ಧುರಂಧರ್​ 2 ರೆಡಿಯಾಗಲು ಕಾಂಗ್ರೆಸ್​ ಪಕ್ಷವೇ ಕಾರಣ: ಈ ಸಿನಿಮಾದಲ್ಲಿ ದಾವೂದ್ ಪಾತ್ರ ಅನಗತ್ಯ; ಕಮಾಲ್​ ಆರ್​ ಖಾನ್​ ವ್ಯಂಗ್ಯ! KRK Review on Dhurandhar 2

ಈ ಸಿನಿಮಾ ನಿರ್ಮಾಣವಾಗಲು ಕಾಂಗ್ರೆಸ್​ ಪಕ್ಷವೇ ಕಾರಣ: ಕೆಆರ್​ಕೆ
ಈ ಸಿನಿಮಾ ನಿರ್ಮಾಣವಾಗಲು ಕಾಂಗ್ರೆಸ್​ ಪಕ್ಷವೇ ಕಾರಣ: ಕೆಆರ್​ಕೆ
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​ 2
  • ಈ ಸಿನಿಮಾ ನಿರ್ಮಾಣವಾಗಲು ಕಾಂಗ್ರೆಸ್​ ಪಕ್ಷವೇ ಕಾರಣ: ಕೆಆರ್​ಕೆ
  • ಇಂದಿರಾಗಾಂಧಿ, ಮನಮೋಹನ್​ ಸಿಂಗ್ ಆಡಳಿತ ನಡೆಸದೇ ಹೋಗಿದ್ದರೆ ಈ ಸಿನಿಮಾಗೆ ಕತೆಯೇ ಇರುತ್ತಿರಲಿಲ್ಲ
  • ಈ ಸಿನಿಮಾದಲ್ಲಿ ದಾವೂದ್​ ಇಬ್ರಾಹಿಂನ ಪಾತ್ರದ ಅಗತ್ಯ ಇರಲಿಲ್ಲ
ಮುಂಬೈ: ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿಯತ್ತ ಲಗ್ಗೆ ಇಡುತ್ತಿರುವ ಧುರಂಧರ್ 2 (Dhurandhar2: The Revenge) ಸಿನಿಮಾ ಒಂದು ಕಡೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದರೆ, ಇನ್ನೊಂದೆಡೆ ವಿವಾದಗಳ ಸುಳಿಗೂ ಸಿಲುಕಿದೆ. ಯಾವಾಗಲೂ ತನ್ನ ವಿಚಿತ್ರ ವಿಮರ್ಶೆಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಲ್ ಆರ್ ಖಾನ್ (KRK Review on Dhurandhar 2), ಈಗ ಈ ಚಿತ್ರದ ವಿರುದ್ಧ ಸರಣಿ ಬಾಂಬ್‌ಗಳನ್ನು ಸಿಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಧುರಂಧರ್ 2 ಬಗ್ಗೆ ಸುದೀರ್ಘ ವಿಮರ್ಶೆ ನೀಡಿರುವ ಕೆಆರ್‌ಕೆ, ಚಿತ್ರದ ನಿರ್ದೇಶಕ ಆದಿತ್ಯ ಧರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ದಾವುದ್ ಇಬ್ರಾಹಿಂಗೆ ಅನಗತ್ಯ ಗ್ಲೋರಿಫಿಕೇಶನ್!

ಕೆಆರ್‌ಕೆ ಅವರ ವಿಮರ್ಶೆಯ ಮೊದಲ ಗುರಿ ಭೂಗತ ಲೋಕದ ಡಾನ್ ದಾವುದ್ ಇಬ್ರಾಹಿಂ ಪಾತ್ರ. ಈ ಸಿನಿಮಾದಲ್ಲಿ ದಾವುದ್ ಇಬ್ರಾಹಿಂ ಪಾತ್ರದ ಅಗತ್ಯವೇ ಇರಲಿಲ್ಲ. ಆದಿತ್ಯ ಧರ್ ಅವರು ಸುಖಾಸುಮ್ಮನೆ ದಾವುದ್ ಇಬ್ರಾಹಿಂಗೆ ಪಬ್ಲಿಸಿಟಿ ನೀಡಿದ್ದಾರೆ. ಅವನ ಇಡೀ ಟ್ರ್ಯಾಕ್ ಸಮಯ ವ್ಯರ್ಥ ಮಾಡಿದಂತಿದೆ. ಇಂತಹ ಪಾತ್ರಗಳನ್ನು ವೈಭವೀಕರಿಸುವ ಅವಶ್ಯಕತೆ ಏನಿತ್ತು? ಎಂದು ಕೆಆರ್‌ಕೆ ಪ್ರಶ್ನಿಸಿದ್ದಾರೆ.

