ಲೆಬನಾನ್​ ಮೇಲೆ ಇಸ್ರೇಲ್​ ದಾಳಿ ನಿಲ್ಲಿಸಲಿ: ನಾವು ಶಾಂತಿ ಮಾತುಕತೆಗೆ ಬರಲ್ಲ; ಅಮೆರಿಕಾಗೆ ಇರಾನ್​ ಬೆದರಿಕೆ! Iran Threatens America

ಇಸ್ರೇಲ್​ ದಾಳಿ ನಿಲ್ಲಿಸದಿದ್ದರೆ ಶಾಂತಿ ಮಾತುಕತೆಗೆ ಬರಲ್ಲ : ಇರಾನ್​
ಇಸ್ರೇಲ್​ ದಾಳಿ ನಿಲ್ಲಿಸದಿದ್ದರೆ ಶಾಂತಿ ಮಾತುಕತೆಗೆ ಬರಲ್ಲ : ಇರಾನ್​
Published on

ಪ್ರಮುಖ ಮುಖ್ಯಾಂಶಗಳು

  • ಲೆಬನಾನ್​ ಮೇಲೆ ಇಸ್ರೇಲ್​ ದಾಳಿ
  • ಇಸ್ರೇಲ್​ ದಾಳಿ ನಿಲ್ಲಿಸದಿದ್ದರೆ ಶಾಂತಿ ಮಾತುಕತೆಗೆ ಬರಲ್ಲ : ಇರಾನ್​
  • ಅಮೆರಕಾಗೆ ಇರಾನ್​ ಬೆದರಿಕೆ
ಟೆಹ್ರಾನ್​: ಲೆಬನಾನ್‌ನ ಮೇಲೆ ಇಸ್ರೇಲ್​ ನಡೆಸುತ್ತಿರುವ ದಾಳಿಯನ್ನು ಕೂಡಲೇ ನಿಲ್ಲಿಸಬೇಕು, ಇಲ್ಲದಿದ್ದರೆ ಶನಿವಾರ (ಏ.11) ಪಾಕಿಸ್ತಾನದಲ್ಲಿ ನಡೆಯಲಿರುವ ಅಮೆರಿಕ ಜೊತೆಗಿನ ಕದನ ವಿರಾಮ ಮಾತುಕತೆಯಿಂದ ಹಿಂದೆ ಸರಿಯುವುದಾಗಿ ಇರಾನ್ ಬೆದರಿಕೆ (Iran Threatens America) ಹಾಕಿದೆ.
ಇರಾನಿನ ಮಾಧ್ಯಮಗಳ ವರದಿ ಪ್ರಕಾರ, ಇರಾನಿನ ಮಾತುಕತೆ ಆಯೋಗ ಪಾಕಿಸ್ತಾನಕ್ಕೆ ತೆರಳಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಇದು ಸಂಪೂರ್ಣ ಸುಳ್ಳಾಗಿದೆ ಎಂದು ತಿಳಿಸಿವೆ.

