'ನಂಗೇನು ಗೊತ್ತಿಲ್ಲ ನಾ ತುಂಬಾ ಒಳ್ಳೆ ಹುಡುಗ' ಎಂಬಂತೆ ನಟಿಸ್ಬೇಡಿ; ರಣವೀರ್ ವಿರುದ್ಧ ಕುನಾಲ್ ಕಾಮ್ರಾ ಕಿಡಿ..Kunal Kamra

Kunal Kamra
Kunal Kamra
Published on

ಪ್ರಮುಖ ಮುಖ್ಯಾಂಶಗಳು

  • ವಿವಾದದ ಹೆಸರಲ್ಲಿ ಪ್ರಚಾರ ಗಿಟ್ಟಿಸಿಕೊಳ್ಬೇಡಿ ರಣವೀರ್ ಅಲ್ಲಾಬಾಡಿಯಾ ವಿರುದ್ಧ ಕುನಾಲ್​ ಕೆಂಡಾಮಂಡಲ
  • ನಿಮ್ಮ ವಿವಾದದಿಂದಾಗಿ 30ಕ್ಕೂ ಹೆಚ್ಚು ಕಲಾವಿದರಿಗೆ ಸಂಕಷ್ಟ ಎಂದು ಕುನಾಲ್​ ಕಾಮ್ರಾ ಕಿಡಿ
  • ನೀವು ನಿಮ್ಮ ಈಡ್ರಾಮಾಗಳನ್ನು ಇಲ್ಲಿಗೆ ನಿಲ್ಲಿಸಿ ನಿಮ್ಮ ಫ್ರಾಡ್​ಕಾಸ್ಟಿಂಗ್​ಗೆ ಮರಳಿ ಎಂದು ಟ್ವೀಟ್
ಹೊಸದೆಹಲಿ: `ನಿಮ್ಮ ಒಂದು ವಿವಾದಿಂದಾಗಿ ಇಡೀ ಕಾಮಿಡಿ ಲೋಕಕ್ಕೆ ಎಷ್ಟು ನಷ್ಟವಾಗಿದೆ ಎಂದು ನಿಮಗೆ ತಿಳಿದಿದೆಯೇ. ಇಂಡಿಯಾಸ್​ ಗಾಟ್ ಲೇಟೆಂಟ್' (India's Got Latent)​ ಕಾರ್ಯಕ್ರಮವನ್ನು ನಿಮ್ಮ ಲಾಭಕ್ಕೆ ಬಳಸಿಕೊಂಡು, ನಾ ತುಂಬಾ ಒಳ್ಳೆ ಹುಡುಗ ಎಂಬಂತೆ ನಟಿಸಬೇಡಿ' ಎಂದು ಯೂಟ್ಯೂಬರ್​​ ರಣವೀರ್​ ಅಲ್ಲಾಬಾಡಿಯಾ ವಿರುದ್ಧ ಕಾಮಿಡಿಯನ್​ ಕುನಾಲ್​ ಕಾಮ್ರಾ  ತೀವ್ರ ವಾಗ್ದಾಳಿ ನಡೆಸಿದ್ದಾರೆ.
2025ರಲ್ಲಿ ಯೂಟ್ಯೂಬರ್​​ ರಣವೀರ್​ ಅಲ್ಲಾಬಾಡಿಯಾ ಹಿರಿಯರ ಲೈಂಗಿಕತೆ ಬಗ್ಗೆ ಮಾತನಾಡಿ ವಿವಾದಕ್ಕೆ ಒಳಗಾಗಿದ್ದರು. ಸುಪ್ರೀಂ ಕೋರ್ಟ್​ ಅವರಿಗೆ ಛೀಮಾರಿ ಹಾಕಿತ್ತು. ಈ ಘಟನೆಯ ನಂತರ ತಮಗಾದ ನಷ್ಟವನ್ನು ಉಲ್ಲೇಖಿಸಿ, ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು. ಇದರ ವಿರುದ್ಧ ಕುನಾಲ್​ ಕಾಮ್ರಾ ಅವರು ಕಿಡಿಕಾರಿದ್ದಾರೆ.

ರಣವೀರ್​ ಅಲ್ಲಾಬಾಡಿಯಾ ಪೋಸ್ಟ್​ನಲ್ಲಿ ಏನಿದೆ?

