ಜಮ್ಮು-ಕಾಶ್ಮೀರದಲ್ಲಿ ಅಕಾಡೆಮಿಕ್ ಜಿಹಾದ್? ಮಹಾಪುರುಷರ ಪಟ್ಟಿಯಲ್ಲಿ ಹಾಫೀಜ್ ಸಯೀದ್, ಮಕ್ಬೂಲ್ ಭಟ್; ಗವರ್ನರ್ ಸಿನ್ಹಾ ಖಡಕ್​ ಆ್ಯಕ್ಷನ್​! Jammu Kashmir Textbook Controversy

ಜಮ್ಮು-ಕಾಶ್ಮೀರದಲ್ಲಿ ಉಗ್ರರು ಹಾಗೂ ಪ್ರತ್ಯೇಕತಾವಾದಿಗಳನ್ನು ಮಹಾನ್ ಸಾಧಕರೆಂದು ಬಿಂಬಿಸಿದ ಪುಸ್ತಕ ಬಿಡುಗಡೆ
ಜಮ್ಮು-ಕಾಶ್ಮೀರದಲ್ಲಿ ಉಗ್ರರು ಹಾಗೂ ಪ್ರತ್ಯೇಕತಾವಾದಿಗಳನ್ನು ಮಹಾನ್ ಸಾಧಕರೆಂದು ಬಿಂಬಿಸಿದ ಪುಸ್ತಕ ಬಿಡುಗಡೆ
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ದಾಳಿ ರೂವಾರಿ ಹಾಫೀಜ್ ಸಯೀದ್ ಈಗ ಆದರ್ಶ ವ್ಯಕ್ತಿತ್ವ?
  • ಜಮ್ಮು-ಕಾಶ್ಮೀರದಲ್ಲಿ ಉಗ್ರರು ಹಾಗೂ ಪ್ರತ್ಯೇಕತಾವಾದಿಗಳನ್ನು ಮಹಾನ್ ಸಾಧಕರೆಂದು ಬಿಂಬಿಸಿದ ಪುಸ್ತಕ
  • ಎಂಟು ಅಧಿಕಾರಿಗಳ ಅಮಾನತು, ಲೇಖಕರ ಮೇಲೆ UAPA ಅಡಿ ಕೇಸ್ ದಾಖಲು
ಜಮ್ಮು-ಕಾಶ್ಮೀರ: ಭಾರತದ ಪಠ್ಯಪುಸ್ತಕಗಳಲ್ಲಿ ವಿದೇಶಿ ಆಕ್ರಮಣಕಾರರನ್ನು, ಮತಾಂಧರನ್ನು ಹಾಗೂ ನೀಜ ವ್ಯಕ್ತಿತ್ವ ಹೊಂದಿರುವವರನ್ನು ಮಹಾನ್​ ಸಾಮ್ರಾಟರೆಂದು ಬಣ್ಣಿಸಿರುವುದು ಇತಿಹಾಸದುದ್ದಕ್ಕೂ ನಡೆದುಕೊಂಡೆ ಬಂದಿದೆ.
ಈಗ ಜಮ್ಮು-ಕಾಶ್ಮೀರ ರಾಜ್ಯದ ಶ್ರೇಷ್ಠ ವ್ಯಕ್ತಿಗಳು ಮತ್ತು ಮಹಾನ್​ ಸಾಧಕರು ಎಂಬ ಪುಸ್ತಕದಲ್ಲಿ ಪ್ರತ್ಯೇಕತಾವಾದಿಗಳನ್ನು ಹಾಗೂ ಭಯೋತ್ಪಾದರ (Jammu Kashmir Textbook Controversy) ಹೆಸರನ್ನು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಎನಿದು ವಿವಾದ?

