ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೀರ್ ಖಾನ್​​: ಗೌರಿ ಸ್ಪ್ರಾಟ್ ಕೈ ಹಿಡಿದ ಮಿಸ್ಟರ್ ಪೆರ್ಫೆಕ್ಷನಿಸ್ಟ್! Aamir Khan Weds Gauri Spratt

ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೀರ್ ಖಾನ್
ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೀರ್ ಖಾನ್
Published on

ಪ್ರಮುಖ ಮುಖ್ಯಾಂಶಗಳು

  • 60ರ ಹರೆಯದಲ್ಲಿ 3ನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೀರ್ ಖಾನ್
  • ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್
  • ಬೆಂಗಳೂರಿನಲ್ಲಿ ಚಿಗುರಿದ್ದ ಪ್ರೇಮಕ್ಕೆ ಮುಂಬೈನಲ್ಲಿ ಅಧಿಕೃತ ಮುದ್ರೆ!
ಮುಂಬೈ: ಕಳೆದ ಕೆಲ ವರ್ಷಗಳಿಂದ ಭಾರಿ ಸದ್ದು ಮಾಡುತ್ತಿದ್ದ ಬಾಲಿವುಡ್​ ನಟ ಅಮೀರ್​ ಖಾನ್​ ಹಾಗೂ ಗೌರಿ ಸ್ಪ್ರಾಟ್ (Aamir Khan Weds Gauri Spratt) ನಡುವಿನ ಸ್ನೇಹ ಸಂಬಂಧಕ್ಕೆ ಇಂದು (ಭಾನುವಾರ, ಜು.5) ಮದುವೆ ಎಂಬ ಅಧಿಕೃತ ಮುದ್ರೆಯನ್ನು ಈ ಜೋಡಿ ಒತ್ತಿದ್ದಾರೆ.
ಕೆಲ ದಿನಗಳ ಹಿಂದೆ ಅಮೀರ್ ಖಾನ್​ ತಾವು ತಮ್ಮ ಬಹುಕಾಲದ ಗೆಳತಿ ಗೌರಿಯನ್ನು ಮುದುವೆ ಆಗುವುದಾಗಿ ಘೋಷಿಸಿದ್ದರು, ಈಗ ಅಮೀರ್​ ಯಶಸ್ವಿ ಮೂರನೇ ಮದುವೆಯನ್ನು ಮಾಡಿಕೊಂಡಿದ್ದಾರೆ. 

ಖಾಸಗಿಯಾಗಿ ನಡೆದ ಮದುವೆ!

ಅಮೀರ್​ ಖಾನ್​ ಮೊದಲೇ ತಿಳಿಸಿದಂತೆ ಅವರ ಈ ಮೂರನೇ ವಿವಾಹವು ಖಾಸಗಿಯಾಗಿ ನಡೆದಿದೆ. ಆಪ್ತ ಸ್ನೇಹಿತರು ಹಾಗೂ ಬಂಧುಗಳ ಸಮ್ಮುಖದಲ್ಲಿ ಅಮೀರ್​ ಖಾನ್​ ಹಾಗೂ ಗೌರಿ ಸ್ಪ್ರಾಟ್ ಕಾನೂನಾತ್ಮಕ ಪತ್ರಗಳಿಗೆ ಸಹಿ ಮಾಡುವ ಮೂಲಕ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
ಈ ಮುದುವೆಯು ಮುಂಬೈನ ಬಾಂದ್ರಾದಲ್ಲಿರುವ ಅಮೀರ್​ ಖಾನ್​ ಅವರ ಮನೆಯಲ್ಲಿ ನಡೆದಿದ್ದು, ಅಮೀರ್​ ಖಾನ್​ ಅವರ ಪುತ್ರ ಜುನೈದ್​ ಮತ್ತು ಇರಾ ಇದರಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಬೆಂಗಳೂರಿನಲ್ಲಿ ಮತ್ತೆ ಒಂದಾಗಿದ್ದ ಜೋಡಿ!

ಅಮೀರ್​ ಖಾನ್​ ಹಾಗೂ ಗೌರಿ ಸ್ಪ್ರಾಟ್ ಇವರು ಸುಮಾರು 25 ವರ್ಷಗಳ ಹಿಂದೆ ಮೊದಲ ಭೇಟಿ ಆಗಿದ್ದರು. ನಂತರ ಅವರವರ ಜೀವನ ನಡೆಸುತ್ತಿದ್ದ ಇಬ್ಬರು 2024 ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮತ್ತೆ ಭೇಟಿ ಆಗಿದ್ದರು.
ನಂತರ ಇವರ ಸ್ನೇಹ ಇನ್ನಷ್ಟು ಹತ್ತಿರವಾಯಿತು. ಅದೇ ಸಮಯದಲ್ಲಿ ಅಮೀರ್​ ಖಾನ್​ ತನ್ನ ದ್ವೀತಿಯ ಪತ್ನಿ ಕಿರಣ್​ ರಾವ್​ಗೆ ವಿಚ್ಛೇದನ ನೀಡಿದ್ದರು. 2025 ರಲ್ಲಿ ಅಮೀರ್​ ತಮ್ಮ 60 ನೇ ಹುಟ್ಟುಹಬ್ಬದ ದಿನ ಗೌರಿ ಸ್ಪ್ರಾಟ್​​ರನ್ನು ಮದುವೆ ಆಗುವುದಾಗಿ ಘೋಷಿಸಿದ್ದರು, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net