ಪಾಕ್ ಮಾಜಿ ಪ್ರಧಾನಿಗೂ ಚಾನ್ಸ್ ಕೊಟ್ಟರಾ ಆದಿತ್ಯ ಧರ್? ಧುರಂಧರ್​ 2 ನಲ್ಲಿ ಶರೀಫ್ ಪಾತ್ರ ನೋಡಿ ಫಿದಾ ಆದ ಫ್ಯಾನ್ಸ್; ಯಾರು ಈ ಮಶ್ಹೂರ್ ಅಮ್ರೋಹಿ?NawazSharif in Dhurandhar 2

ಸಿನಿಮಾದಲ್ಲಿ ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​ ಪಾತ್ರ ಸಖತ್​ ವೈರಲ್​
ಸಿನಿಮಾದಲ್ಲಿ ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​ ಪಾತ್ರ ಸಖತ್​ ವೈರಲ್​
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​ 2
  • ಮೊದಲ ದಿನವೇ 143 ಕೋಟಿ ಕಲೆಕ್ಷನ್​
  • ಸಿನಿಮಾದಲ್ಲಿ ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​ ಪಾತ್ರ ಸಖತ್​ ವೈರಲ್​
ಬಾಲಿವುಡ್​: ಗುರುವಾರ (ಮಾರ್ಚ್​ 19) ಧುರಂಧರ್​ 2: ದಿ ರಿವೆಂಜ್​ ಸಿನಿಮಾ ತೆರೆಕಂಡ ಬೆನ್ನಲ್ಲೇ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ತೆರೆಕಂಡ ಮೊದಲ ದಿನವೇ ಸುಮಾರು 143 ಕೋಟಿ ಗಳಿಸುವ ಮೂಲಕ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಿನಿಮಾ ತನ್ನ ಅಮೋಘ ಪ್ರದರ್ಶನದ ಜೊತೆಗೆ ಹಲವಾರು ರೀತಿಯ ವಿವಾದಗಳಿಗೂ ಸಹ ಹೆಸರುವಾಸಿಯಾಗುತ್ತಿದೆ. ಈ ಸಿನಿಮಾದಲ್ಲಿ ನೀಜ ಜೀವನದಲ್ಲಿ ಬದುಕಿರುವ ಹಾಗೂ ಸತ್ತಿರುವ ಅದೇ ರೀತಿ ನೈಜ ಘಟನೆಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿರುವ ಕಾರಣ ನಾನಾ ರೀತಿಯ ವಿವಾದಗಳು ಕೇಳಿಬರುತ್ತಿದೆ.

ಧುರಂಧರ್​ನಲ್ಲಿ ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​!

ರಣವೀರ್ ಸಿಂಗ್​ ಮುಖ್ಯಬೂಮಿಕೆಯಲ್ಲಿ ನಟಿಸಿರುವ ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್​ ಶರೀಫ್ (NawazSharif in Dhurandhar 2) ಅವರ ಪಾತ್ರವನ್ನು ಸಹ ತೋರಿಸಿದ್ದಾರೆ.
ಬಾಲಿವುಡ್​ ನಟ ಮಶ್ಹೂರ್ ಅಮ್ರೋಹಿ (ನವಾಬ್​ ಶರೀಫ್​) ಅವರು ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ಇವರು ಚುನಾವಣಾ ಪ್ರಚಾರದಲ್ಲಿ ಹಮ್ಜಾ ಅಲಿ ಮಜಾರಿ (ರಣವೀರ್​ ಸಿಂಗ್​ ಪಾತ್ರ) ಜೊತೆ ಇರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಪ್ರೇಕ್ಷಕರ ರಿಯಾಕ್ಷನ್​ ಹೇಗಿದೆ?

ನವಾಜ್​ ಶರೀಫ್​ ಅವರ ಪಾತ್ರದಲ್ಲಿ ಮಶ್ಹೂರ್ ಅಮ್ರೋಹಿ ಅವರನ್ನು ನೋಡಿದ ಜನ ಮಶ್ಹೂರ್ ಅಮ್ರೋಹಿ ಅವರನ್ನೇ ನಿಜವಾದ ನವಾಜ್​ ಶರೀಫ್​ ಎಂದು ಭಾವಿಸಿದ್ದಾರೆ.
ನಾನಂತೂ ನಿಜವಾಗಿ ನವಾಜ್​ ಶರೀಫ್​ ಅವರೇ ನವಾಜ್​ ಶರೀಫ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದಿದ್ದೆ ಎಂದು ಒಬ್ಬರು ಹೇಳಿದರೆ, ಆದಿತ್ಯ ಧರ್​ ತನ್ನ ಸಿನಿಮಾದಲ್ಲಿ ಪಾಕ್​ ಪ್ರಧಾನಿಗೂ ಒಂದು ಅವಕಾಶ ನೀಡಿದ್ದಾರೆ ಎಂದು ಇನ್ನೊಬ್ಬರು ವ್ಯಂಗ್ಯ ಮಾಡಿದ್ದಾರೆ.

