ದಾವೂದ್ ಕಾಯಿಲೆ ಬಿದ್ದಿರುವುದು ಸುಳ್ಳು: ಧುರಂಧರ್ನಲ್ಲಿ ಬಡೇ ಸಾಬ್ ಪಾತ್ರ ಸರಿಯಾಗಿ ಮೂಡಿ ಬಂದಿಲ್ಲ; ಆರ್ಜಿವಿ ಬೇಸರ! Ram Gopal Varma on Dawood Ibrahim
ಧುರಂಧರ್ನಲ್ಲಿ ದಾವೂದ್ ಪಾತ್ರದ ಬಗ್ಗೆ ಆರ್ಜಿವಿ ಬೇಸರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಧುರಂಧರ್ನಲ್ಲಿ ದಾವೂದ್ ಪಾತ್ರದ ಬಗ್ಗೆ ಆರ್ಜಿವಿ ಬೇಸರ
ದಾವೂದ್ ಕಾಯಿಲೆ ಬಿದ್ದಿರುವುದು ಸುಳ್ಳೆಂದು ನಾನು ಹೇಳುತ್ತೇನೆ
ಸಿನಿಮಾ ಬಹಳ ಚೆನ್ನಾಗಿದೆ ಆದರೆ ನನಗೆ ಈ ದಾವೂದ್ನ ಪಾತ್ರವನ್ನು ತೋರಿಸಿದ ರೀತಿ ಇಷ್ಟವಾಗಿಲ್ಲ
ಮುಂಬೈ: ಬಾಂಬೆ ಭೂಗತ ಜಗತ್ತಿನ ಮಾಜಿ ಡಾನ್, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನನ್ನು ಧುರಂಧರ್ 2 ಸಿನಿಮಾದಲ್ಲಿ ಸರಿಯಾಗಿ ಚಿತ್ರಿಸಿಲ್ಲ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma on Dawood Ibrahim) ಬೇಸರ ವ್ಯಕ್ತ ಪಡಿಸಿದ್ದಾರೆ.
ದಾವೂದ್ ಪಾತ್ರ ನನಗೆ ಇಷ್ಟವಾಗಿಲ್ಲ!
ಧುರಂಧರ್ ಸಿನಿಮಾದ ಬಗ್ಗೆ ಮೊದಲಿಂದಲೂ ಹೊಗಳಿಕೆ ಮಾತನ್ನು ಹೇಳುತ್ತಿದ್ದ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಧುರಂದರ್ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ, ಆದರೆ ನನಗೆ ದಾವೂದ್ ಪಾತ್ರ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ಆದಿತ್ಯ ಅವನಿಗಿರುವ ಮಾಹಿತಿ ಆಧರಿಸಿ ದಾವೂದ್ ಇಬ್ರಾಹಿಂ ಪಾತ್ರವನ್ನು ಸೃಷ್ಟಿಸಿದ್ದಾನೆ. ಆದರೆ ನನಗೆ ಈ ಪಾತ್ರದ ನಿರ್ವಹಣೆ ಹಿಡಿಸಲಿಲ್ಲ ಎಂದು ಆರ್ಜಿವಿ ಹೇಳಿದ್ದಾರೆ. ನನ್ನ ಪ್ರಕಾರ ದಾವೂದ್ ತಾನಾಗಿಯೇ ಈ ಭೂಗತ ಲೋಕಕ್ಕೆ ವಿದಾಯ ಹೇಳಿದ್ದಾನೆ, ಅವನು ಕಾಯಿಲೆ ಬಿದ್ದಿರುವುದು ಸುಳ್ಳೆಂದು ನಾನು ನಂಬುತ್ತೆನೆ ಎಂದು ಅವರು ಹೇಳಿದರು.
ಭೂಗತ ಪಾತಕಿಗಳಿಗೆ ನನ್ನ ಸಿನಿಮಾಗಳು ಇಷ್ಟ!
ಇದೇ ಪಾಡ್ಕಾಸ್ಟ್ನಲ್ಲಿ ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ ನಿರ್ದೇಶಕ, ನನ್ನ ಕಂಪನಿ ಮತ್ತು ಸತ್ಯಾ ಸಿನಿಮಾಗಳಲ್ಲಿ ಬಾಂಬೆ ಭೂಗತ ಜಗತ್ತನ್ನು ಬಹಳ ನೈಜವಾಗಿ ತೋರಿಸಿದ್ದೆ. ಈ ಸಿನಿಮಾ ನಿರ್ಮಿಸುವಾಗ ಜನ ಅಂಡರ್ವರ್ಲ್ಡ್ನವರು ನಿನ್ನ ಹಿಂದೆ ಬೀಳುತ್ತಾರೆ ಎಂದು ಹೆದರಿಸಿದ್ದರು.
ಆದರೆ ಈ ಭೂಗತ ಪಾತಕಿಗಳಿಗೆ ನನ್ನ ಸಿನಿಮಾಗಳು ಬಹಳ ಇಷ್ಟವಾದವು, ಒಂದರ್ಥದಲ್ಲಿ ಇವರಿಂದಲೇ ನನ್ನ ಮನೆ ನಡೆಯುತ್ತಿದೆ, ಹಾಗೆಯೇ ನನಗೆ ಇಲ್ಲಿಯವರೆಗೆ ಭೂಗತ ಲೋಕದಿಂದ ಒಂದೇ ಒಂದು ಸಲ ಕೂಡ ಬೆದರಿಕೆ ಕರೆ ಬಂದಿಲ್ಲ ಎಂದು ಆರ್ಜಿವಿ ಹೇಳಿದ್ದಾರೆ.
ಧುರಂಧರ್ 2 ಬಗ್ಗೆ
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).