18 ವರ್ಷಗಳ ದಾಂಪತ್ಯದ ಬಗ್ಗೆ ಅಭಿಚೇಕ್​ ಬಚ್ಚನ್​ ಮನದಾಳದ ಮಾತು; ಸುಂದರ ಸಂಸಾರದ ಗುಟ್ಟು ರಿವೀಲ್..Abhishek Bachchan

Abhishek Bachchan
Abhishek Bachchan
Published on

ಪ್ರಮುಖ ಮುಖ್ಯಾಂಶಗಳು

  • ಮತ್ತೊಬ್ಬರ ಗೆಲುವಿನ ಹಾದಿಯನ್ನು ತುಳಿದು ಯಶಸ್ಸು ಕಾಣುವ ಮನಸ್ಥಿತಿ ನನಗಿಲ್ಲ
  • ಐಶ್ವರ್ಯಾ ರೈ ತನ್ನ ಸಿನಿ ಜರ್ನಿ ನನಗಾಗಿ ತ್ಯಾಗ ಮಾಡುವ ವಿಚಾರವನ್ನೇ ನಾನು ವಿರೋಧಿಸುತ್ತೇನೆ
  • ದಾಂಪತ್ಯದಲ್ಲಿ ಹೆಚ್ಚು ಕಡಿಮೆ ಎನ್ನುವ ಮನೋಭಾವವೇ ಇರಕೂಡದು ಎಂದ ಅಭಿಷೇಕ್​ ಬಚ್ಚನ್
Abhishek Bachchan: ಸಿನಿಮಾ ಕ್ಷೇತ್ರದಲ್ಲಿ  ತಾರೆಯರ ವಿಚ್ಛೇದನದ ಕುರಿತು ಹೆಚ್ಚಾಗಿ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಅದರಲ್ಲೂ ದಂಪತಿ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳದಿದ್ದರೇ ಮುಗಿತು. ಚರ್ಚೆಗೆ ಇದು ಹೆಚ್ಚು ಪುಷ್ಟಿ ಕೊಟ್ಟಂತಾಗಿ ಬಿಡುತ್ತದೆ. ಈ ಸಾಲಿನಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಸಹ ಒಬ್ಬರು. 
ಸದ್ಯ ಬಾಲಿವುಡ್​ ನಟ ಅಭಿಷೇಕ್ ಬಚ್ಚನ್​​ ಅವರು ಲಿಲ್ಲಿ ಸಿಂಗ್ ಎಂಬುವವರ ಸಂದರ್ಶನದಲ್ಲಿ ತಮ್ಮ ದಾಂಪತ್ಯ ಜೀವನದ ಬಗ್ಗೆ ಹಾಗೂ ಅಹಂ, ಪುರುಷತ್ವದ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ, ವಿಡಿಯೋ ಕ್ಲಿಪ್​ಗಳು ಸದ್ಯ ವೈರಲ್​ ಆಗಿದ್ದು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದಾರೆ.

ಬೇರೆಯವರ ಸೋಲಲ್ಲಿ ಗೆಲುವ ಕಾಣೊಲ್ಲ

ನನ್ನಲಿ ತುಂಬಾನೆ ಅಹಂ ಇದೆ. ಆದರೆ ಅದು ಬೇರೆಯವರ ಗೆಲುವನ್ನು ತುಳಿದು ಮುಂದೆ ಸಾಗುವಂತದ್ದಲ್ಲ. ನನ್ನ ಗೆಲುವನನ್ನು ಖುದ್ದು ನಾನೇ ಸಂಪಾದಿಸಿಕೊಳ್ಳಬೇಕು. ಅದೇ ನನ್ನ ಇಚ್ಛೆ. ಗೆಲುವಿನ ಓಟದಲ್ಲಿರೋ ವ್ಯಕ್ತಿ ಯಾವುದೋ ವಿಚಾರಕ್ಕೆ ಸೋಲೊಪ್ಪಿಕೊಂಡು ಹಿಂದೆ ಸರಿದರೆ, ಆ ಸೋಲಿನಲ್ಲಿ ನಾನು ಜಯಿಸುವುದು ನನಗಿಷ್ಟವಿಲ್ಲ ಎಂದಿದ್ದಾರೆ. 

