ನಿಮ್ಮ ಸೌಂದರ್ಯದ ಗುಟ್ಟೇನು? ಬದನೆಕಾಯಿ ಹೆಸರೇಳಿ ಅದಿತಿ ರಾವ್ ಕೊಟ್ಟ ಉತ್ತರ ವೈರಲ್​! Aditi Rao Hydari

ನಟಿ  ಅದಿತಿ ರಾವ್​ ಹೈದರಿ ( Aditi Rao Hydari  )
ನಟಿ ಅದಿತಿ ರಾವ್​ ಹೈದರಿ ( Aditi Rao Hydari )
Published on

ಪ್ರಮುಖ ಮುಖ್ಯಾಂಶಗಳು

  • ಯಾವುದೇ ನಟಿಯನ್ನು ನೋಡಿ ಅವರ ಸ್ಕಿನ್ ಮಿರಮಿರನೇ ಮಿಂಚುತ್ತಿರುತ್ತದೆ
  • ಕೆಲ ನಟಿಯರಂತೂ ಎಷ್ಟೇ ವಯಸ್ಸಾದರೂ 20ರ ಹರೆಯದ ಯುವತಿಯರಂತೆ ಕಂಗೊಳಿಸುತ್ತಾರೆ
  • 39 ವಯಸ್ಸಿನಲ್ಲೂ 20ರ ಯುವತಿಯಂತೆ ಕಾಣುವ ನಟಿಯರಲ್ಲಿ ಅದಿತಿ ರಾವ್​ ಹೈದರಿ ಕೂಡ ಒಬ್ಬರು
Aditi Rao Hydari : ಯಾವುದೇ ನಟಿಯನ್ನು ನೋಡಿ ಅವರ ಸ್ಕಿನ್ ಮಿರಮಿರನೇ ಮಿಂಚುತ್ತಿರುತ್ತದೆ.​ ಅದರಲ್ಲೂ ಕೆಲ ನಟಿಯರಂತೂ ಎಷ್ಟೇ ವಯಸ್ಸಾದರೂ 20ರ ಹರೆಯದ ಯುವತಿಯರಂತೆ ಕಂಗೊಳಿಸುತ್ತಾರೆ. ಅಂತಹ ನಟಿಯರಲ್ಲಿ ಅದಿತಿ ರಾವ್​ ಹೈದರಿ ಕೂಡ ಒಬ್ಬರು.
ಹೌದು, ಅದಿತಿ ಅವರಿಗೆ ಪ್ರಸ್ತುತ 39 ವರ್ಷ ವಯಸ್ಸು. ಈಗಲೂ 20 ವರ್ಷದ ಕಾಲೇಜು ಹುಡುಗಿಯರಂತೆ ಕಂಗೊಳಿಸುತ್ತಾರೆ. ಆಕೆಯ ಹೊಳೆಯುವ ಚರ್ಮ, ಆಕರ್ಷಕ ಸ್ಟೈಲ್​ ಹಾಗೂ ಮಿನುಗುವ ಕೂದಲು ಆಕೆಯತ್ತ ಎಲ್ಲರನ್ನು ಆಕರ್ಷಿಸುವಂತೆ ಮಾಡುತ್ತದೆ. ಆಕೆಯ ಬ್ಯೂಟಿ ಯಾವುದೋ ಸಿರಮ್​, ಸನ್ಸ್​ ಕ್ರೀಮ್​ ಮತ್ತು ಇನ್ನಿತರ ದುಬಾರಿ ಬ್ಯೂಟಿ ಪ್ರಾಡಕ್ಟ್​ಗಳಿಂದ ಬಂದಿರಬಹುದು ಎಂದು ಎಲ್ಲರು ಭಾವಿಸುತ್ತಾರೆ. ಆದರೆ, ಆಕೆಯ ಅಂದದ ಹಿಂದೆ ಅಡಗಿರುವುದು ಅಡುಗೆ ಮನೆ ಎಂಬ ಸತ್ಯವನ್ನು ಸ್ವತಃ ಅದಿತಿಯೇ ಬಿಚ್ಚಿಟ್ಟಿದ್ದಾರೆ.
ಇತ್ತೀಚೆಗೆ ಎಎನ್​ಐ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಅದಿತಿ ರಾವ್​ ಅವರು ತಮ್ಮ ಬ್ಯೂಟಿ ಸೀಕ್ರೆಟ್​ ಬಯಲು ಮಾಡಿದ್ದಾರೆ. ನನ್ನ ತಾಯಿಯಿಂದ ನನಗೆ ಈ ಅಂದ ಬಂತು ಎಂದು ಹೇಳಿದ್ದಾರೆ. ಆ ಅಂದವನ್ನು ಕಾಪಾಡಿಕೊಳ್ಳಲು ನಾನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನೇ ಬಳಸುತ್ತೇನೆ ಎಂದು ಹೇಳಿದ್ದಾರೆ.
ನಾನು ನನ್ನ ಅಡುಗೆ ಮನೆಯನ್ನು ನನ್ನ ಮುಖದಲ್ಲಿಡುತ್ತೇನೆ. ನಾನಿದನ್ನು ನನ್ನ ತಾಯಿಯಿಂದ ಕಲಿತಿದ್ದೇನೆ. ಅಡುಗೆ ಮನೆಯಲ್ಲಿ ಏನೇ ಕಂಡರೂ ನಾನದನ್ನು ನನ್ನ ಮುಖದ ಮೇಲೆ ಇಟ್ಟುಕೊಳ್ಳುತ್ತೇನೆ. ಆದರೆ, ಬದನೆಕಾಯಿ ಅಂತೂ ಅಲ್ಲವೇ ಅಲ್ಲ ಎಂದು ಅದಿತಿ ನಕ್ಕಿದರು. ಬದನೆಕಾಯಿ ಬಿಟ್ಟು ಉಳಿದ ವಸ್ತುಗಳನ್ನು ನನ್ನ ಮುಖದ ರಕ್ಷಣೆಗಾಗಿ ಬಳಸುತ್ತೇನೆ ಎಂದು ಅದಿತಿ ತಿಳಿಸಿದರು.
