'ಲವ್ ಜಿಹಾದ್ ಬ್ರ್ಯಾಂಡ್ ಅಂಬಾಸಿಡರ್ ನಾನಲ್ಲ, ಮೂವರು ಪತ್ನಿಯರು ಮತಾಂತರಗೊಂಡಿಲ್ಲ': ಆಮಿರ್ ಖಾನ್..Aamir Khan

Aamir Khan rejects love jihad tag
Aamir Khan rejects love jihad tag
Published on

ಪ್ರಮುಖ ಮುಖ್ಯಾಂಶಗಳು

  • ನನ್ನ ಮೂವರು ಪತ್ನಿಯರು ಇಲ್ಲಿಯವರೆಗೂ ಮತಾಂತರಗೊಂಡಿಲ್ಲ ಎಂದ ಆಮಿರ್ ಖಾನ್​
  • ನಾವು ಎಲ್ಲರನ್ನೂ ಒಳಗೊಳ್ಳುವ ನಾಗರಿಕರು ಎಂದು ಸಂದರ್ಶನದಲ್ಲಿ ಮಾತನಾಡಿದ ಆಮೀರ್​​
  • ಜುಲೈ5ರಂದು ಗೌರಿ ಜೊತೆಗೆ ಮುಂಬೈನಲ್ಲಿ ಮದುವೆ ಮಾಡಿಕೊಂಡ ಆಮೀರ್​ ಖಾನ್
Aamir Khan rejects love jihad tag: ಜುಲೈ.5 ರಂದು ಗೌರಿ ಸ್ಪ್ರಾಟ್​ ಅವರನ್ನು ಆಮಿರ್ ಖಾನ್ ಅವರು ತಮ್ಮ ಮುಂಬೈನ ನಿವಾಸದಲ್ಲಿ ವಿವಾಹವಾಗಿದ್ದರು. ಆ ಬೆನ್ನಲ್ಲೇ ಅವರು ಸಾಕಷ್ಟು ಟೀಕೆ ಹಾಗೂ ಟ್ರೋಲ್​ಗೆ ಒಳಗಾಗಿದ್ದಾರೆ. ಸದ್ಯ ಅವರನ್ನು ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್ ಎಂದು ಸೋಶಿಯಲ್​ ಮೀಡಿಯಾದಲ್ಲಿ ಬಿಂಬಿಸುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ನಮ್ಮ ಕುಟುಂಬ ಯಾವಾಗಲು ಅಂತರ್ಧಮೀಯ ಸಂಬಂಧಗಳನ್ನು ಮುಕ್ತವಾಗಿ ಸ್ವೀಕಾರ ಮಾಡಿದೆ. ಯಾವುದೇ ವಿವಾಹಗಳಲ್ಲಿ ಧಾರ್ಮಿಕ ಮತಾಂತರ ನಡೆದಿಲ್ಲ ಎಂದು ತಮ್ಮ ಮೇಲೆ ಬಂದಿರುವ ಲವ್​ ಜಿಹಾದ್​ ಆರೋಪದ ವಿರುದ್ಧ ಸ್ಪಷ್ಟನೆ ಕೊಟ್ಟಿದ್ದಾರೆ.
ರೆಡಿಫ್ ಎನ್ನುವ ಖಾಸಗಿ ಸಂಸ್ಥೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​ ಆಮೀರ್ ಖಾನ್ ಅವರು, ​'ತಮ್ಮ ಕುಟುಂಬದ ಸದಸ್ಯರು ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮದವರನ್ನು ಮದುವೆ ಮಾಡಿಕೊಂಡಿದ್ದಾರೆ. ಈ ಯಾವುದೇ ಒಕ್ಕೂಟಗಳಲ್ಲಿ ಧರ್ಮ ಮತಾಂತರದ ಪ್ರಶ್ನೆಯೇ ಬಂದಿಲ್ಲ. ನಮ್ಮದರು ಎಲ್ಲರನ್ನೂ ಒಳಗೊಳ್ಳುವ ಅಂತರ್ಗತ ಕುಟುಂಬವಾಗಿದೆ' ಎಂದು ಹೇಳಿಕೊಂಡಿದ್ದಾರೆ.