ಹಿಲಾಲ್ ಅಹ್ಮದ್ ಮತ್ತು ಸಂತೋಷ್ ಮೀನಾ ಬರೆದಿರುವ ಜಮ್ಮು-ಕಾಶ್ಮೀರ ರಾಜ್ಯದ ಶ್ರೇಷ್ಠ ವ್ಯಕ್ತಿಗಳು ಮತ್ತು ಮಹಾನ್​ ಸಾಧಕರು ಎಂಬ ಪುಸ್ತಕವನ್ನು ಓಬೆರಾಯ್​ ಬುಕ್​ ಸರ್ವೀಸಸ್​ ಎಂಬ ಪ್ರಕಾಶನ ಸಂಸ್ಥೆ ಬಿಡುಗಡೆಗೊಳಿಸಿದೆ.
ಈ ಪುಸ್ತಕದಲ್ಲಿ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಹಾಗೂ ಭಯೋತ್ಪಾದಕರನ್ನು ವರ್ಣಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಪುಸ್ತಕವನ್ನು ಸರ್ಕಾರಿ ಶಾಲೆಗಳ ಗ್ರಂಥಾಲಯದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಪುಸ್ತಕದಲ್ಲಿ ಪ್ರತ್ಯೇಕತಾವಾದಿ ನಾಯಕ ಮಕ್ಬೂಲ್ ಭಟ್, ಮುಂಬೈದಾಳಿ ರೂವಾರಿ ಹಾಫೀಜ್​ ಸೈಯದ್​ನನ್ನು ಆದರ್ಶ ವ್ಯಕ್ತಿತ್ವಗಳೆಂದು ಬಣ್ಣಿಸಲಾಗಿದೆ. ಇವರೊಟ್ಟಿಗೆ ಸೈಯದ್ ಅಲಿ ಶಾ ಗಿಲಾನಿ, ಶಬೀರ್ ಅಹ್ಮದ್ ಶಾ, ಮಸರತ್ ಆಲಂ, ಮಿರ್ವೈಜ್ ಉಮರ್ ಫಾರೂಕ್ ಮತ್ತು ಮೌಲ್ವಿ ಫಾರೂಕ್ ನಂತಹ ದೇಶದ್ರೋಹಿಗಳನ್ನು ಅನುಕರಣೀಯ ವ್ಯಕ್ತಿಗಳೆಂದು ಕರೆಯಲಾಗಿದೆ.
ಗವರ್ನರ್​ ಗರಂ!
ಈ ಪುಸ್ತಕದ ವಿವಾದ ಭುಗಿಲೇಳುತ್ತಿದ್ದಂತೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್​ ಗವರ್ನರ್​ ಮನೋಜ್ ಸಿನ್ಹಾ ಈಗಾಗಲೇ ಎಂಟು ಜನ ಸರ್ಕಾರಿ ಅಧಿಕಾರಿಗಳನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ. ನಂತರ ಲೇಖಕ ಹಾಗೂ ಪ್ರಸಾರಕರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (ಯುಎಪಿಎ) ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಪುಸ್ತಕ ಪ್ರಸಾರಕರ ಮನೆ ಹಾಗೂ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ಅಗತ್ಯ ಪುರಾವೆಗಳನ್ನು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.

ಇದು ಅಕಾಡೆಮಿಕ್​ ಜಿಹಾದ್​!

ಈ ಪುಸ್ತಕದ ಬಗ್ಗೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡುತ್ತಾ ಇದೊಂದು ಅಕಾಡೆಮಿಕ್​ ಜಿಹಾದ್​ ಆಗಿದೆ ಎಂದು ಹೇಳಿದ್ದಾರೆ. ಕೂಡಲೇ ಈ ಪುಸ್ತಕವನ್ನು ನಿಷೇಧಿಸಿ, ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕಾಗಿ ಆಗ್ರಹಿಸಿದ್ದಾರೆ. ಹಾಗೆಯೇ ರಾಜ್ಯ ಶಿಕ್ಷಣ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ಅವರಲ್ಲಿ ಒತ್ತಾಯ ಮಾಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net