ಲೆಬನಾನ್​ನಲ್ಲಿ ಕದವ ವಿರಾಮ ಜಾರಿವರೆಗೆ ಮಾತುಕತೆ ಸಾಧ್ಯವಿಲ್ಲ

ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗುವಂತೆ ಅಮೆರಕ ನೋಡಿಕೊಳ್ಳಬೇಕು ಮತ್ತು ಇಸ್ರೇಲ್​ ದಾಳಿ ಮಾಡುವುದನ್ನು ನಿಲ್ಲಿಸಬೇಕೆಂದು ಇರಾನ್​ ತಾಕೀತು ಮಾಡಿದೆ. ಲೆಬನಾನ್​ನಲ್ಲಿ ಕದನ ವಿರಾಮ ಸ್ಥಾಪನೆಯಾಗುವವರೆಗೆ, ನಾವು ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸಲು ಸಿದ್ಧರಿಲ್ಲ ಎಂದು ಇರಾನ್​ ಸ್ಪಷ್ಟ ಪಡಿಸಿದೆ.
ಅಮೆರಿಕ-ಇರಾನ್​ ನಡುವೆ ತಡೆಗೋಡೆಯಾದ ಲೆಬನಾನ್​!
ಅಮೆರಿಕ ಮತ್ತು ಇರಾನ್​ ನಡುವಿನ ಸಂಘರ್ಷದಲ್ಲಿ ಇಸ್ರೇಲ್​ ಅಮೆರಿಕ ಪರ ನಿಂತಾಗ ಲೆಬನಾನ್​ ಇರಾನ್​ ಪರ ಕಣಕ್ಕೀಳಿಯಿತು. ಆದರೆ ಕದನ ವಿರಾಮ ಘೋಷಣೆಯಾದ ನಂತರವೂ ಇಸ್ರೇಲ್​ ಬುಧವಾರ ಲೆಬನಾನ್​ ಮೇಲೆ ವೈಮಾನಿಕ ದಾಳಿ ನಡೆಸಿದ ಪರಿಣಾಮ, ಸುಮಾರು 250 ಜನ ಮೃತಪಟ್ಟು, 800 ಕ್ಕೂ ಅಧಿಕ ಜನ ಗಾಯಗೊಂಡರು. ಇದಕ್ಕೆ ಪ್ರತೀಕಾರ ಎಂಬಂತೆ ಇರಾನ್​ ಹೊರ್ಮುಜ್​ ಜಲಸಂಧಿಯನ್ನು ಮುಚ್ಚಿತು. ಇದು ಕದನ ವಿರಾಮದ ವಿಫಲತೆಯ ಸಂಕೇತ ಎನ್ನುತ್ತಾರೆ ರಾಜಕೀಯ ತಜ್ಞರು.

ಇರಾನ್​ನ ವಾದವೇನು?

ಅಮರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕದನ ವಿರಾಮ ಘೋಷಿಸಿದ ತರುವಾಯ ಇರಾನ್​, ಈ ಯುದ್ಧವನ್ನು ನಿಲ್ಲಿಸಲು 10 ಷರತ್ತುಗಳನ್ನು ವಿಧಿಸಿದೆ. ಈ ಹತ್ತು ಅಂಶಗಳಲ್ಲಿ ಲೆಬನಾನ್​ ಮೇಲೆ ಯಾವುದೇ ರೀತಿಯ ದಾಳಿ ಮಾಡಬಾರದು ಎಂಬುದು ಸೇರಿದೆ. ಹಾಗೆಯೇ ನಮ್ಮ ಈ ಹತ್ತು ಷರತ್ತುಗಳನ್ನು ಅಮೆರಿಕ ಮತ್ತು ಇಸ್ರೇಲ್​ ಒಪ್ಪಿಕೊಂಡರೆ ಮಾತ್ರ ಶಾಂತಿ ಮಾತುಕತೆಗೆ ಸಿದ್ಧ ಎಂದು ಇರಾನ್​ ಹೇಳಿದೆ.

ಇಸ್ರೇಲ್- ಅಮೆರಿಕ ಏನನ್ನುತ್ತಿವೆ?

ಇರಾನಿನ ಹತ್ತು ಷರತ್ತುಗಳನ್ನು ಒಪ್ಪಿಕೊಂಡಿರುವ ಅಮೆರಿಕ ಮತ್ತು ಇಸ್ರೇಲ್​, ಶಾಂತಿ ಒಪ್ಪಂದ ಮಾಡಿಕೊಳ್ಳುವಲ್ಲಿ ಸಿದ್ಧತೆ ನಡೆಸುತ್ತಿದೆ. ಆದರೆ ಈ ಒಪ್ಪಂದದಲ್ಲಿ ಲೆಬನಾನ್​​ಗೆ ಯಾವುದೇ ಹಕ್ಕು ಮತ್ತು ಸ್ಥಾನವಿಲ್ಲ ಎನ್ನುವುದು ಉಭಯ ದೇಶಗಳ ನಿಲುವಾಗಿದೆ. ಹಿಜ್ಬೊಲ್ಲಾ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ನಮ್ಮ ಯುದ್ಧ ಲೆಬನಾನ್​ನ ನಾಗರಿಕ ಮೇಲಲ್ಲ ಬದಲಾಗಿ ಹಿಜ್ಬೊಲ್ಲಾ ಮೇಲೆ ಎನ್ನುವುದು ಇಸ್ರೇಲ್​ನ ವಾದವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net