ಒಂದೇ ಒಂದು ಆಟೋಗ್ರಾಫ್​ನಿಂದ ವೈರಲ್​ ಆದ 'ಮಿನಿ ವಿರಾಟ್​'! ಯಾರೀ ಪುಟ್ಟ ಪೋರ, ನೋಡಲು ಥೇಟ್​ ಕೊಹ್ಲಿಯೇ

ವಿರಾಟ್ ಕೊಹ್ಲಿ ಜತೆ ಮಿನಿ ವಿರಾಟ್​
ವಿರಾಟ್ ಕೊಹ್ಲಿ ಜತೆ ಮಿನಿ ವಿರಾಟ್​
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭ
  • ಮೊದಲ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸುತ್ತಿದ್ದ ವೇಳೆ 'ಮಿನಿ ವಿರಾಟ್'​ ದರ್ಶನ
  • ಕೊಹ್ಲಿಯಿಂದ ಆಟೋಗ್ರಾಫ್​ ಪಡೆದ ಮಿನಿ ವಿರಾಟ್​ ಈಗ ವೈರಲ್​
ಗುಜರಾತ್​: ಇಂದಿನಿಂದ ನ್ಯೂಜಿಲೆಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಈ ಪಂದ್ಯಕ್ಕೂ ಮೊದಲು ಮೈದಾನದಲ್ಲಿ ಬಿರುಸಿನ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ ಆಟಗಾರರ ಪೈಕಿ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಎಲ್ಲರ ಗಮನಸೆಳೆದರು. ಕಾರಣ, ದಿಗ್ಗಜ ಕ್ರಿಕೆಟಿಗನನ್ನು ನೋಡುವುದೇ ಫ್ಯಾನ್ಸ್​ಗಳಿಗೆ ಒಂದು ಹಬ್ಬ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲೇ ಅಭಿಮಾನಿಗಳು ಕ್ರಿಕೆಟಿಗರ ಅಭ್ಯಾಸದ ವೇಳೆ ಸ್ಟೇಡಿಯಂಗೆ ಆಗಮಿಸಿದ್ದರು. ಈ ವೇಳೆ, ಕೊಹ್ಲಿಯಿಂದ ಆಟೋಗ್ರಾಫ್​ ಪಡೆಯಲು ಮುಂದೆ ಬಂದ ಪುಟ್ಟ ಪೋರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾನೆ.
ವಡೋದರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್​ರನ್ನು ಭೇಟಿ ಆಗಲು ಸಾಧ್ಯವಾಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಅಭ್ಯಾಸ ನಡೆಸುವ ವೇಳೆ ಅವರಿಗಾಗಿ ಕಾದು ಕುಳಿತರೆ, ಖಂಡಿತ ಒಂದು ಫೋಟೋ ಅಥವಾ ಆಟೋಗ್ರಾಫ್​ಗಂತು ಮೋಸವಿಲ್ಲ ಎಂಬ ಬಲವಾದ ನಂಬಿಕೆ ಅಪಾರ ಅಭಿಮಾನಿಗಳದ್ದು. ಹೀಗೆ ಅಂದುಕೊಂಡು ಮೈದಾನದ ಬಳಿ ಹೋದ ಪುಟ್ಟ ಬಾಲಕನೊಬ್ಬ ಕೇವಲ ಆಟೋಗ್ರಾಫ್​ ಪಡೆಯಲು ಹೋಗಿ ನೆಟ್ಟಿಗರು ಮಾತ್ರವಲ್ಲದೇ ವಿರಾಟ್​ ಕೊಹ್ಲಿಯ ಫೇವರೇಟ್ ಆಗಿಬಿಟ್ಟಿದ್ದಾನೆ. ​

'ಮಿನಿ ವಿರಾಟ್'​ ಕಂಡ ಫ್ಯಾನ್ಸ್​ ಖುಷ್​

ಮೈದಾನದ ಬಳಿ ತನಗಾಗಿ ಕಾದು ನಿಂತಿದ್ದ ಅಭಿಮಾನಿಗಳಿಗೆ ಆಟೋಗ್ರಾಫ್​ ನೀಡುತ್ತಿದ್ದ ವಿರಾಟ್​ಗೆ ಒಂದು ಅಚ್ಚರಿ ಕಾದಿತ್ತು. ಆ ಅಚ್ಚರಿಯೇ ಈ ಪುಟ್ಟ ಪೋರ. ನೋಡಲು ಥೇಟ್​ ವಿರಾಟ್​ ಕೊಹ್ಲಿಯಂತೆಯೇ ಕಂಡ ಬಾಲಕನನ್ನು ನೋಡಿ ಒಮ್ಮೆ ವಿರಾಟ್​ ಕೂಡ ಆಶ್ಚರ್ಯಚಕಿತರಾದರು. ಬಾಲ್ಯದಲ್ಲಿ ತಾನು ಹೇಗಿದ್ದೇ ಎಂಬ ನೆನಪು ಒಂದು ನಿಮಿಷ ಅವರಿಗೆ ಕಾಡಿರುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಬಾಲಕನಿಗೆ ಫೋಟೋ ಕೊಟ್ಟ ಕೊಹ್ಲಿ, ಆತನನ್ನು ನೋಡಿ ಮುಗುಳುನಗೆ ಬೀರಿದ್ದು ವಿಶೇಷ. ವಿರಾಟ್​ ಮತ್ತು ಮಿನಿ ವಿರಾಟ್​ ಫೋಟೋ ಮತ್ತು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ,(ಏಜೆನ್ಸೀಸ್).

ಏಕದಿನ ಸರಣಿಗೆ ಟೀಮ್ ಇಂಡಿಯಾ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್​ ಕೀಪರ್​), ಶ್ರೇಯಸ್ ಅಯ್ಯರ್ (ಉಪನಾಯಕ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್), ನಿತೀಶ್ ಕುಮಾರ್​ ರೆಡ್ಡಿ, ಅರ್ಷದೀಪ್​ ಸಿಂಗ್​, ಯಶಸ್ವಿ ಜೈಸ್ವಾಲ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net