ಧುರಂಧರ್ 2 ಟ್ರೇಲರ್ ರೀಲೀಸ್: ಲಿಯಾರಿಯಲ್ಲಿ ಹರಿಯಲಿದೆ ರಕ್ತದ ಹೊಳೆ; ಇನ್ನೂ ನಿಗೂಢವಾಗೆ ಉಳಿದ ಬಡೇ ಸಾಬ್!Dhurandhar 2 Trailer
ಧುರಂಧರ್ 2 ಚಿತ್ರದ ಟ್ರೇಲರ್ ಬಿಡುಗಡೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಧುರಂಧರ್ 2 ಚಿತ್ರದ ಟ್ರೇಲರ್ ಬಿಡುಗಡೆ
ಲಿಯಾರಿಯ ಸಿಂಹಾಸನಕ್ಕಾಗಿ ಭಾರಿ ಹೋರಾಟ
ನಿಗೂಢವಾಗಿ ಉಳಿದ ಬಡೇ ಸಾಬ್ ಪಾತ್ರ!
ಬಾಲಿವುಡ್: ಭಾರತ ಚಿತ್ರರಂಗದ ಬಹು ನೀರಿಕ್ಷಿತಿ ಸಿನಿಮಾ ಧುರಂಧರ್ 2 (Dhurandhar 2 Trailer) ಸಿನಿಮಾದ ಟ್ರೇಲರ್ ಈಗ ಹೊರಬಿದ್ದಿದ್ದು ಈ ಸಿನಿಮಾ ಮಾರ್ಚ್ 19 ಕ್ಕೆ ಬಿಡುಗಡೆಯಾಗಲಿದೆ.
ಸಿನಿಮಾ ತಂಡ ಹೇಳಿದಂತೆ ಮಾರ್ಚ್ 7 ಬೆಳಿಗ್ಗೆ 11.01 ಕ್ಕೆ ರೀಲೀಸ್ ಆದ ಟ್ರೇಲರ್ ಸುಮಾರು 3.26 ಸೆಕೆಂಡ್ ಉದ್ದವಿದ್ದು, ಹಿಂದಿ ಜೊತೆಗೆ ಕನ್ನಡ, ತಲಗು, ತಮಿಳು ಮತ್ತು ಮಳಿಯಾಳಂ ಭಾಷೆಯಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.
ಧುರಂಧರ್ ಮೊದಲ ಭಾಗ ಎಲ್ಲಿ ಕೊನೆಯಾಗಿತ್ತೊ ಅದರ ನಂತರ ಲಿಯಾರಿಯಲ್ಲಿ ಏನಾಯಿತು ಎನ್ನುವುದು ಈ ಸಿನಿಮಾದಲ್ಲಿ ನೋಡ ಬಹುದಾಗಿದೆ. ಟ್ರೇಲರ್ನಲ್ಲಿ ಹಮ್ಜಾ ಅಲಿ ಮಜಾರಿ (ರಣವೀರ್ ಸಿಂಗ್) ಪಾಕಿಸ್ತಾನಕ್ಕೆ ಬರುವ ಮುನ್ನ ಏನು ಮಾಡುತ್ತಿದ್ದ ಎನ್ನುವ ದೃಶ್ಯವನ್ನು ನೋಡಬಹುದು.
ಲಿಯಾರಿ ಕಿಂಗ್ ರೆಹಮಾನ್ ಡಕೈತ್ (ಅಕ್ಷಯ್ ಖನ್ನಾ) ಮರಣ ಹೊಂದಿದ್ದು, ರೆಹಮಾನ್ ನಂತರ ಲಿಯಾರಿಯ ಸಿಂಹಾಸನಕ್ಕೆ ನಡೆಯುವ ಕಾಳಗವನ್ನು ನಾವು ನೋಡಬಹುದು. ಹಾಗೆಯೇ ಲಿಯಾರಿಯಿಂದ ಭೂಗತ ಜಗತನ್ನು ನಾಶ ಮಾಡಲು ಪಣ ತೊಟ್ಟಿರುವ ಎಸ್ಪಿ ಚೌಧರಿ ಅಸ್ಲಂ (ಸಂಜಯ್ ದತ್ತ್) ಯಾವ ರೀತಿ ಕಾರ್ಯಾಚರಣೆ ಮಾಡಲಿದ್ದಾರೆ ಎನ್ನುವುದಕ್ಕೆ ಮಾರ್ಚ್ 19 ರಂದು ಉತ್ತರ ದೊರೆಯಲಿದೆ.
