ನನ್ನ ಮಗ ಇದರ ಬಗ್ಗೆ ತಮಾಷೆ ಮಾಡ್ತಾನೆ: ಸತತ ಡೇಟಿಂಗ್ ವದಂತಿಗಳಿಗೆ ಶಾಕಿಂಗ್​ ಹೇಳಿಕೆ ಕೊಟ್ಟ ಮಲೈಕಾ ಅರೋರಾ! Malaika Arora on Dating

ನನಗೆ ಈ ಡೇಟಿಂಗ್​ ಅಂದರೆ ಅಲರ್ಜಿ: ಮಲೈಕಾ ಅರೋರಾ
ನನಗೆ ಈ ಡೇಟಿಂಗ್​ ಅಂದರೆ ಅಲರ್ಜಿ: ಮಲೈಕಾ ಅರೋರಾ
Published on

ಪ್ರಮುಖ ಮುಖ್ಯಾಂಶಗಳು

  • ಸತತ ಡೇಟಿಂಗ್​ ಮೂಲಕ ಸುದ್ದಿಯಲ್ಲಿರುವ ನಟಿ ಮಲೈಕಾ ಅರೋರಾ
  • ನನ್ನ ಮಗ ಈ ಕುರಿತು ಸದಾ ತಮಾಷೆ ಮಾಡುತ್ತಾನೆ
  • ನನಗೆ ಈ ಡೇಟಿಂಗ್​ ಅಂದರೆ ಅಲರ್ಜಿ: ಮಲೈಕಾ ಅರೋರಾ
ಮುಂಬೈ: ಬಾಲಿವುಡ್​ನಲ್ಲಿ ಅದೆಷ್ಟು ನಟಿಯರು ಬಂದರೋ ಅಷ್ಟೇ ನಟಿಯರು ಕಣ್ಮರೆಯಾದರು. ಆದರೆ ವಯಸ್ಸು 50 ದಾಟಿದರೂ ಇನ್ನು ಇಪ್ಪತ್ತರ ಬೆಡಗಿಯಂತೆ ಕಾಣುವ ನಟಿ ಎಂದರೆ ಅದು ಮಲೈಕಾ ಅರೋರಾ.
ಬಾಲಿವುಡ್​ ನಟ ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್ ಖಾನ್​ ಜೊತೆ ಮದುವೆಯಾಗಿ ಒಂದು ಮಗನ ತಾಯಿಯಾಗಿ, ವಿಚ್ಛೇದನವನ್ನು ಪಡೆದಿರುವ ಮಲೈಕಾ (Malaika Arora on Dating) ಸದ್ಯ ಸಿಂಗಲ್​ ಆಗಿ ಜೀವನ ಸಾಗಿಸುತ್ತಿದ್ದಾರೆ.

ಡೇಟಿಂಗ್​ ಸ್ಟಾರ್​ ಮಲೈಕಾ!

ಅರ್ಬಾಜ್​ ಖಾನ್​ನಿಂದ ವಿಚ್ಛೇದನ ಪಡೆದ ನಂತರ ಮಲೈಕಾ, ತನಗಿಂತ 12 ವರ್ಷ ಸಣ್ಣವನಾದ ನಟ ಅರ್ಜುನ್​ ಕಪೂರ್​ ಜೊತೆಗೆ ಸಂಬಂಧ ಹೊಂದಿರುವುದಾಗಿ ಸಾಕಷ್ಟು ವದಂತಿಗಳು ಹಬ್ಬಿದ್ದವು. ಇವರಿಬ್ಬರ ಸಂಬಂಧ ಸುಮಾರು 4 ವರ್ಷ ನಡೆದು ನಂತರ ಇಬ್ಬರು ದೂರವಾದರು.
ಇತ್ತೀಚೆಗೆ ಮಲೈಕಾ, ವಜ್ರದ ವ್ಯಾಪಾರಿ ಹರ್ಷ್​ ಮೆಹ್ತಾ ಜೊತೆಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಬಿ ಟೌನ್​ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈಗ ಈ ಎಲ್ಲಾ ವದಂತಿಗಳಿಗೆ ಮಲೈಕಾ ತೆರೆ ಎಳೆದಿದ್ದಾರೆ.

