'Dhurandhar 2' ಸಿನಿಮಾ ನೋಡಿಲ್ಲ, ಹೊಗಳಿಲ್ಲ; ಈ ರೀತಿಯ ಮೌನವೇಕೆ ದೀಪಿಕಾ ಎನ್ನುತ್ತಿದ್ದ ಟ್ರೋಲರ್ಸ್​ಗೆ ನಟಿ ಹೇಳಿದ್ದಿಷ್ಟು

Dhurandhar 2
Dhurandhar 2
Published on

ಪ್ರಮುಖ ಮುಖ್ಯಾಂಶಗಳು

  • ರಣವೀರ್​ ಸಿಂಗ್​​ ನಟನೆಯ ಧುರಂಧರ್​2 ಸಿನಿಮಾ ಭಾರತದಲ್ಲಿ 1,000 ಕೋಟಿ ರೂಪಾಯಿ ಗಳಿಕೆ
  • 'ಧುರಂಧರ್ 2' ಯಶಸ್ಸನ್ನು ದೀಪಿಕಾ ಪಡುಕೋಣೆ ಸಂಭ್ರಮಿಸಿಲ್ಲ ಯಾಕೆ ಎಂದ ನೆಟ್ಟಿಗರು?
  • ನಿಮ್ಮೆಲ್ಲರಿಗಿಂತ ಮೊದಲೇ ನಾನು ಈ ಸಿನಿಮಾ ನೋಡಿದ್ದೇನೆ ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದ ರಣವೀರ್
Dhurandhar 2: ಸಿನಿಮಾವು ಬಾಕ್ಸ್​ ಆಫೀಸಿನಲ್ಲಿ ಧೂಳೆಬ್ಬಿಸಿದೆ. ಸಿನಿ ತಾರೆಯರು ರಣವೀರ್​ ಸಿಂಗ್​​ ಆಕ್ಟಿಂಗ್, ಚಿತ್ರದ ಮೇಕಿಂಗ್​ ಬಗ್ಗೆ ಹೊಗಳಿಕೆಯ ಮಹಾಪೂರವೇ ಹರಿಸುತ್ತಿದ್ದಾರೆ. ಆದರೆ, ದೀಪಿಕಾ ಪಡುಕೋಣೆ ಮಾತ್ರ ಮೌನವಾಗಿರೋದ್ಯಾಕೆ ತನ್ನ ಪತಿ ಸಿನಿಮಾದ ಬಗ್ಗೆ ಮಾತನಾಡದೆ, ಹೊಗಳದೆ, ಪೋಸ್ಟ್​ ಹಾಕಿಕೊಳ್ಳದೆ ಇರೋದು ಯಾಕೆ ಎಂದು ಟ್ರೋಲರ್ಸ್​ಗಳು ಟ್ರೋಲ್​ ಮಾಡಿದ್ದರು. ಸದ್ಯ ಈ ಪ್ರಶ್ನೆಗಳಿಗೆ ದೀಪಿಕಾ ಪಡುಕೋಣೆ  ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಡಿಂಪಿ ಏಕೀ ಮೌನ?

ದೀಪಿಕಾ ಪಡುಕೋಣೆಯವರು, 500 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿರುವ ಧುರಂಧರ್​-2 ಸಿನಿಮಾಗೆ ಸೈಲೆಂಟ್​​ ಆಗಿ ಟ್ರೀಟ್​​ಮೆಂಟ್​ ಕೊಟ್ಟಿದ್ದಾರೆ.  ಧುರಂಧರ್​-2 ಸಿನಿಮಾಗೆ ಇಡೀ ದೇಶದಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದ್ರೆ, ಅವರು ಮಾತ್ರ ಪ್ರೀಮಿಯರ್​ ಶೋ ಮಿಸ್ ಮಾಡಿ, ತಮ್ಮ ಅತ್ತೆ ಮಾವನ ಜೊತೆ ಸಿತಾರ್​ ಸಂಗೀತ ಕಾನ್ಸೆರ್ಟ್​ ಅಟೆಂಡ್​ ಮಾಡಿದ್ದರು. ಸಿನಿಮಾ ಬಗ್ಗೆ ಯಾವುದೇ ಪೋಸ್ಟ್​ ಹಂಚಿಕೊಂಡಿಲ್ಲ. ತನ್ನ ಪತಿ ಬಗ್ಗೆ ಮಾತನಾಡಿಲ್ಲ. ಹೊಗಳಿಲ್ಲ. ಇದು ಉದ್ದೇಶಪೂರ್ವಕ ನಿರ್ಲಕ್ಷ್ಯವೇ? ಎಂದು ಕಲ್ಚರಲ್​ ಸರ್ಕಲ್​​ ಪೋಸ್ಟ್​ವೊಂದನ್ನು ಹಂಚಿಕೊಂಡಿತ್ತು.

ದೀಪಿಕಾ ಹೇಳಿದ್ದೇನು?

ಇದಕ್ಕೆ ನೇರವಾಗಿ ಪ್ರತಿಕ್ರಿಯಿಸಿದ ದೀಪಿಕಾ, "ನಿಮ್ಮೆಲ್ಲರಿಗಿಂತ ಮೊದಲೇ ನಾನು ಸಿನಿಮಾ ನೋಡಿದ್ದೇನೆ. ಈಗ ಹೇಳಿ, ನೀವು ಟ್ರೋಲ್ ಮತ್ತು ಜೋಕ್ ಮಾಡ್ತಿರೋದು ಯಾರ ಮೇಲೆ? ಎಂದು ಬರೆಯುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. 
ಈ ಹಿಂದೆಯೂ ದೀಪಿಕಾ ಅವರು ಧುರಂಧರ್ ಚಿತ್ರದ ಮೊದಲ ಭಾಗವನ್ನು ಶ್ಲಾಘಿಸಿದ್ದರು ಮತ್ತು ನಿರ್ದೇಶಕ ಆದಿತ್ಯ ಧರ್ ಸೇರಿದಂತೆ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು. ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೂ ಚಿತ್ರದ ಯಶಸ್ಸಿನ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದರು.

ಧುರಂಧರ್​ ಗಳಿಸಿದ್ದೆಷ್ಟು?

ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೇಂಜ್' ಸಿನಿಮಾ ಭಾರತೀಯ ಚಿತ್ರರಂಗದ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತದಲ್ಲಿ ಈ ಚಿತ್ರ ಬರೋಬ್ಬರಿ 1,000 ಕೋಟಿ ರೂಪಾಯಿ ನಿವ್ವಳ ಸಂಗ್ರಹ ಮಾಡಿದೆ. ಬಿಡುಗಡೆಯಾದ 20ನೇ ದಿನದಂದು ಈ ಸಿನಿಮಾ 'ಬಾಹುಬಲಿ 2' ದಾಖಲೆಯನ್ನು ಮೀರಿಸಿದ್ದು, ಸದ್ಯ ಪುಷ್ಪ 2 ಚಿತ್ರದ ನಂತರದ ಸ್ಥಾನದಲ್ಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net