ಈ ತಪ್ಪನ್ನು ಮಾತ್ರ ಯಾವುದೇ ಕಾರಣಕ್ಕೂ ಮಾಡ್ಬೇಡಿ! ಯುವತಿಯರಿಗೆ 52ರ ಹಾಟ್​ಬ್ಯೂಟಿ ಕಿವಿಮಾತು

ಬಾಲಿವುಡ್​ ನಟಿ ಮಲೈಕಾ ಅರೋರಾ
ಬಾಲಿವುಡ್​ ನಟಿ ಮಲೈಕಾ ಅರೋರಾ
Published on

ಪ್ರಮುಖ ಮುಖ್ಯಾಂಶಗಳು

  • 52ನೇ ವಯಸ್ಸಿನಲ್ಲೂ 25ರಂತೆ ಕಾಣುವ ಬಾಲಿವುಡ್​ ಹಾಟ್​ಬ್ಯೂಟಿ
  • ವಿಚ್ಛೇದನ, ಬ್ರೇಕಪ್ ಕುರಿತು ಕಡೆಗೂ ಮೌನಮುರಿದ ಮಲೈಕಾ ಅರೋರಾ
  • ಯುವತಿಯರಲ್ಲಿ ಮನವಿ ಮಾಡಿಕೊಂಡ ಬಾಲಿವುಡ್​ ಬೆಡಗಿ
ಮುಂಬೈ: 52ನೇ ವಯಸ್ಸಿನಲ್ಲೂ 25ರಂತೆ ಕಾಣುವ ಬಾಲಿವುಡ್​ ಹಾಟ್​ಬ್ಯೂಟಿ, ಹಿರಿಯ ನಟಿ ಮಲೈಕಾ ಅರೋರಾ ಬಗ್ಗೆ ಸಾಕಷ್ಟು ವದಂತಿಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಈ ಪೈಕಿ ಹೆಚ್ಚೆಚ್ಚು ಅವರ ವಿಚ್ಛೇದನ ಹಾಗೂ ಡೇಟಿಂಗ್ ಕುರಿತಾಗಿಯೇ ಇರುತ್ತವೆ. ಇಂದಿಗೂ ತಮ್ಮ ದೇಹವನ್ನು ಫಿಟ್​ ಅಂಡ್ ಫೈನ್​ ಆಗಿಟ್ಟುಕೊಂಡಿರುವ ಮಲೈಕಾ, ಯುವತಿಯರಲ್ಲಿ ಒಂದು ವಿಶೇಷ ಮನವಿಯನ್ನು ಮಾಡಿದ್ದಾರೆ.
52ನೇ ಹಾಟ್​ ಆಗಿ ಕಾಣಿಸುವ ಮಲೈಕಾ, ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚೆಲುವೆ. ತಮ್ಮ ಸಿನಿಮಾ ಅಥವಾ ಚಿತ್ರರಂಗದ ವಿಚಾರಗಳಿಗಿಂತ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ದಾಂಪತ್ಯ ಮುರಿದುಬಿದ್ದ ಬಗ್ಗೆ ಮೌನ ಮುರಿದ ಮಲೈಕಾ, ನಾನು ಮದುವೆಯಾದೆ. ಆ ನಂತರ ಪತಿಯಿಂದ ಬೇರ್ಪಟ್ಟೆ. ಅದಾದ ಬಳಿಕ ಒಂದು ಸಂಬಂಧದಲ್ಲಿದ್ದೆ. ಅದು ಕೂಡ ಒಡೆದು ಚೂರಾಯಿತು ಎಂದಿದ್ದಾರೆ. 
"ಪ್ರೀತಿ ಎಂಬುದು ಸುಳ್ಳು ಅಥವಾ ಪ್ರೀತಿಸುವುದು ತಪ್ಪಲ್ಲ. ಆದರೆ, ನನಗಿದು ಸರಿ ಹೊಂದಲಿಲ್ಲ ಅಷ್ಟೇ. ಇಷ್ಟಾದರೂ ಸಹ ಪ್ರೀತಿ ಮೇಲಿನ ನಂಬಿಕೆ ಇಂದಿಗೂ ನನಗೆ ಗಟ್ಟಿಯಾಗಿದೆ. ಪ್ರೀತಿ ಹಂಚುವುದು, ಸ್ವೀಕರಿಸುವುದು ನನ್ನ ಗುಣ. ಈ ವಿಷಯದಲ್ಲಿ ನಾನೆಂದಿಗೂ ಲಕ್ಕಿಯೇ. ಹೆಣ್ಣುಮಕ್ಕಳು ಸಣ್ಣ ವಯಸ್ಸಿಗೆ ಮದುವೆಯಾಗುವ ತಪ್ಪನ್ನು ಮಾಡಬೇಡಿ" ಎಂದು ಮಲೈಕಾ ಹೇಳಿದರು. 
"ಮದುವೆಗೂ ಮುನ್ನ ಜೀವನದ ಬಗ್ಗೆ ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ಅರಿಯಬೇಕು. ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ನಿಮ್ಮ ಕಾಲಿನ ಮೇಲೆ ನೀವು ನಿಲ್ಲಲು ಕಲಿತಾಗ ಮಾತ್ರವೇ ದಾಂಪತ್ಯದತ್ತ ಹೆಜ್ಜೆಯಿಡಬೇಕು" ಎಂದಿದ್ದಾರೆ. ಬಾಲಿವುಡ್​ ನಟ ಅರ್ಜುನ್ ಕಪೂರ್ ಜತೆ ಒಂದಷ್ಟು ಕಾಲ ಡೇಟಿಂಗ್​ನಲ್ಲಿದ್ದ ಮಲೈಕಾ, ನಟನೊಂದಿಗೆ ಬ್ರೇಕಪ್​ ಮಾಡಿಕೊಂಡರು. ತನಗೆ ಒಂಟಿಯಾಗಿರುವುದಕ್ಕೆ ಖುಷಿಯಿದೆ. ಇನ್ನೂ ಮದುವೆಯಾಗುವ ಉದ್ದೇಶವಿಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದರು. 
ಇತ್ತೀಚೆಗೆ ರಶ್ಮಿಕಾ ಮಂದಣ್ಣ ನಟನೆಯ 'ತಮ್ಮಾ' ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ಮಿಂಚಿದ ಮಲೈಕಾ, ತಮ್ಮ ಮುಂಬರುವ ಸಿನಿ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net