ಮುಂಬೈ: 'ಧುರಂಧರ್ 2' ಸದ್ಯ ಭಾರತೀಯ ಚಿತ್ರೋದ್ಯಮ ಮಾತ್ರವಲ್ಲ, ಇಡೀ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿರುವ ಹಿಂದಿ ಸಿನಿಮಾ. ಅತ್ತ, ಇಸ್ರೇಲ್-ಇರಾನ್ ಯುದ್ಧದ ವಿಷಯಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದರೆ, ಇತ್ತ ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಒಂದಷ್ಟು ವಿಷಯಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.