More

    ಚಂದ್ರಬಾಬು ನಾಯ್ಡು ಲಕ್ಕಿ ನಂಬರ್​ 23: ಆರ್​ಜಿವಿ ಗಣಿತ ಸೂತ್ರ ಭಾರಿ ವೈರಲ್..!​

    ಹೈದರಾಬಾದ್: ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ವಿವಾದಗಳೆಂದರೆ ಬಲು ಪ್ರೀತಿ, ತಾವೇ ಖುದ್ದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಒಂದು ಕಾಲದ ಟಾಪ್ ನಿರ್ದೇಶಕ ಆಗಿದ್ದ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ಕೇವಲ ವಿವಾದಗಳಿಂದಲೇ ಸುದ್ದಿ ಆಗುತ್ತಿದ್ದಾರೆ. ಸಿನಿಮಾಗಳಿಗೂ ವಿವಾದಾತ್ಮಕ ವಿಷಯಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ:ಮೈತ್ರಿಕೂಟಕ್ಕೆ ಶಾಕ್! ಪಂಜಾಬ್‌ನ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ಆಪ್ ಏಕಾಂಗಿ ಸ್ಪರ್ಧೆ

    ಆರ್​​​ಜಿವಿ, ‘ವ್ಯೂಹಂ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ ಸಿನಿಮಾದಲ್ಲಿ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿ ಚಿತ್ರಿಸಲಾಗಿದೆ. ಮಾಜಿ ಸಿಎಂ ರಾಜಶೇಖರ ರೆಡ್ಡಿ ಸಾವಿಗೆ ಚಂದ್ರಬಾಬು ನಾಯ್ಡು ಕಾರಣ ಎಂಬರ್ಥ ಬಿಂಬಿಸುವ ದೃಶ್ಯಗಳೂ ಸಿನಿಮಾದಲ್ಲಿ ಇವೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಹಾಲಿ ