ನಾನು ಆಶಾವಾದಿಯಾಗಿರಲು ಇಷ್ಟಪಡುತ್ತೇನೆ: ವಿಚ್ಛೇದನದ ನಂತರ ಹನ್ಸಿಕಾ ಮೋಟ್ವಾನಿ ಫಸ್ಟ್​ ರಿಯಾಕ್ಷನ್​! Hansika Motwani First Reaction

ನಟಿ ಹನ್ಸಿಕಾ ಮೋಟ್ವಾನಿ
ನಟಿ ಹನ್ಸಿಕಾ ಮೋಟ್ವಾನಿ
Published on

ಪ್ರಮುಖ ಮುಖ್ಯಾಂಶಗಳು

  • ವಿಚ್ಛೇದನ ಪಡೆದ ನಟಿ ಹನ್ಸಿಕಾ ಮೋಟ್ವಾನಿ
  • ಪ್ರೀತಿಸಿ ಮದುವೆಯಾಗಿದ್ದ ಉದ್ಯಮಿ ಸೊಹೇಲ್ ಖತುರಿಯಾಗೆ ಡಿವೋರ್ಸ್​ ನೀಡಿದ ನಟಿ
  • ನಾನು ಆಶಾಮಾದಿಯಾಗಿರಲು ಬಯಸುತ್ತೇನೆ ಎಂದ ಸೌತ್​ ಸುಂದರಿ
ಮುಂಬೈ: ಸಿನಿಮಾರಂಗದಲ್ಲಿ ಇತ್ತೀಚೆಗೆ ಮದುವೆಗಿಂತ ವಿಚ್ಛೇದನದ ಸುದ್ದಿಗಳೇ ಹೆಚ್ಚು ಕೇಳಿ ಬರುತ್ತಿದ್ದು, ಒಂದು ಕಡೆ ತಮಿಳು ನಟ ವಿಜಯ್​ ಅವರಿಗೆ ಪತ್ನಿ ಸಂಗೀತಾ ಡಿವೋರ್ಸ್​​ ಅರ್ಜಿ ನೀಡಿದ್ದರೆ, ಇತ್ತ ಸೌತ್​ ಬ್ಯೂಟಿ ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ಜೀವನಾಂಶ ಪಡೆಯದೇ ಡಿವೋರ್ಸ್​ ಪಡೆಯುವ ಮೂಲಕ ಸುದ್ದಿಯಲ್ಲಿದ್ದಾರೆ.
ವಿಚ್ಚೇದನ ಪಡೆದ ನಂತರ ಇನ್​ಸ್ಟಾಗ್ರಾಮ್​ ಸ್ವೋರಿ ಒಂದರಲ್ಲಿ ನಟಿ ಹನ್ಸಿಕಾ, ಯಾವಾಗಲೂ ಚಾರ್ದಿ ಕಲಾ (Chardi Kala Always) ಎಂಬ ಪಂಜಾಬಿ ನುಡಿಗಟ್ಟನ್ನು ಬರೆದುಕೊಂಡಿದ್ದಾರೆ (Hansika Motwani First Reaction). ಇದರರ್ಥ ಎಂತಹ ಕಠಿಣ ಸಮಯದಲ್ಲಿ ಸಹ ಆಶಾವಾದಿಯಾಗಿರು ಎಂಬುದಾಗಿದೆ. ಅಂದರೆ ಹನ್ಸಿಕಾ, ವಿಚ್ಛೇದನದ ಬಳಿಕ ಸಹ ತಾನು ಆಶಾವಾದಿಯಾಗಿರಲಿದ್ದೆನೆ ಎಂದು ತಮ್ಮ ಅಭಿಮಾನಿಗಳಿಗೆ ಈ ಮೂಲಕ ತಿಳಿಸಿದ್ದಾರೆ.

ಐಫೆಲ್ ಟವರ್ ಮುಂದೆ ಪ್ರಪೋಸ್​; ಈಗ ಡಿವೋರ್ಸ್​

ಹನ್ಸಿಕಾ ಮತ್ತು ಸೊಹೇಲ್ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು. ಡಿಸೆಂಬರ್ 2022ರಲ್ಲಿ ಜೈಪುರದ ಸುಂದರ ಮುಂಡೋಟಾ ಫೋರ್ಟ್‌ನಲ್ಲಿ ಇವರ ಮದುವೆ ಸಂಭ್ರಮದಿಂದ ಜರುಗಿತ್ತು. ಅದಕ್ಕೂ ಮುನ್ನ, ಪ್ಯಾರಿಸ್‌ನ ಐಫೆಲ್ ಟವರ್ ಎದುರು ಸೊಹೇಲ್ ಅವರು ಹನ್ಸಿಕಾಗೆ ಪ್ರಪೋಸ್ ಮಾಡಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಹನ್ಸಿಕಾ ಕೂಡ ಈಗ ಮತ್ತು ಎಂದೆಂದಿಗೂ ಎಂದು ಹೇಳುತ್ತಾ ತಮ್ಮ ಪ್ರೀತಿಯನ್ನು ಜಗತ್ತಿಗೆ ಸಾರಿದ್ದರು.
ಆದರೆ, ಕಾಲಕ್ರಮೇಣ ದಂಪತಿಗಳ ನಡುವೆ ಬಿರುಕು ಮೂಡಿದ್ದು, ಇತ್ತೀಚೆಗೆ ಹನ್ಸಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ಅವರ ವಿಚ್ಛೇದನದ ವದಂತಿಗಳಿಗೆ ಪುಷ್ಟಿ ನೀಡಿತ್ತು. ಇದೀಗ ಕಾನೂನುಬದ್ಧವಾಗಿ ಬೇರ್ಪಟ್ಟಿರುವ ಈ ಜೋಡಿ, ಈದೀಗ ಪ್ರತ್ಯೇಕ ದಾರಿಯಲ್ಲಿ ಸಾಗಲು ನಿರ್ಧರಿಸಿದ್ದಾರೆ.

ಜೀವನಾಂಶ ಬೇಡ ಎಂದ ನಟಿ!

ಈ ವಿಚ್ಛೇದನದ ವಿಶೇಷವೆಂದರೆ, ಹನ್ಸಿಕಾ ಯಾವುದೇ ರೀತಿಯ ಜೀವನಾಂಶವನ್ನು (Alimony) ಕೇಳಿಲ್ಲ. ಈ ಬಗ್ಗೆ ವಕೀಲರು ಸ್ಪಷ್ಟನೆ ನೀಡುತ್ತಾ, ನಮ್ಮ ಕಕ್ಷಿದಾರರು ಯಾವುದೇ ಹಣಕಾಸಿನ ಹಕ್ಕುಗಳನ್ನು ಅಥವಾ ಜೀವನಾಂಶವನ್ನು ಕೇಳಿಲ್ಲ. ಅವರ ಏಕೈಕ ಉದ್ದೇಶ ಗೌರವಯುತವಾಗಿ ಮತ್ತು ಶಾಂತಿಯುತವಾಗಿ ಈ ಸಂಬಂಧವನ್ನು ಮುಕ್ತಾಯಗೊಳಿಸುವುದಾಗಿತ್ತು. ಅವರು ಈಗ ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾಗಳತ್ತ ಗಮನಹರಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net