ಹಾಲಿವುಡ್ ನಿರ್ದೇಶಕರ ಸಾಲಿಗೆ ಸೇರಿದ ಆದಿತ್ಯ ಧರ್: ಇವನೊಬ್ಬ ಸೂಪರ್ ಸ್ಟಾರ್ ನಿರ್ದೇಶಕ ಎಂದಿದ್ದೇಕೆ ಕಂಗನಾ?Kangana Ranaut Praises Aditya Dhar
ಆದಿತ್ಯ ಧರ್ ಒಬ್ಬ ಸೂಪರ್ ಸ್ಟಾರ್ ನಿರ್ದೇಶಕ: ಕಂಗನಾ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
ಆದಿತ್ಯ ಧರ್ ಒಬ್ಬ ಸೂಪರ್ ಸ್ಟಾರ್ ನಿರ್ದೇಶಕ: ಕಂಗನಾ
ಸೂಪರ್ ಸ್ಟಾರ್ ನಟರು ನಿರ್ದೇಶಕರನ್ನು ಬೆಳೆಯಲು ಬಿಡಲ್ಲ
ಆದಿತ್ಯ ಧರ್ ಈಗ ಹಾಲಿವುಡ್ ನಿರ್ದೇಶಕರ ಖ್ಯಾತಿಯನ್ನು ಗಳಿಸಿದ್ದಾರೆ
ಬಾಲಿವುಡ್: ಗುರುವಾರ (ಮಾರ್ಚ್ 19) ಧುರಂಧರ್ 2: ದಿ ರಿವೆಂಜ್ ಸಿನಿಮಾ ತೆರೆಕಂಡ ಬೆನ್ನಲ್ಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ತೆರೆಕಂಡ ಮೊದಲ ದಿನವೇ ಸುಮಾರು 143 ಕೋಟಿ ಗಳಿಸುವ ಮೂಲಕ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಿನಿಮಾ ಬಿಡುಗಡೆಯಾದ ದಿನದಿಂದ ಪರ-ವಿರೋಧ ಚರ್ಚೆಗೆ ವೇದಿಕೆಯಾಗಿ ಪರವರ್ತನೆಗೊಂಡಿದ್ದು, ಕೆಲವರು ಈ ಸಿನಿಮಾವನ್ನು ಮೆಚ್ಚಿ ಹೊಗಳಿದರೆ, ಇನ್ನು ಕೆಲವರು ಈ ಸಿನಿಮಾ ಕೇವಲ ಒಂದು ಪ್ರೊಪಗಾಂಡಾ ಎಂದು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ಧುರಂಧರ್ ಸಿನಿಮಾ ವೀಕ್ಷಿಸಿದ ಬಳಿಕ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಿನಿಮಾದ ನಿರ್ದೇಶಕ ಆದಿತ್ಯ ಧರ್ನನ್ನು ಒಬ್ಬ ಸೂಪರ್ ಸ್ಟಾರ್ ನಿರ್ದೇಶಕ (Kangana Ranaut Praises Aditya Dhar) ಎಂದು ಹೊಗಳಿದ್ದಾರೆ.
ಹಾಲಿವುಡ್ನಲ್ಲಿ ಕೆಲ ಸಿನಿಮಾಗಳು ಅಲ್ಲಿ ಅಭಿನಯಿಸುವ ನಟರಿಗಿಂತ ನಿರ್ದೇಶಕರ ಕಾರಣದಿಂದಲೇ ಸಿನಿಮಾ ಯಶಸ್ವಿಯಾಗುತ್ತದೆ. ಅಲ್ಲಿ ಕೆಲ ನಿರ್ದೇಶಕರು ನಟರಿಗಿಂತ ಖ್ಯಾತನಾಮರಾಗಿರುತ್ತಾರೆ. ಉದಾ: ಕ್ವಿನ್ಟಂನ್ ಟರಾನ್ಟಿನೋ, ನೋಲನ್ ಇತ್ಯಾದಿ.
ಆದರೆ ನಮ್ಮ ಭಾರತದಲ್ಲಿ ಈ ಸೂಪರ್ ಸ್ಟಾರ್ಗಳು ನಿರ್ದೇಶಕರು ಖ್ಯಾತಿ ಗಳಿಸುವುದನ್ನು ತಡೆಯುತ್ತಾರೆ. ಒಂದು ಸಿನಿಮಾ ಗೆಲ್ಲ ಬೇಕೆಂದರೆ ಅಲ್ಲಿ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡಿ ಕಡಿಮೆ ಸಂಭಾವನೆ ಪಡೆಯುವವರೆಂದರೆ ಅದು ನಿರ್ದೇಶಕರು. ಆದರೆ ನಮ್ಮ ಚಿತ್ರರಂಗಕ್ಕೆ ಈಗ ಒಬ್ಬ ಸೂಪರ್ ಸ್ಟಾರ್ ನಿರ್ದೇಶಕ ದೊರೆತ್ತಿದ್ದಾರೆ.
ಆದಿತ್ಯ ಧರ್ ತನ್ನ ಸಿನಿಮಾದ ಮೂಲಕ ಜನರ ಮನಸ್ಸನ್ನು ಗೆಲ್ಲುವ ಜೊತೆಗೆ ತನ್ನ ರೀತಿಯಲ್ಲಿ ಕಥೆ ಹೇಳ ಬಯಸುವ ಸಾಕಷ್ಟು ಯುವ ನಿರ್ದೇಶಕರಿಗೆ ಸಹ ಮಾದರಿಯಾಗಿದ್ದಾರೆ ಎಂದು ಕಂಗನಾ ತನ್ನ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಧುರಂಧರ್ 2 ಬಗ್ಗೆ
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).