More

    ಬಾಲಿವುಡ್​ ಖ್ಯಾತ ನಟ ಪೊಲೀಸರ ವಶಕ್ಕೆ! ಕಾರಣವಾಯ್ತು ಈ ಸಿನಿಮಾದ ಟ್ರೇಲರ್?

    ಮುಂಬೈ: ಅಪಾಯಕಾರಿ ಸಾಹಸ ಪ್ರದರ್ಶಿಸಿದ ಬಾಲಿವುಡ್​ ನಟ ವಿದ್ಯುತ್ ಜಮ್ವಾಲ್ ಅವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
    ನಟನನ್ನು ಮುಂಬೈ ರೈಲ್ವೆ ಪೊಲೀಸರು ಶನಿವಾರ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ:ತಮಿಳುನಾಡಿನಲ್ಲಿ ಮೈತ್ರಿ ಖಚಿತ ಎಂದ ಪನ್ನೀರಸೆಲ್ವಂ

    ವಿದ್ಯುತ್ ಜಮ್ವಾಲ್ ಅವರ ಹೊಸ ಸಿನಿಮಾದಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

    ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್)ನ ಬಾಂದ್ರಾ ಕಚೇರಿಯ ಫೋಟೋವೊಂದು ವೈರಲ್ ಆಗಿದ್ದು, ಇದರಲ್ಲಿ ವಿದ್ಯುತ್ ಜಮ್ವಾಲ್ ಪೊಲೀಸ್ ಠಾಣೆಯಲ್ಲಿರುವುದನ್ನು ಕಾಣಬಹುದು. ಮೂಲಗಳ ಪ್ರಕಾರ, ಅಪಾಯಕಾರಿ ಸ್ಟಂಟ್’ಗಳನ್ನು ಪ್ರದರ್ಶಿಸಿದ ಆರೋಪದ ಮೇಲೆ ನಟನನ್ನು ಬಂಧಿಸಲಾಗಿದೆ. ಆದರೆ, ಈ ಆರೋಪದ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ.

    ಇತ್ತೀಚೆಗೆ ಅಂದರೆ ಶುಕ್ರವಾರದಂದು, ವಿದ್ಯುತ್ ಜಮ್ವಾಲ್ ಅವರ ಮುಂಬರುವ ಚಿತ್ರ ‘ಕ್ರಕ್’ ಟ್ರೇಲರ್ ಬಿಡುಗಡೆಯಾಗಿದೆ, ಅದರಲ್ಲಿ ಅವರು ಅಪಾಯಕಾರಿ ಆಕ್ಷನ್ ಸೀಕ್ವೆನ್ಸ್‌’ಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಪ್ರಸ್ತುತ, ವಿದ್ಯುತ್ ಜಮ್ವಾಲ್ ಬಾಲಿವುಡ್‌’ನಲ್ಲಿ ಅಪಾಯಕಾರಿ ಸ್ಟಂಟ್’ಗಳನ್ನು ಮಾಡುವಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ.

    ವಿದ್ಯುತ್ ಜಮ್ವಾಲ್ ಚಲನಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ಮಾಡಲು ಹೆಸರುವಾಸಿಯಾಗಿದ್ದಾರೆ. ನಟರಲ್ಲದೆ, ಅವರು ಮಾರ್ಷಲ್ ಆರ್ಟಿಸ್ಟ್ ಕೂಡ. ‘ಕಮಾಂಡೋ’ ಚಿತ್ರದ ಮೂಲಕ ಪ್ರೇಕ್ಷಕರಲ್ಲಿ ಜನಪ್ರಿಯರಾದರು. ಫಿಲ್ಮ್ ಫೇರ್ ಅಲ್ಲದೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ‘ಶಕ್ತಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ‘ಫೋರ್ಸ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ್ದರು. ‘ಕಮಾಂಡೋ’ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ‘ಅಂಜಾನ್’, ‘ಬಾದ್‌ಶಾಹೋ’, ‘ಕಮಾಂಡೋ 2’, ‘ಜಂಗ್ಲಿ’, ‘ಯಾರಾ’, ‘ಕಮಾಂಡೋ 3’ ಮತ್ತು ‘ಸನಕ್’ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

    ಚಂದ್ರಬಾಬು ನಾಯ್ಡು ಲಕ್ಕಿ ನಂಬರ್​ 23: ಆರ್​ಜಿವಿ ಗಣಿತ ಸೂತ್ರ ಭಾರಿ ವೈರಲ್..!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts