ಸಿನಿಮಾ ಬ್ಯಾನ್ ಮಾಡಿದ್ರೂ ಕ್ರೇಜ್ ಕಮ್ಮಿಯಾಗಿಲ್ಲ; ಧುರಂಧರ್ ಹಾಡಿಗೆ ಸ್ಟೆಪ್ ಹಾಕಿದ ಪಾಕ್ ಸೈನಿಕರು: ವಿಡಿಯೋ ವೈರಲ್ | Dhurandhar
ಧುರಂಧರ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕುತ್ತಿರುವ ಪಾಕ್ ಸೈನಿಕರು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಾಕಿಸ್ತಾನದಲ್ಲಿ ಬ್ಯಾನ್ ಆಗಿರುವ ಬಾಲಿವುಡ್ ಸಿನಿಮಾ ಧುರಂಧರ್
ಅದರೆ ಧುರಂಧರ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿರುವ ಪಾಕ್ ಸೈನಿಕರು
ಎಷ್ಟೇ ಆದರೂ ಒಮದು ಕಾಲದಲ್ಲಿ ಇವರು ಭಾರತೀಯರಲ್ಲವೇ ಎಂದ ನೆಟ್ಟಿಗರು
ಪಾಕಿಸ್ತಾನ: ರಣವೀರ್ ಸಿಂಗ್ ನಟನೆಯ ಮತ್ತು ಆದಿತ್ಯ ಧರ್ ನಿರ್ದೇಶನದ ಧುರಂಧರ್ (Dhurandhar) ಸಿನಿಮಾ ಪಾಕಿಸ್ತಾನದಲ್ಲಿ ಬ್ಯಾನ್ ಆಗಿರುವ ವಿಷಯ ಹೊಸತೇನಲ್ಲ. ಆದರೆ ಇದೇ ಸಿನಿಮಾದ ಹಾಡಿಗೆ ಪಾಕಿಸ್ತಾನದ ಸೇನೆಯ ಸೈನಿಕರು ಡಾನ್ಸ್ ಮಾಡುತ್ತಿರುವ ವಿಡಿಯೋ ಈದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಧುರಂಧರ್ ಸಿನಿಮಾದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂದು ತೋರಿಸಿದ ಹಿನ್ನಲೆಯಲ್ಲಿ ಈ ಸಿನಿಮಾವನ್ನು ಪಾಕಿಸ್ತಾನ ಸೇರಿದಂತೆ ಏಳು ಗಲ್ಫ್ ದೇಶಗಳಲ್ಲಿ ಬ್ಯಾನ್ ಮಾಡಲಾಗಿತ್ತು. ಆದರೆ ಇದೇ ಸಿನಿಮಾದ ಹಾಡಾದ FA9LA ಗೆ ಪಾಕ್ ಸೈನಿಕರು ಕುಣಿಯುತ್ತಿರುವುದು ಈಗ ಎಲ್ಲಡೆ ಸದ್ದು ಮಾಡುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋನಲ್ಲಿ FA9LA ಹಾಡು ಕೇಳುತ್ತಿದ್ದಂತೆ ಮೂರು ಜನ ಪಾಕ್ ಸೈನಿಕರು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿರುವುದನ್ನು ನಾವು ನೋಡಬಹುದಾಗಿದೆ.
ಕಮೆಂಟ್ಗಳ ಸುರಿಮಳೆ
ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ್ಟಿಗರಿಂದ ಕಮೆಂಟ್ಗಳ ಸುರಿಮಳೆಯೇ ಹರಿದುಬಂದಿದೆ. ಒಬ್ಬ ಬಳಕೆದಾರರು ಕಲೆ ಮತ್ತು ಸಂಗೀತಕ್ಕೆ ಯಾವುದೇ ಗಡಿಯಿರುವುದಿಲ್ಲ ಎಂದರೆ, ಇನ್ನೊಬ್ಬ ಬಳಕೆದಾರರು ಇವರು ಈ ಹಾಡಿಗೆ ಕುಣಿಯುವ ಮೂಲಕ ತಮ್ಮ ದೇಶದ ಕಾನೂನನ್ನು ವಿರೋಧಿಸಿದ್ದಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ಎಷ್ಟೇ ಆದರೂ ಇವರು ಒಂದು ಕಾಲದಲ್ಲಿ ಭಾರತೀಯರೇ ಆಗಿದ್ದರಿಂದ ಭಾರತದ ಸಿನಿಮಾದ ಹಾಡಿಗೆ ಕುಣಿದಿದ್ದಾರಷ್ಟೇ ಎಂದು ಹೇಳಿದ್ದಾರೆ.
ಪಾಕ್ ಕಾಳಸಂತೆಯಲ್ಲಿ ಧುರಂಧರ್ ದರ್ಬಾರ್
ಕೇವಲ ಸೇನೆಯಷ್ಟೇ ಅಲ್ಲದೆ, ಪಾಕಿಸ್ತಾನದ ಕಾಳಸಂತೆಯಲ್ಲಿ ಧುರಂಧರ್ ಸಿನಿಮಾದ ಸಿಡಿ ಬಿಸಿ ತುಪ್ಪದಂತೆ ಮಾರಾಟವಾಗುತ್ತಿದೆ ಎಂದು ವಿದೇಶಿ ಯುಟ್ಯೂಬರ್ ಒಬ್ಬ ಇತ್ತೀಚೆಗೆ ಹಂಚಿಕೊಂಡಿದ್ದರು. ಧುರಂಧರ್ ಸಿನಿಮಾದ ಸಿಡಿಗಳು ಕೇಲವ 50 ರೂಪಾಯಿಗೆ ಪಾಕಿಸ್ತಾನದಲ್ಲಿ ಮಾರಾಟವಾಗಿದ್ದ ಸುದ್ದಿ ಬಳಿಕ ಈಗ ಪಾಕ್ ಸೈನಿಕರಿಗೂ ಸಹ ಭಾರತದ ಸಿನಿಮಾದ ಜ್ವರ ಹಿಡಿದಿದೆ ಎಂದು ಹೇಳಬಹುದಾಗಿದೆ.
ಧುರಂಧರ್ ಸಿನಿಮಾದ ಮೊದಲ ಭಾಗದ ನಂತರ ಸಿನಿಮಾದ ಎರಡೇ ಭಾಗವು ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಡಿಸೆಂಬರ್ ತಿಂಗಳಲ್ಲಿ ತೆರೆಕಂಡಿದ್ದರೂ ಸಹ ಧುರಂಧರ್ 2025 ರಲ್ಲಿ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾವಾಗಿ ಹೊರಬಿದ್ದಿತ್ತು. ಈ ಸಿನಿಮಾ ಸರಿ ಸುಮಾರು 1000 ಕೋಟಿಗೂ ಅಧಿಕ ಹಣವನ್ನು ಕೊಳ್ಳೆಹೊಡೆದಿತ್ತು.
ತನ್ನ ಮೊದಲ ಭಾಗದ ರೀತಿಯಲ್ಲಿಯೇ ಧುರಂಧರ್ 2 ಸಿನಿಮಾ ಕೂಡ ಇರಲಿದೆ ಎಂದು ಹೇಳಲಾಗುತ್ತಿದ್ದು, ರಣವೀರ್ ಸಿಂಗ್, ಸಂಜಯ್ ದತ್ತ್, ಆರ್. ಮಾಧವನ್, ಸಾರಾ ಅರ್ಜುನ್, ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯುಸಲಿದ್ದು, ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).