ನನಗೆ ಈ ಡೇಟಿಂಗ್​ ಅಂದರೆ ಇರಿಟೆಶನ್​

ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ಮಾತನಾಡಿರುವ ಮಲೈಕಾ ಅರೋರಾ, ನನಗೆ ಈ ಡೇಟಿಂಗ್​ ಎಂದರ ಇರಿಟೆಶನ್​. ನನ್ನ ಬಗ್ಗೆ ವಿವಿಧ ಬಗೆಯ ವದಂತಿಗಳನ್ನು ಕೇಳಿಸಿಕೊಂಡು ಸಾಕಾಗಿಹೋಗಿದೆ. ನಾನು ನನ್ನ ಮಗ ಅರ್ಹಾನ್​ ಇದರ ಬಗ್ಗೆ ಸದಾ ತಮಾಷೆ ಮಾಡಿಕೊಳ್ಳುತ್ತೆವೆ. ಆದರೆ ಕೆಲವೊಮ್ಮೆ ನನಗೆ ತೀರಾ ಬೇಸರ ತರಿಸಿರುವುದು ಇದೆ ಎಂದು ಮಲೈಕಾ ಹೇಳಿದ್ದಾರೆ.

ಮಲೈಕಾ ಅರೋರಾ ಬಗ್ಗೆ

ಮಲೈಕಾ ಅರೋರಾ ಬಾಲಿವುಡ್ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ, ಡ್ಯಾನ್ಸರ್​ ಮತ್ತು ಮಾಡೆಲ್ ಆಗಿದ್ದಾರೆ. ಅಕ್ಟೋಬರ್ 23, 1973 ರಂದು ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದ ಇವರು, ತಮ್ಮ ವಿಶಿಷ್ಟ ನೃತ್ಯ ಶೈಲಿ ಮತ್ತು ಫ್ಯಾಶನ್ ಸೆನ್ಸ್‌ನಿಂದಾಗಿ ಬಾಲಿವುಡ್‌ನ ಫಿಟ್‌ನೆಸ್ ಐಕಾನ್ ಎಂದೇ ಗುರುತಿಸಿಕೊಂಡಿದ್ದಾರೆ.
ದಿಲ್ ಸೇ ಚಿತ್ರದ "ಚೈಯಾ ಚೈಯಾ" ಮತ್ತು 'ದಬಾಂಗ್' ಚಿತ್ರದ ಮುನ್ನಿ ಬದ್ನಾಮ್ ಹುಯಿ ಹಾಡುಗಳಲ್ಲಿನ ಇವರ ನೃತ್ಯ ಇಂದಿಗೂ ಸಾರ್ವಕಾಲಿಕ ಹಿಟ್ ಎನಿಸಿಕೊಂಡಿದೆ. ಕೇವಲ ನಟಿಯಾಗಿ ಮಾತ್ರವಲ್ಲದೆ, ಇಂಡಿಯಾಸ್ ಗಾಟ್ ಟ್ಯಾಲೆಂಟ್ ಮತ್ತು ಝಲಕ್ ದಿಖ್ಲಾ ಜಾ ಅಂತಹ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುವ ಮೂಲಕ ಕಿರುತೆರೆಯಲ್ಲೂ ಹೆಸರು ಮಾಡಿದ್ದಾರೆ.
ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ, ಮಲೈಕಾ ಅವರು 1998 ರಲ್ಲಿ ನಟ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು ಮತ್ತು ಈ ದಂಪತಿಗೆ ಅರ್ಹಾನ್ ಖಾನ್ ಎಂಬ ಮಗನಿದ್ದಾನೆ. ಸುಮಾರು 19 ವರ್ಷಗಳ ದಾಂಪತ್ಯದ ನಂತರ 2017 ರಲ್ಲಿ ವಿಚ್ಛೇದನ ಪಡೆದಿದ್ದಾರೆ.
ಪ್ರಸ್ತುತ ಯೋಗ, ಫಿಟ್‌ನೆಸ್ ಮತ್ತು ತಮ್ಮದೇ ಆದ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಲೈಕಾ, ವಯಸ್ಸಾದರೂ ತಮ್ಮ ಸೌಂದರ್ಯ ಮತ್ತು ದೈಹಿಕ ಶಕ್ತಿಯನ್ನು ಕಾಪಾಡಿಕೊಂಡಿರುವ ರೀತಿಗೆ ಕೋಟ್ಯಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net