ಈ ಸಿನಿಮಾ ನಿರ್ಮಾಣವಾಗಲು ಕಾಂಗ್ರೆಸ್​ ಪಕ್ಷವೇ ಕಾರಣ

ಧುರಂಧರ್ ಸಿನಿಮಾ ಬಗ್ಗೆ ಮಾತನಾಡುತ್ತಾ ಕೆಆರ್​ಕೆ ಈ ಚಿತ್ರ ತೆರೆಕಾಣಲು ಮತ್ತು ಇಷ್ಟು ಖ್ಯಾತಿಗಳಿಸುತ್ತಿರಲು ಕಾಂಗ್ರೆಸ್​ ಪಕ್ಷವೇ ಕಾರಣವಾಗಿದೆ ಎಂದು ಹೇಳಿದ್ದಾರೆ ಮತ್ತು ಈ ಕುರಿತು ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಭಾರತದ ಗುಪ್ತಚರ ಸಂಸ್ಥೆ ರಾ ಸ್ಥಾಪನೆಯಾಗಿದ್ದು 1968 ರಲ್ಲಿ. ಭಾರತದ ಗುಪ್ತಚರ ಜಮಾಲ್​ ಜಮಾಲಿ ಪಾಕಿಸ್ತಾನಕ್ಕೆ ಹೋಗಿದ್ದು 1981 ರಲ್ಲಿ ಆವಾಗ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ರಣವೀರ್​ ಸಿಂಗ್​ ಪಾತ್ರ ಪಾಕಿಸ್ತಾಕ್ಕೆ ಹೋಗುವುದು 2004 ರಲ್ಲಿ ಆಗ ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದರು. ಈ ಸಿನಿಮಾದ ವಿಲನ್​ ಮೇಜರ್​ ಇಲ್ಯಾಸ್ ಕಾಶ್ಮೀರಿ 2011 ರಲ್ಲಿ ಅಂದರೆ ಮನಮೋಹನ್​ ಸಿಂಗ್​ ಅವರ ಆಡಳಿತ ಇದ್ದಾಗಲೇ ಕೊಲ್ಲಲಾಗಿದೆ.
ಹೀಗಾಗಿ ಈ ಸಿನಿಮಾ ತಯಾಗಾರಲು ಕಾಂಗ್ರೆಸ್​ ಪಕ್ಷದ ಕೊಡುಗೆ ಪ್ರಮುಖವಾಗಿದೆ ಎಂದು ಕಮಲ್​ ಆರ್​ ಖಾನ್​ ತಮ್ಮ ವಿಮರ್ಶೆಯಲ್ಲಿ ಹೇಳಿದ್ದಾರೆ ಮತ್ತು ಈ ಕುರಿತು ಟ್ವಿಟ್​ ಸಹ ಮಾಡಿದ್ದಾರೆ.

4 ಗಂಟೆಯ ಸಿನಿಮಾ; 15 ನಿಮಿಷಗಳ ಫೈಟ್!

ಸಿನಿಮಾದ ಉದ್ದ ಮತ್ತು ಆಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆಯೂ ಕೆಆರ್‌ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಬರೋಬ್ಬರಿ 4 ಗಂಟೆಗಳ ಕಾಲ ಇದೆ. ಆರಂಭದಲ್ಲೇ ರಣವೀರ್ ಸಿಂಗ್ ಶತ್ರುಗಳನ್ನು ಸದೆಬಡಿಯುವ ಸೀನ್ ಸುಮಾರು 15 ನಿಮಿಷಗಳ ಕಾಲ ನಡೆಯುತ್ತದೆ.
ಇನ್ನು ಕ್ಲೈಮ್ಯಾಕ್ಸ್‌ನಲ್ಲಂತೂ ಮೇಜರ್ ಇಕ್ಬಾಲ್‌ನನ್ನು ಕೊಲ್ಲುವ ದೃಶ್ಯ 30 ನಿಮಿಷಗಳ ಕಾಲ ಸಾಗುತ್ತದೆ. ಇಷ್ಟೊಂದು ಉದ್ದದ ಆಕ್ಷನ್ ಸೀನ್ ಯಾರಿಗೆ ಬೇಕು? ಈ ಸಿನಿಮಾವನ್ನು 2.5 ಗಂಟೆಗೆ ಕತ್ತರಿಸಿದ್ದರೆ ಅದ್ಭುತವಾಗಿರುತ್ತಿತ್ತು ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

ಬಾಲಿವುಡ್‌ನ ಈ ದ್ವಂದ್ವ ನೀತಿ ಏಕೆ?

ಚಿತ್ರದಲ್ಲಿ ಬಳಸಿರುವ ಅತಿಯಾದ ಕೆಟ್ಟ ಪದಗಳ (Abusive Language) ಬಗ್ಗೆಯೂ ಕೆಆರ್‌ಕೆ ಆಕ್ರೋಶ ಹೊರಹಾಕಿದ್ದಾರೆ. ಪ್ರತಿ ಮೂರು-ನಾಲ್ಕು ಡೈಲಾಗ್‌ಗಳಿಗೊಮ್ಮೆ ಕೆಟ್ಟ ಪದಗಳನ್ನು ಬಳಸಲಾಗಿದೆ. ಆಶ್ಚರ್ಯವೆಂದರೆ ಪ್ರೇಕ್ಷಕರು ಅದಕ್ಕೆ ಶಿಳ್ಳೆ ಹೊಡೆಯುತ್ತಿದ್ದಾರೆ, ಇದೇ ಪ್ರೇಕ್ಷಕರು ಬಾದ್‌ಶಾ ಅಥವಾ ನೋರಾ ಫತೇಹಿ ಅವರ ಹಾಡುಗಳಲ್ಲಿ ಸ್ವಲ್ಪ ತುಂಟತನವಿದ್ದರೂ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಈ ಸಿನಿಮಾದಲ್ಲಿ ಅದಕ್ಕಿಂತಲೂ ಕಟುವಾದ ಪದಗಳಿದ್ದರೂ ಯಾರೂ ಮಾತನಾಡುತ್ತಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net