ದಾವೂದ್​​​​​​​ನಾಗಿ ಬದಲಾಗಲು 3 ಗಂಟೆ: ಬಡೇ ಸಾಬ್​ ಪಾತ್ರಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ; ಧುರಂಧರ್​ 2 ಬಗ್ಗೆ ಡ್ಯಾನಿಶ್​ ಇಕ್ಬಾಲ್​ ಹೇಳಿದ್ದೇನು? Danish Iqbal on Dhurandhar 2

ದಾವೂದ್​ ಪಾತ್ರದಲ್ಲಿ ಕಾಣಿಸಿಕೊಂಡ ಡ್ಯಾನಿಶ್​ ಇಕ್ಬಾಲ್​
ದಾವೂದ್​ ಪಾತ್ರದಲ್ಲಿ ಕಾಣಿಸಿಕೊಂಡ ಡ್ಯಾನಿಶ್​ ಇಕ್ಬಾಲ್​
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​ 2
  • 15 ನೇ ದಿನದಲ್ಲಿ 1500 ಕೋಟಿ ಗಳಿಸಿದ ಸಿನಿಮಾ
  • ದಾವೂದ್​ ಪಾತ್ರದಲ್ಲಿ ಕಾಣಿಸಿಕೊಂಡ ಡ್ಯಾನಿಶ್​ ಇಕ್ಬಾಲ್​ ಸಿನಿಮಾ ಬಗ್ಗೆ ಹೇಳಿದ್ದೇನು?
ಮುಂಬೈ: ರಣವೀರ್​ ಸಿಂಗ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹಾಗೂ ಆದಿತ್ಯ ಧರ್​ ನಿರ್ದೇಶನದ ಸಿನಿಮಾ ಧುರಂಧರ್ 2 ದಿ ರಿವೆಂಜ್​ ಸಿನಿಮಾ ಸದ್ಯ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ 15 ದಿನಗಳಲ್ಲಿ 1,500 ಕೋಟಿಗೂ ಹೆಚ್ಚಿನ ಕಲೆಕ್ಷನ್​ ಮಾಡುವ ಮೂಲಕ ತನ್ನ ನಾಗಾಲೋಟವನ್ನು ಮುಂದುವರಿಸಿದೆ.
ಈ ಸಿನಿಮಾದಲ್ಲಿ ನೀಜ ಜೀವನದಲ್ಲಿ ನಡೆದಿರುವ ಘಟನೆಗಳನ್ನು ಮತ್ತು ನಿಜ ಜೀವನದಲ್ಲಿ ಬದುಕಿದ್ದ ಮತ್ತು ಬದುಕಿರುವ ವ್ಯಕ್ತಿಗಳನ್ನು ಪಾತ್ರದ ಮೂಲಕ ತೋರಿಸಿರುವ ಕಾರಣದಿಂದ ಈ ಸಿನಿಮಾ ಇಷ್ಟು ಯಶಸ್ಸನ್ನು ಕಾಣಲು ಸಾಧ್ಯವಾಗಿದೆ ಎನ್ನುವುದು ಚಲನಚಿತ್ರ ವಿಮರ್ಶಕರ ಅಭಿಪ್ರಾಯವಾಗಿದೆ.

ಆ ಒಂದು ಫೋಟೊ ತೆಗೆಯಲು 2-3 ಗಂಟೆ ತಗುಲಿದೆ

ಈ ಧುರಂಧರ್​ ಸಿನಿಮಾದಲ್ಲಿ ಹಲವಾರು ಪ್ರಮುಖ ಪಾತ್ರಗಳಿವೆ, ಅದರಲ್ಲಿ ಈ ಬಡೇ ಸಾಬ್​ ಪಾತ್ರ ಸಹ ಅತ್ಯಂತ ಮುಖ್ಯ ಪಾತ್ರಗಳಲ್ಲಿ ಒಂದಾಗಿದೆ. ಈ ಬಡೇ ಸಾಬ್​ ಪಾತ್ರದಲ್ಲಿ ಭೂಗತ ಪಾತಕಿ ದಾವೂದ್​ ಇಬ್ರಾಹಿಂನನ್ನು ಚಿತ್ರಿಸಲಾಗಿದ್ದು, ಈ ಪಾತ್ರವನ್ನು ಡ್ಯಾನಿಶ್ (Danish Iqbal on Dhurandhar 2)​ ಇಕ್ಬಾಲ್​ ಬಹಳ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಡ್ಯಾನಿಶ್​, ಈ ಸಿನಿಮಾದಲ್ಲಿ ನನಗೆ ಅವಕಾಶ ದೊರೆತಿದ್ದು, ನನಗೆ ಸಂತೋಷದಾಯಕವಾಗಿದೆ. ನಮ್ಮ ಚಿತ್ರತಂಡ ದಾವೂದ್​ನ ಪಾತ್ರವನ್ನು ತೆರೆಮುಂದೆ ತರಲು ಬಹಳ ಶ್ರಮವಹಿಸಿದೆ.
ನನಗೆ ಮೇಕಪ್​ ಮಾಡಲೇ ಸುಮಾರು 5 ರಿಂದ 6 ಗಂಟೆ ಹಿಡಿಯುತ್ತಿತ್ತು, ಹಾಗೆಯೇ ಸಿನಿಮಾದಲ್ಲಿ ತೋರಿಸಿರುವ ದಾವೂದ್​ ಇಬ್ರಾಹಿಂನ ಫೋಟೊಗಾಗಿ ಅದೇ ರೀತಿಯ ಸೆಟಪ್​ ರೆಡಿ ಮಾಡಿ ಫೋಟೊ ತೆಗೆಯಲು ಸುಮಾರು 3 ಗಂಟೆ ತಗುಲಿದೆ ಎಂದು ಡ್ಯಾನಿಶ್​ ಇಕ್ಬಾಲ್​ ತಿಳಿಸಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net