ಅದೇ ರೀತಿ ಐಎಸ್ಐ ಮುಖ್ಯಸ್ಥ ಮೇಜರ್ ಇಲ್ಯಾಸ್ ಕಶ್ಮೀರಿ ಭಾರತದ ವಿರುದ್ಧ ಏನು ಸಂಚನ್ನು ರೂಪಿಸುತ್ತಿದ್ದಾನೆ ಮತ್ತು ಅದನ್ನು ನಮ್ಮ ನಾಯಕ ಹೇಗೆ ತಡೆಯುತ್ತಾನೆ ಎನ್ನುವುದನ್ನು ಕಣ್ಣತುಂಬಿಕೊಳ್ಳಲು ಮಾರ್ಚ್ 19 ರ ವರೆಗೆ ಕಾಯಲೇ ಬೇಕಾಗಿದೆ.
ಬಡೇ ಸಾಬ್ ಯಾರು?
ಧುರಂಧರ್ 2 ಸಿನಿಮಾದಲ್ಲಿ ಬಡೇ ಸಾಬ್ ಎಂಬ ಪಾತ್ರ ಭಾರಿ ಚರ್ಚೆಗೆ ಗ್ರಾಸವಾಗಿತ್ತು, ಆದರೆ ಈ ಪಾತ್ರದ ಬಗ್ಗೆ ಟ್ರೇಲರ್ನಲ್ಲಿ ಯಾವುದೇ ಉತ್ತರ ದೊರೆತಿಲ್ಲ. ಬಹುಶಃ ಈ ಪಾತ್ರವನ್ನು ನೇರವಾಗಿ ಸಿನಿಮಾದಲ್ಲಿಯೇ ತೋರಿಸಬಹುದು ಎನ್ನುವುದು ಸಿನಿಮಾ ವಿಶ್ಲೇಷಕರ ವಾದವಾಗಿದೆ.
ಇನ್ನೂ ಈ ಬಡೇ ಸಾಬ್ ಪಾತ್ರ ಯಾರನ್ನು ಪ್ರೇರೆಪಣೆ ಪಡೆದು ನಿರ್ಮಿಸಲಾಗಿದೆ ಎನ್ನುವುದಕ್ಕೂ ಯಾವುದೇ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ. ಕೆಲವೊಬ್ಬರು ಇದು ಭೂಗತ ದೊರೆ ದಾವೂದ್ ಇಬ್ರಾಹಿಂನನ್ನು ಪ್ರೇರಣೆಯಾಗಿ ತೆಗೆದುಕೊಂಡ ಪಾತ್ರ ಎಂದರೆ ಇನ್ನೂ ಕೆಲವರು ಇದು ಪಾಕಿಸ್ತಾನದ ಮಾಜಿ ಪ್ರಧಾನಿ ಪರವೇಜ್ ಮುಷರಫ್ ಅವರದ್ದು ಎಂದು ಹೇಳುತ್ತಿದ್ದಾರೆ. ಆದರೆ ಈ ಎಲ್ಲಾ ಅಂತೆ ಕಂತೆಗಳಿಗೆ ಮಾರ್ಚ್ 19 ರಂದೇ ಉತ್ತರ ದೊರೆಯಲಿದೆ.
ಧುರಂಧರ್ ಬಗ್ಗೆ
ಧುರಂಧರ್ ಇದೊಂದು ಸ್ಪೈ-ತ್ರಿಲ್ಲರ್ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್ ಮಾಡಿತ್ತು.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷನ್ ಖನ್ನಾ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ತ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್).