`ದಿ ರಣವೀರ್​ ಶೋ ಕಟ್ಟಿ ಬೆಳೆಸಲು  ನನಗೆ ಮತ್ತು ನನ್ನ ತಂಡಕ್ಕೆ 10 ವರ್ಷ ಬೇಕಾಯಿತು. ಒಂದು ಸಣ್ಣ ಘಟನೆ(ಇಂಡಿಯಾಸ್​ ಗಾಟ್ ಲೇಟೆಂಟ್')ನಂತರದಲ್ಲಿ ಸಂಪೂರ್ಣ ತಲೆಕೆಳಗಾದಂತಾಯಿತು. ಈಗ ನಾನು ಮತ್ತು ನನ್ನ ತಂಡ ಮತ್ತೆ  ಮೊದಲಿನಿಂದ ಕಟ್ಟಲು ಯತ್ನಿಸುತ್ತಿದ್ದೇವೆ'ಎಂದು ಕಬೀರರ ಪದ್ಯವೊಂದನ್ನು ಉಲ್ಲೇಖಿಸಿ ತಮಗೆ ತಾವೇ ಸಮಾಧಾನ ಹೇಳಿಕೊಂಡು ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಕುನಾಲ್​ ಹೇಳಿದ್ದೇನು

ನೀವು ಮಾಡಿಕೊಂಡ ಒಂದು ವಿವಾದದಿಂದ ನನ್ನನ್ನು ಸೇರಿಸಿ 30ಕ್ಕೂ ಹೆಚ್ಚು ಕಲಾವಿದರಿಗೆ ಅಧಿಕಾರಿಗಳು ಸಮನ್ಸ್  ಕೊಟ್ಟರು. ಇಡೀ ಕಾಮಿಡಿ ಲೋಕವೇ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲೂ ಓಪನಿಂಗ್ಸ್​ ಇಲ್ಲ. ವೇದಿಕೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಆದರೆ, ನೀವು ಮಾತ್ರ 'ನೈಸ್ ಗಾಯ್' ಎಂದು ತೋರಿಸಿಕೊಳ್ಳುತ್ತಾ ಈ ಪರಿಸ್ಥಿತಿಯನ್ನು ನಿಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ಗುಡುಗಿದರು.
ನೀವು (Contraceptive for creativity) ಸೃಜನಶೀಲತೆಗೆ ಗರ್ಭನಿರೋಧಕವಿದ್ದಂತೆ. ಮೊದಲು ಇಂತಹ ಡ್ರಾಮಾಗಳನ್ನು ಇಲ್ಲಿಗೆ ನಿರ್ಬಂಧಗೊಳಿಸಿ, ನಿಮ್ಮ ಫ್ರಾಡ್‌ಕಾಸ್ಟಿಂಗ್ ಕೆಲಸಕ್ಕೆ ಮರಳಿ ಎಂದು ವ್ಯಂಗ್ಯವಾಡಿದ್ದಾರೆ.

ರಣವೀರ್​​ ಮಾಡಿಕೊಂಡಿದ್ದ ವಿವಾದವೇನು?

ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲೇಟೆಂಟ್' ಶೋನಲ್ಲಿ  ರಣವೀರ್ ಅಲ್ಲಾಬಾಡಿಯಾ 2025ರಲ್ಲಿ  ಭಾಗವಹಿಸಿದ್ದರು. ಪೋಷಕರು ಮತ್ತು ಲೈಂಗಿಕತೆಯ ಕುರಿತು ರಣವೀರ್​ ಮಾತನಾಡಿದ್ದರು. ಈ ಹೇಳಿಕೆಗಳ ಬಗ್ಗೆ ಹಲವರು ಕಿಡಿಕಾರಿದ್ದರು. ಸುಪ್ರೀಂ ಕೋರ್ಟ್​ ಅಸಹ್ಯಕರ ಎಂದು ಛೀಮಾರಿ ಹಾಕಿತ್ತು. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಶೋನ ಸಂಚಿಕೆಗಳನ್ನು ತೆಗೆದುಹಾಕಲಾಗಿತ್ತು ಮತ್ತು ಹಲವು ಕಲಾವಿದರ ಮೇಲೆ ಕಾನೂನು ಕ್ರಮ ಜರುಗಿಸಲಾಗಿತ್ತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net