ಐಶ್ವರ್ಯಾ  ವೃತ್ತಿ ಜೀವನ ತ್ಯಾಗ ಮಾಡೋದು ಇಷ್ಟವಿಲ್ಲ

ನನ್ನ ಯಶಸ್ಸಿಗಾಗಿ ಪತ್ನಿ ತನ್ನ ಕೆಲಸ ಅಥವಾ ಆಕೆಯ ಸಾಧನೆ ಮಾಡೋದನ್ನು ನಿಲ್ಲಿಸಬೇಕು ಎನ್ನುವುದನ್ನು ನಾನೆಂದಿಗೂ ಬಯಸೋಕೆ ಹೋಗೋದಿಲ್ಲ. ಅದೃಷ್ಟ ಎಂದರೆ ನನ್ನ ಪತ್ನಿ ಐಶ್ವರ್ಯಾ ರೈಗೂ ಈ ಭಾವನೆ ಇಲ್ಲ.  ಒಬ್ಬರನ್ನು ಬಿಟ್ಟು ಮತ್ತೊಬ್ಬರು ಯಶಸ್ವಿ ಕಾಣಬೇಕು ಎನ್ನುವ ಮನಸ್ಥಿತಿ ನನಗಂತೂ ಇಲ್ಲ.  ನನ್ನ ಪತ್ನಿಯ ಸಾಧನೆ ಕಡಿಮೆ ಮಾಡುವ ವಿಚಾರದಲ್ಲಿ ನನ್ನ ಪುರುಷತ್ವವಿಲ್ಲ. ಮಕ್ಕಳನ್ನು ನೋಡಿಕೊಂಡು ನೀನು ಮನೆಯಲ್ಲಿರು ನಾನು ಆರ್ಥಿಕವಾಗಿ ದುಡಿಯುತ್ತೇನೆ ಎಂದು ಹೇಳುವ ಮನಸ್ಥಿತಿ ನನಗಿಲ್ಲ ಎಂದು ಅಭಿಷೇಕ್​ ಬಚ್ಚನ್ ಹೇಳಿದರು. 
ನನ್ನ ತಂದೆ ಅಭಿಷೇಕ್​ ಬಚ್ಚನ್​ ಯಶಸ್ಸು ಕಾಣೋಕು ಮುಂಚೆ ತಾಯಿ ಜಯಾ ಅವರು ಫೇಮಸ್​ ಮತ್ತು ದೊಡ್ಡ ಸ್ಟಾರ್​ ಆಗಿದ್ದರು.  ಯಶಸ್ವಿ ಪಡೆದ ಪತ್ನಿಯ ಜೊತೆ ಜೀವನ ನಡೆಸುವುದು ನನಗೆ ಹೊಸತಲ್ಲ ಎಂದು ತಮ್ಮ  ಪೋಷಕರ ಜೀವನದ ಬಗ್ಗೆ ಅವರು ಪ್ರಸ್ತಾಪಿಸಿದರು.

ಮಗಳಿಗೆ ಜೀವನ ಪಾಠ ಹೀಗೆ ಹೇಳ್ತೀವಿ

ನನ್ನ ಮಗಳು ಆರಾಧ್ಯಗೆ ನಾವು ಮಾದರಿಯ ಪೋಷಕರಾಗಿ ಇರಲು ಯತ್ನಿಸುತ್ತೇವೆ. ನೀನು ಹಾಗೆ ಮಾಡು ಹೀಗೆ ಮಾಡು ಎಂದು ಆಕೆಗೆ ಹೇಳೋದಿಲ್ಲ. ಉತ್ತಮವಾಗಿ ನಾವು ಬದುಕುವ ಮೂಲಕ ಅವಳಿಗೆ ಮಾದರಿಯಾಗಿರಲು ಯತ್ನಿಸುತ್ತೇವೆ. ತಂದೆಗಿಂತ ತಾಯಂದಿರು ಮಕ್ಕಳಿಗೆ ಉತ್ತಮ ಪಾಠ ಕಲಿಸುತ್ತಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net