ನನ್ನ ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ: ಸಹಾಯಕ್ಕೆ ಅಂಗಲಾಚಿದ ವೈರಲ್ ಸುಂದರಿ ಮೊನಾಲಿಸಾ! Monalisa

ಕುಂಭಮೇಳದ ಮಣಿಸರ ಮಾರಿ ವೈರಲ್ ಆಗಿದ್ದ ಮೊನಾಲಿಸಾ
ಕುಂಭಮೇಳದ ಮಣಿಸರ ಮಾರಿ ವೈರಲ್ ಆಗಿದ್ದ ಮೊನಾಲಿಸಾ
Published on

ಪ್ರಮುಖ ಮುಖ್ಯಾಂಶಗಳು

  • ಕುಂಭಮೇಳದ ಮಣಿಸರ ಮಾರಿ ವೈರಲ್ ಆಗಿದ್ದ ಮೊನಾಲಿಸಾ
  • ಫರ್ಮಾನ್ ಖಾನ್‌ನನ್ನು ಮದುವೆಯಾಗಿ ವಿವಾದಕ್ಕೆ ಸಿಲುಕಿದ ಮೊನಾಲಿಸಾ
  • ನಮಗೆ ಪ್ರತಿದಿನ ಜೀವ ಬೆದರಿಕೆ ಬರುತ್ತಿದೆ
  • ದಯಮಾಡಿ ನನ್ನನ್ನು ಮತ್ತು ನನ್ನ ಪತಿಯನ್ನು ರಕ್ಷಿಸಿ
ಕೇರಳ: ಕುಂಭಮೇಳದಲ್ಲಿ ಮಣಿಸರಗಳನ್ನು ಮಾರಾಟ ಮಾಡುವ ಮೂಲಕ ವೈರಲ್​ ಆಗಿದ್ದ ಮೊನಾಲಿಸಾ (Monalisa) ಭೋಸ್ಲೆ, ಈದೀಗ ತನ್ನ ಮದುವೆ ಮೂಲಕ ಮತ್ತೆ ಮುನ್ನಲೆಗೆ ಬಂದಿದ್ದಾಳೆ.
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಫರ್ಮಾನ್ ಖಾನ್ ಎಂಬುವವನ್ನು ಮದುವೆಯಾಗಿದ್ದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿತ್ತು. ಈ ಮದುವೆ ಲವ್​ ಜಿಹಾದ್​ಗೆ ತಾಜಾ ಉದಾಹರಣೆ ಎಂದು ಕೆಲವೊಬ್ಬರು ಕಿಡಿಕಾರಿದ್ದು ಸಹ ನಡೆದಿತ್ತು.

ದಯವಿಟ್ಟು ಸಹಾಯ ಮಾಡಿ...

ಈದೀಗ ಮೊನಾಲಿಸಾ ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮೊನಾಲಿಸಾ, ನಾನು ಫರ್ಮಾನ್ ಖಾನ್​ನನ್ನು ಪ್ರೀತಿಸಿ ಮದುವೆಯಾಗಿದ್ದೆನೆ, ಆದರೆ ನಮಗೆ ದಿನ ಬೆಳಗೆದ್ದರೆ ನೀನು ಲವ್​ ಜಿಹಾದ್​ಗೆ ಬಲಿಯಾಗಿದ್ದಿಯಾ , ನಿನ್ನ ಗಂಡನನ್ನು ನಾವು ಕೊಲ್ಲುತ್ತೆವೆ ಎಂಬ ಬೆದರಿಕೆಗಳು ಬರುತ್ತಿವೆ. ದಯಮಾಡಿ ನಮಗೆ ಸಹಾಯಮಾಡಿ ಎಂದು ಮುಖ್ಯಮಂತ್ರಿ ಹಾಗೂ ಪೊಲೀಸ್​ ಅಧಿಕಾರಿಗಳಿಗೆ ದಂಪತಿ ಮನವಿ ಮಾಡಿದ್ದಾರೆ.
ಕೇರಳ ಸರ್ಕಾರವನ್ನು ಹೊಗಳಿದ ಮೊನಾಲಿಸಾ
ನನ್ನದು ಅಂತರ ಧರ್ಮಿಯ ವಿವಾಹವಾಗಿದ್ದರೂ ಸಹ ಕೇರಳದ ಜನ ಮತ್ತು ಸರ್ಕಾರ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದೆ. ನನಗೆ ಎಲ್ಲಾ ಧರ್ಮಗಳು ಸಮಾನವಾಗಿದೆ, ಮತ್ತು ನಮ್ಮ ಮದುವೆ ಸಾಕಾರಗೊಳ್ಳಲು ಕೇರಳ ಸರ್ಕಾರದ ಪಾತ್ರ ಮಹತ್ವದಾಗಿದ್ದು, ನಾವು ಕೇರಳ ಸರ್ಕಾರಕ್ಕೆ ಹೃದಯಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೆವೆ ಎಂದು ಹೇಳಿದ್ದಾರೆ.

ಇದು ನಿಜವಾದ ಕೇರಳ ಸ್ಟೋರಿ: ಸನೋಜ್​ ಮಿಶ್ರಾ

ಮೊನಾಲಿಸಾಳನ್ನು ಬಳಸಿಕೊಂಡು ಸಿನಿಮಾವನ್ನು ನಿರ್ಮಿಸಲು ಮುಂದಾಗಿದ್ದ ನಿರ್ದೇಶಕ ಸನೋಜ್​ ಮಿಶ್ರಾ, ಈ ಮದುವೆ ಲವ್​ಜಿಹಾದ್​ಗೆ ತಾಜಾ ಉದಾಹರಣೆಯಾಗಿದೆ, ಇದು ನಿಜವಾದ ಕೇರಳ ಸ್ಟೋರಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಫರ್ಮಾನ್ ಖಾನ್ ಒಬ್ಬ ದುಷ್ಟ, ಅವನು ತಿಲಕ, ರುದ್ರಾಕ್ಷಿ ಧರಿಸಿ ಮೊನಾಲಿಸಾ ಮನೆಯವರಿಗೆ ಮೋಸ ಮಾಡಿದ್ದಾನೆ. ಈ ಫರ್ಮಾನ್ ಖಾನ್ ಸಿಎಎ ಪ್ರತಿಭಟನೆಯಲ್ಲಿ ಶಾರ್ಜೀಲ್ ಇಮಾಮ್ ಜೊತೆಗಿದ್ದ ಎಂದು ಆರೋಪ ಮಾಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net