ಹಾಗಾದರೆ, ಅದಿತಿ ಅವರ ಸೌಂದರ್ಯದ ಗುಟ್ಟಿನಿಂದ ನೀವೇನು ಎರವಲು ಪಡೆಯಬಹುದು? ನಿಮ್ಮ ನೈಸರ್ಗಿಕವಾಗಿ ಹೊಳೆಯುವ ಚರ್ಮಕ್ಕಾಗಿ ನೀವು ಮನೆಯಲ್ಲಿಯೇ ಪ್ರಯತ್ನಿಸಬಹುದಾದ ಕೆಲವು ಸರಳ ಪದಾರ್ಥಗಳು ಇಲ್ಲಿವೆ ನೋಡಿ. ನಿಯಮಿತವಾಗಿ ನೀವಿದನ್ನು ಅನುಸರಿಸಿದರೆ, ಹೊಳೆಯುವ ಚರ್ಮ ನಿಮ್ಮದಾಗುತ್ತದೆ.
ಜೇನು ತುಪ್ಪ: ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮತ್ತು ಚರ್ಮಕ್ಕೆ ತ್ವರಿತ ಮೃದುತ್ವ ನೀಡುವ ನೈಸರ್ಗಿಕ ಹ್ಯೂಮೆಕ್ಟಂಟ್ (ತೇವಾಂಶ ಉತ್ತೇಜಿಸುವ ವಸ್ತು) ಇದಾಗಿದೆ.
ಅರಿಶಿನ: ಇನ್ನು ಫೇಸ್ ಪ್ಯಾಕ್‌ ರೀತಿ ಮುಖಕ್ಕೆ ಹಚ್ಚಿದಾಗ, ಚರ್ಮವನ್ನು ಶಾಂತಗೊಳಿಸುವ ಮತ್ತು ಹೊಳಪು ನೀಡುವ ಗುಣಲಕ್ಷಣಗಳಿಗೆ ಅರಿಶಿನ ಹೆಸರುವಾಸಿಯಾಗಿದೆ.
ಮೊಸರು: ನೈಸರ್ಗಿಕ ಲ್ಯಾಕ್ಟಿಕ್ ಆಮ್ಲದೊಂದಿಗೆ ದಣಿದ ಚರ್ಮವನ್ನು ನಯಗೊಳಿಸಲು ಮತ್ತು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ.
ಅಲೋವೆರಾ ಜೆಲ್​: ಚರ್ಮದ ಸಮಸ್ಯೆಯನ್ನು ಶಮನಗೊಳಿಸಲು, ಹೈಡ್ರೇಟ್ ಮಾಡಲು ಮತ್ತು ತಾಜಾ ಹೊಳಪನ್ನು ನೀಡಲು ಅಲೋವೆರಾ ಜೆಲ್​ ಸಹಾಯ ಮಾಡುತ್ತದೆ.
ಓಟ್ಸ್​: ಹಾಲು ಅಥವಾ ರೋಸ್ ವಾಟರ್​ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ, ಸತ್ತ ಚರ್ಮವನ್ನು ತೆಗೆದು ಹಾಕುತ್ತದೆ.
ಕೊಬ್ಬರಿ ಎಣ್ಣೆ: ಒಣ ಚರ್ಮಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸರಳವಾದ ಮಾಯಿಶ್ಚರೈಸರ್ ಇದಾಗಿದೆ.
ಅಂದಹಾಗೆ, ಹೊಳೆಯುವ ಚರ್ಮವು ಟ್ರೆಂಡ್​ಗಳನ್ನು ಪಾಲಿಸುವುದರಿಂದ ಬರುವುದಿಲ್ಲ. ಇದು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಚರ್ಮಕ್ಕೆ ಏನು ಬೇಕು ಅದನ್ನು ನೀಡುವುದಾಗಿದೆ. ಕೆಲವೊಮ್ಮೆ, ಉತ್ತಮ ಚರ್ಮಕ್ಕಾಗಿ ಬೇಕಿರುವುದು ಸ್ವಲ್ಪ ತಾಳ್ಮೆ ಹಾಗೂ ಸರಿಯಾದ ಪದಾರ್ಥಗಳು. ಹೀಗಾಗಿ ಏನೇ ಫಾಲೋ ಮಾಡುವ ಮುಂಚೆ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ ಎಂಬುದು ನಿಮಗೆ ತಿಳಿದಿರಲಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net