ಕುಟುಂಬದಲ್ಲಿ ಹಲವರು ಅಂತರ್ಧಮೀಯ ಮದುವೆಯಾಗಿದ್ದಾರೆ.

ಮುಂದುವರೆದು, 'ನನ್ನ ಇಬ್ಬರು ಸಹೋದರಿಯರು ಸಹ ಹಿಂದೂ ಸಮುದಾಯದವರನ್ನೇ ಮದುವೆ ಮಾಡಿಕೊಂಡಿದ್ದಾರೆ. ನನ್ನ ಮಗಳು ಕೂಡ ಹಿಂದೂ ಯುವಕನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ಜೊತೆಗೆ ನನ್ನ ಸೋದರ ಸಂಬಂಧಿ ಮನ್ಸೂರ್ ಕ್ರಿಶ್ಚಿಯನ್ ಮಹಿಳೆಯನ್ನು ಕೈಹಿಡಿದಿದ್ದಾರೆ' ಎಂದು ಹೇಳಿದ್ದಾರೆ.

ಗೌರಿ ಕ್ರಿಶ್ಚಿಯನ್​​

'ನನ್ನ ಮದುವೆ ಎಂದು ಬಂದಾಗ ಗೌರಿ, ಕಿರಣ್, ರೀನಾ ದತ್ತಾ ಆಗಲಿ ಇಂದಿಗೂ ಅವರು ತಮ್ಮ ಧರ್ಮವನ್ನು ಬದಲಾಯಿಸಿಲ್ಲನಾವೆಲ್ಲರೂ ನಾಗರಿಕ ಕಾಯ್ದೆಯಡಿ ವಿವಾಹವಾಗಿದ್ದೇವೆ. ಗೌರಿ ಹಿಂದೂ ಕೂಡ ಅಲ್ಲ, ಆಕೆ ಕ್ರಿಶ್ಚಿಯನ್. ಅದೂ ಕೂಡ ಆಕೆ ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕ್ರಿಶ್ಚಿಯನ್ ಏನಲ್ಲ. ಕಾಲ ಉರುಳಿದಂತೆ ಜೀವನ ಹೆಚ್ಚು ಹಾಸ್ಯಸ್ಪದವಾಗುತ್ತಿದೆ' ಎಂದು ಹೇಳಿಕೊಂಡಿದ್ದಾರೆ.
ಆಮಿರ್ ಖಾನ್ ಮೊದಲು ರೀನಾ ದತ್ತಾ ಅವರನ್ನು 1986 ರಿಂದ 2002 ರವರೆಗೆ ವಿವಾಹವಾಗಿದ್ದರು. ನಂತರ 2005 ರಲ್ಲಿ ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರನ್ನು ವಿವಾಹವಾಗಿ, 2021 ರಲ್ಲಿ ಈ ದಂಪತಿಗಳು ಪರಸ್ಪರ ಬೇರ್ಪಡುವುದಾಗಿ ಘೋಷಿಸಿದ್ದರು.

ಆಮಿರ್-ಗೌರಿ ವಿವಾಹ ಮಹೋತ್ಸವ

ಆಮಿರ್ ಖಾನ್ ಮತ್ತು ಗೌರಿ ಪರಸ್ಪರ ಕಳೆದ 25 ವರ್ಷಗಳಿಂದ ಪರಿಚಿತರು. ಆದರೆ ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಮಿರ್ ಅವರ ಸೋದರಸಂಬಂಧಿ ನುಜಹತ್ ಖಾನ್ ಮೂಲಕ ಇವರಿಬ್ಬರು ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ ಆಮಿರ್ ಖಾನ್ ಅವರ 60ನೇ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ನಟ ಗೌರಿ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದರು. ತದನಂತರ ಇವರ ಸ್ನೇಹ ಪ್ರೀತಿಗೆ ತಿರುಗಿ, ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ ಜುಲೈ 5 ರಂದು ಅಧಿಕೃತವಾಗಿ ವಿವಾಹವಾದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net