನ್ ಬನೇಗಾ ಕರೋಡ್‌ಪತಿ (KBC) ಕಾರ್ಯಕ್ರಮಕ್ಕೆ ಹೋಗಿದ್ದ ದಿನಗಳನ್ನು ನೆನಪಿಸಿಕೊಂಡರು.
ಅಮಿತಾಬ್ ಬಚ್ಚನ್ ಮುಂದೆ ಹಾಟ್ ಸೀಟ್‌ನಲ್ಲಿ ಕುಳಿತಿದ್ದಾಗ ತಮಗೆ ಕೆಲವು ಉಲ್ಟಾ-ಸೀದಾ ಆಲೋಚನೆಗಳು ಬಂದಿದ್ದವು ಎಂದ ಸಮಯ್, ಅಲ್ಲಿ ಹೇಳಲಾಗದ ಒಂದು ಜೋಕ್ ಅನ್ನು ಸ್ಟೇಜ್ ಮೇಲೆ ಹೇಳಿದರು. ಸರ್, ನೀವು ಪೋಲಿಯೋ ಬಗ್ಗೆ ಇಷ್ಟೊಂದು ಜಾಹೀರಾತು ಮಾಡ್ತೀರಿ, ಆದರೂ ನಿಮ್ಮ ಮಗನನ್ನು (ಅಭಿಷೇಕ್ ಬಚ್ಚನ್) ಸ್ವಂತ ಕಾಲಿನ ಮೇಲೆ ನಿಲ್ಲಿಸಲು ಯಾಕೆ ಆಗಲಿಲ್ಲ? ಎಂದು ಕಿಚಾಯಿಸಿದರು. ಇದು ಕೇವಲ ಮಗನ ಬಗ್ಗೆ ಮಾತ್ರವಲ್ಲದೆ, ಅಮಿತಾಬ್ ಅವರ ವೃತ್ತಿಜೀವನದ ದೊಡ್ಡ ಸಾಮಾಜಿಕ ಕಾಳಜಿಯನ್ನೂ ಅಪಹಾಸ್ಯ ಮಾಡಿದಂತಿದೆ ಎಂದು ಅನೇಕರು ಕೆಂಡಾಮಂಡಲವಾಗಿದ್ದಾರೆ.
ಅಷ್ಟೇ ಅಲ್ಲ, ಅಮಿತಾಬ್ ಅವರ ಮುಂದೆ ತಮ್ಮ ಅಜ್ಜಿ ದೊಡ್ಡ ಫ್ಯಾನ್ ಎಂದು ಸುಳ್ಳು ಹೇಳಿದ್ದಾಗಿ, ಆದರೆ ತಮ್ಮ ಅಜ್ಜಿ ತೀರಿಹೋಗಿ 7 ವರ್ಷಗಳೇ ಕಳೆದಿವೆ ಎಂದು ಹೇಳಿ ನಗೆ ಚಾಟಿ ಬೀಸಿದ್ದಾರೆ. ಇಂಟರ್ನೆಟ್ ಲೋಕದಲ್ಲಿ ನೀವು ನೀವಾಗಿರಲು ಸಾಧ್ಯವಿಲ್ಲ, ಸಮಯಕ್ಕೆ ತಕ್ಕಂತೆ ಆಟವಾಡಬೇಕಾಗುತ್ತದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಿಡಿದೆದ್ದ ಅಜಾಜ್ ಖಾನ್: ಕಂಡಲ್ಲಿ ಕಪಾಳಕ್ಕೆ ಹೊಡೆಯುವೆ!

ಸಮಯ್ ರೈನಾ ಅವರ ಈ ಮಾತುಗಳು ಕಿರುತೆರೆಯ ವಿವಾದಾತ್ಮಕ ವ್ಯಕ್ತಿ ಅಜಾಜ್ ಖಾನ್ ಅವರನ್ನು ಕೆರಳಿಸಿದೆ. ಟೆಲ್ಲಿಚಕ್ಕರ್ ಜೊತೆ ಮಾತನಾಡಿದ ಅಜಾಜ್, ಸಮಯ್ ರೈನಾ ವಿರುದ್ಧ ಹಸಿಬಿಸಿ ಮಾತುಗಳಿಂದ ವಾಗ್ದಾಳಿ ನಡೆಸಿದ್ದಾರೆ.
ಈ ಬತ್ತಮೀಜ್ (ಗೌರವವಿಲ್ಲದ) ಮನುಷ್ಯನ ಬಗ್ಗೆ ನಾನೇನು ಹೇಳಲಿ? ಬಹುಶಃ ಇವನು ಮನೆಯಲ್ಲಿ ತಂದೆ-ತಾಯಿಯ ಜೊತೆಗೂ ಹೀಗೆಯೇ ಮಾತಾಡ್ತಾನೇನೋ. ಲೇಯ್ ಸಮಯ್, ಇವತ್ತಿನಿಂದ ನಿನ್ನ ಸಮಯ ಚೆನ್ನಾಗಿಲ್ಲ ಅಂದುಕೋ (ತೇರಾ ಸಮಯ್ ಖರಾಬ್ ಚಲು ಹೋ ಗಯಾ) ಎಂದು ಅಜಾಜ್ ವಾರ್ನಿಂಗ್ ಕೊಟ್ಟಿದ್ದಾರೆ.
ಮುಂದುವರಿದು ಮಾತನಾಡುತ್ತಾ, ನೀನು ಎಲ್ಲಾದರೂ ನನಗೆ ಎದುರಾದ್ರೆ ನಿನ್ನ ಕಪಾಳ ಚೆಕ್ ಮಾಡ್ತೀನಿ (ಜಿಧಾರ್ ದಿಖಾ ಉಧರ್ ತೇರಾ ಕಾನ್ ಚೆಕ್ ಕರುಂಗಾ ಮೈನ್). ಅಮಿತಾಬ್ ಬಚ್ಚನ್ ಅವರಿಗೆ ಇಡೀ ದೇಶ ಗೌರವ ಕೊಡುತ್ತೆ, ಅವರ ಅಭಿಮಾನಿಗಳು ಈಗ ನಿನ್ನನ್ನು ಹುಡುಕುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಅಜಾಜ್ ಬೆದರಿಕೆ ಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಾರಕಕ್ಕೇರಿದ ಚರ್ಚೆ

ಈಗ ಸಾಮಾಜಿಕ ಜಾಲತಾಣಗಳು ಎರಡು ಭಾಗವಾಗಿ ವಿಭಜನೆಯಾಗಿದೆ. ಒಂದು ಗುಂಪು ಸಮಯ್ ರೈನಾ ಅವರದ್ದು ಕೇವಲ ಕಾಮಿಡಿ, ಅದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬೇಕು ಎನ್ನುತ್ತಿದ್ದರೆ, ಇನ್ನೊಂದು ಗುಂಪು ಹಾಸ್ಯಕ್ಕೂ ಒಂದು ಮಿತಿಯಿದೆ, ಹಿರಿಯ ನಟರನ್ನು ಮತ್ತು ಅವರ ವೈಯಕ್ತಿಕ ಬದುಕನ್ನು ಅವಹೇಳನ ಮಾಡುವುದು ತಪ್ಪು ಎಂದು ಕಿಡಿಕಾರುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net