ಧುರಂಧರ್ 2 ಸಾವಿರ ಕೋಟಿ ಕಲೆಕ್ಷನ್: ಕತೆ ನಮ್ಮೂರಿನದು; ಲಾಭದಲ್ಲಿ ಪಾಲು ಬೇಕೆಂದ ಪಾಕಿಸ್ತಾನಿಗಳು!Dhurandhar 2

ಧುರಂಧರ್ 2 ಸಿನಿಮಾದ ಲಾಭದ ಮೇಲೆ ಲಿಯಾರಿ ಜನರ ಕಣ್ಣು
ಧುರಂಧರ್ 2 ಸಿನಿಮಾದ ಲಾಭದ ಮೇಲೆ ಲಿಯಾರಿ ಜನರ ಕಣ್ಣು
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್ ಆಫೀಸ್​ನಲ್ಲಿ ಧುರಂಧರ್ 2 ನಾಗಾಲೋಟ
  • ಧುರಂಧರ್ 2 ಸಿನಿಮಾದ ಲಾಭದ ಮೇಲೆ ಲಿಯಾರಿ ಜನರ ಕಣ್ಣು
  • ನಮಗೆ ಶೇ.70-80 ಲಾಭದ ಮೊತ್ತವನ್ನು ನೀಡಿ ಎಂದ ಪಾಕ್​ ಪ್ರಜೆಗಳು
  • ಇದು ನಮ್ಮೂರಿನ ಕಥೆ; ನಮಗೆ ಹಣ ಕೊಡಲ್ಲ ಎಂದರೆ ಹೇಗೆ?
ಕರಾಚಿ: ಮಾರ್ಚ್​ 19 ರಂದು ತೆರೆಕಂಡು ಬಾಕ್ಸ್​ ಆಫೀಸಿನಲ್ಲಿ ಧುರಂಧರ್​ 2 ಅಬ್ಬರಿಸುತ್ತಿರುವುದು ಎಲ್ಲರಿಗು ತಿಳಿದ ವಿಷಯವೇ ಆಗಿದೆ. ರಣವೀರ್​ ಸಿಂಗ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹಾಗೂ ಆದಿತ್ಯ ಧರ್​ ನಿರ್ದೇಶನದ ಈ ಸಿನಿಮಾ ಈಗಾಗಲೇ ಸಾವಿರ ಕೋಟಿ ಕಲೆಕ್ಷನ್​ ಮಾಡಿ ತನ್ನ ನಾಗಾಲೋಟವನ್ನು ಮುಂದುವರೆಸಿದೆ.

ನಮಗೆ ಲಾಭದಲ್ಲಿ ಪಾಲು ಬೇಕು!

ಪಾಕಿಸ್ತಾನದ ಕರಾಚಿಯಲ್ಲಿರುವ ಲಿಯಾರಿಯ ಭೂಗತ ಲೋಕವನ್ನು ಈ ಸಿನಿಮಾದಲ್ಲಿ ತೋರಿಸಿರುವ ಕಾರಣಕ್ಕೆ ಹಾಗೂ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಚಿತ್ರಿಸಿರುವ ಕಾರಣ, ಈ ಸಿನಿಮಾವನ್ನು ಪಾಕ್​ ಸರ್ಕಾರ ಬ್ಯಾನ್​ ಮಾಡಿದೆ.
ಆದರೂ ಕಾಳಸಂತೆಯಲ್ಲಿ ಪಾಕ್​ ಪ್ರಜೆಗಳು ಈ ಸಿನಿಮಾವನ್ನು ಖರೀದಿಸಿ, ನೋಡಿರುವುದು ಸುಳ್ಳಲ್ಲ. ಈಗ ಈ ಜನರು ಸಿನಿಮಾದಲ್ಲಿ ತಮ್ಮ ಊರಿನ ಕಥೆಯನ್ನು ಹೇಳಿದ್ದರಿಂದ ತಮಗೆ ಲಾಭದಲ್ಲಿ ಪಾಲನ್ನು ಧುರಂಧರ್​ ಸಿನಿಮಾ ತಂಡ ನೀಡ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಇಲ್ಲಿ ಒಂದು ಸರಿಯಾದ ರಸ್ತೆ ಇಲ್ಲ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಲಿಯಾರಿಯ ಜನರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ಹೇಳಿಕೊಂಡಿರುವ ಘಟನೆ ನಡೆದಿದೆ.
ಭಾರತವು ನಮ್ಮ ಊರಿನ ಕಥೆಯನ್ನು ಈಡೀ ಪ್ರಪಂಚಕ್ಕೆ ತಿಳಿಸಿ, ಕೋಟಿಗಟ್ಟಲೆ ದುಡ್ಡನ್ನು ಗಳಿಸಿದೆ. ಆದರೆ ಈ ಕಥೆಯ ಮೂಲವಾದ ನಮ್ಮೂರಿಗೆ ಇವರು ಯಾವುದೇ ಸಹಾಯ ಮಾಡಿಲ್ಲ.
ಹೀಗಾಗಿ ಧುರಂಧರ್​ ಸಿನಿಮಾ ತಂಡದವರು ಗಳಿಸಿರುವ ಲಾಭದಲ್ಲಿ ನಮಗೆ ಶೇಕಡಾ. 70-80 ರಷ್ಟು ಹಣವನ್ನು ಲಿಯಾರಿ ಜನರಿಗೆ ಹಂಚಬೇಕು, ನಾನು ಈ ಹಣವನ್ನು ಇಲ್ಲಿ ಅಗತ್ಯವಿರುವ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸಲು ಬಳಸುವುದಾಗಿ ತಿಳಿಸಿದ್ದಾರೆ.
ನಮ್ಮ ಈ ನಾಲಾಯಕ್​ ಸರ್ಕಾರ ಒಂದು ಸರಿಯಾದ ರಸ್ತೆ, ಶೌಚಾಲಯ, ಶಾಲೆ ಏನನ್ನು ನಿರ್ಮಿಸಿಲ್ಲ, ಧುರಂಧರ್​ ಸಿನಿಮಾದವರು ದಯಮಾಡಿ ನಮಗೆ ಸಹಾಯ ಮಾಡಿ ಎಂದು ಲಿಯಾರಿ ಜನ ಗೋಗರಿದಿರುವ ವಿಡಿಯೋ ಈಗ ಫುಲ್​ ವೈರಲ್​ ಆಗುತ್ತಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದಂತೆ ನೆಟ್ಟಿಗರು ತಮ್ಮ ಕೈಗೆ ಕೆಲಸ ಕೊಟ್ಟಿದ್ದಾರೆ. ಅಯ್ಯೋ ನಿಮ್ಮ ಬದುಕು ನಾಯಿಗಿಂತ ಕಡೆದಾಗಿದೆ ಅಲ್ರೋ ಎಂದು ಒಬ್ಬರು ಹೇಳಿದರೆ, ಭಯೋತ್ಪಾದಕರನ್ನು ಸಾಕಿದ ಫಲವನ್ನು ನೀವು ಅನುಭವಿಸುತ್ತಿದ್ದಿರಿ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಭಾರತ ನಿಮ್ಮ ಶತ್ರು ದೇಶ ಅಲ್ವಾ, ಅವರ ಬಳಿ ಏಕೆ ಭಿಕ್ಷೆ ಬೇಡುತ್ತಿರಿ, ನಿಮ್ಮ ದೋಸ್ತ್​ ಚೀನಾ ಬಳಿ ಹೋಗಿ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಕಮೆಂಟ್​ ಮೂಲಕ ತಿಳಿಸಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net