ಧುರಂಧರ್ 2 ಕ್ರೇಜ್: ಒಂದು ಕಣ್ಣು ಸ್ಕ್ರೀನ್ ಮೇಲೆ, ಇನ್ನೊಂದು ಲ್ಯಾಪ್‌ಟಾಪ್ ಮೇಲೆ; ವೈರಲ್ ವಿಡಿಯೋ ನೋಡಿ ಶಾಕ್ ಆದ ನೆಟ್ಟಿಗರು! Dhurandhar 2

ಸಿನಿಮಾ ನೋಡುತ್ತಲೇ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್​
ಸಿನಿಮಾ ನೋಡುತ್ತಲೇ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್​
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಹೆಚ್ಚಾದ ಧುರಂಧರ್ 2 ಕ್ರೇಜ್​
  • ಸಿನಿಮಾ ನೋಡುತ್ತಲೇ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್​
  • ನೆಮ್ಮದಿಯಾಗಿ ಒಂದು ಸಿನಿಮಾ ನೋಡಲು ಬಿಡದ ಕೆಲಸವನ್ನು ಏಕೆ ಮಾಡಬೇಕೆಂದ ನೆಟ್ಟಿಗರು
ವೈರಲ್​: ಸದ್ಯ ಭಾರತದಲ್ಲಿ ಎಲ್ಲಿ ಕೇಳಿದರೂ ಧುರಂಧರ್​ 2 (Dhurandhar 2) ನದ್ದೇ ಹವಾ ಎದ್ದಿದೆ. ಬಿಡುಗಡೆಯಾದ ಮೂರೇ ದಿನದಲ್ಲಿ ಸುಮಾರು 350 ಕೋಟಿಗೂ ಅಧಿಕ ಕಲೆಕ್ಷನ್​ ಮಾಡುತ್ತಾ ಸಾವಿರ ಕೋಟಿ ಕ್ಲಬ್​ ಸೇರುವ ಲಕ್ಷಣ ಕಾಣಿಸುತ್ತಿದೆ.
ಈ ಸಿನಿಮಾದ ಕ್ರೇಜ್​ ಯಾವ ಮಟ್ಟ ತಲುಪಿದೆ ಎಂದರೆ ಸಿನಿಮಾ ಮಂದಿರಗಳಂತು ತುಂಬಿ ತುಳುಕುತ್ತಿದ್ದು, ಹಿಂದಿನ ಕಾಲದಲ್ಲಿ ನಡೆಯುತ್ತಿದ್ದಂತೆ ಕಾಳಸಂತೆ (ಬ್ಲಾಕ್​ ಟಿಕೆಟ್​) ಯಲ್ಲಿ ಟಿಕೆಟ್​ ಬಿಕರಿಯಾಗುತ್ತಿದೆ ಎಂದರೆ ನೀವು ನಂಬಲೇ ಬೇಕು.
ಆದರೆ ಈ ಸಿನಿಮಾ ಸುಮಾರು ನಾಲ್ಕು ಗಂಟೆ ಉದ್ದದ ಕಾಲಮಿತಿ ಹೊಂದಿರುವುದರಿಂದ ಕೆಲಸಕ್ಕೆ ತೆರಳುವವರಿಗೆ ಇದೊಂದು ಚಿಕ್ಕ ಮಟ್ಟದ ಸಮಸ್ಯೆಯಾಗಿದೆ. ಕೆಲಸದ ಒತ್ತಡ ಹಾಗೂ ಸಿನಿಮಾ ಎರಡನ್ನು ನಿಭಾಯಿಸುತ್ತಿರುವ ಒಬ್ಬ ಮಹಿಳೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಒಂದು ಕಣ್ಣು ಸಿನಿಮಾ ಪರದೆ ಮೇಲೆ; ಇನ್ನೊಂದು ಲ್ಯಾಪ್​ಟಾಪ್​ ಮೇಲೆ!

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋನಲ್ಲಿ ಒಬ್ಬ ಮಹಿಳೆ ತೊಡೆಯ ಮೇಲೆ ಲ್ಯಾಪ್​ಟಾಪ್​ನ್ನು ಇಟ್ಟುಕೊಂಡು ತನ್ನ ಕೆಲಸವನ್ನು ಮಾಡುತ್ತಾ, ಪಾಪ್​ಕಾರ್ನ್​ ತಿನ್ನತ್ತಾ, ಧುರಂಧರ್ ಸಿನಿಮಾ ನೋಡುತ್ತಿರುವ ವಿಡಿಯೋ ಫುಲ್​ ವೈರಲ್​ ಆಗುತ್ತಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ವೈರಲ್​ ಆಗುತ್ತಿದಂತೆ ನೆಟ್ಟಿಗರ ಕಿವಿ ಮತ್ತು ಕೈ ನೆಟ್ಟಗಾಗಿದೆ. ಸಿನಿಮಾ ನೋಡುವಾಗಲು ಈಕೆ ಕೆಲಸ ಮಾಡುತ್ತಿದ್ದಾಳೆಂದರೆ ಕೆಲಸದ ಮೇಲೆ ಇಕೆಗೆ ಎಷ್ಟು ನಿಷ್ಠೆ ಇದೆ ಎಂದು ತಿಳಿಯುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಒಂದು ಸಿನಿಮಾವನ್ನು ನೆಮ್ಮದಿಯಾಗಿ ನೋಡಲಾಗದ ಕೆಲಸವನ್ನು ಈಕೆ ಏಕೆ ಮಾಡಬೇಕೆಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net