ಯಾರು ಈ ಮಶ್ಹೂರ್ ಅಮ್ರೋಹಿ ?

ಮಶ್ಹೂರ್ ಅಮ್ರೋಹಿ ಒಬ್ಬ ಬಾಲಿವುಡ್ ನಟ ಮತ್ತು ನಿರ್ದೇಶಕ, ಇವರು ಭಾರತೀಯ ಚಿತ್ರರಂಗದ ಹೆಸರಾಂತ ಅಮ್ರೋಹಿ ಕುಟುಂಬಕ್ಕೆ ಸೇರಿದವರು (ದಿಗ್ಗಜ ನಿರ್ದೇಶಕ ಕಮಾಲ್ ಅಮ್ರೋಹಿ ಅವರ ಮೊಮ್ಮಗ).
ಇತ್ತೀಚೆಗೆ ತೆರೆಕಂಡ 'ಧುರಂಧರ್ 2: ದಿ ರಿವೆಂಜ್' ಸಿನಿಮಾದಲ್ಲಿ ಇವರು ನಿರ್ವಹಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಹೋಲಿಕೆಯ ಪಾತ್ರವು ಅಪಾರ ಗಮನ ಸೆಳೆದಿದೆ. ಸಿನಿಮಾದಲ್ಲಿ ನವಾಬ್ ಶರೀಫ್ ಆಗಿ ಅವರ ನಟನೆ ಮತ್ತು ದೈಹಿಕ ಹೋಲಿಕೆ ಎಷ್ಟು ನಿಖರವಾಗಿದೆಯೆಂದರೆ, ಅನೇಕ ಪ್ರೇಕ್ಷಕರು ಇದನ್ನು ನಿಜವಾದ ನವಾಜ್ ಶರೀಫ್ ಅವರೇ ನಟಿಸಿದ್ದಾರೆ ಎಂದು ಭ್ರಮಿಸುವಷ್ಟು ಅದ್ಭುತವಾಗಿ ಮೂಡಿಬಂದಿದೆ.

ಮೋದಿ ಇನ್​ ಧುರಂಧರ್​!

ಸಿನಿಮಾದ ಕಥೆಯ ಓಟದಲ್ಲಿ ಪ್ರಧಾನಿ ಮೋದಿ ಅವರ ಎರಡು ಐತಿಹಾಸಿಕ ಕ್ಷಣಗಳನ್ನು ಬಳಸಿಕೊಳ್ಳಲಾಗಿದೆ. ಮೊದಲನೆಯದಾಗಿ, 2014ರಲ್ಲಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ದೂರದರ್ಶನದ ದೃಶ್ಯ. ಎರಡನೆಯದಾಗಿ, 2016ರಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ನೋಟು ಅಮಾನ್ಯೀಕರಣದ (Demonetization) ಭಾಷಣದ ತುಣುಕುಗಳನ್ನುಬಳಸಿಕೊಳ್ಳಲಾಗಿದೆ.
ಪರದೆಯ ಮೇಲೆ ಪ್ರಧಾನಿ ಮೋದಿ ಅವರ ಮುಖ ಕಾಣುತ್ತಿದ್ದಂತೆಯೇ ಪ್ರೇಕ್ಷಕರು ಜೈಕಾರ ಹಾಕುತ್ತಾ, ಶಿಳ್ಳೆ ಹೊಡೆಯುತ್ತಾ ಸಂಭ್ರಮಿಸುತ್ತಿರುವ ವಿಡಿಯೋಗಳು ಈಗ X (ಟ್ವಿಟರ್) ಸೇರಿದಂತೆ ಎಲ್ಲಾ ಕಡೆ ವೈರಲ್ ಆಗುತ್ತಿವೆ, (ಏಜನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net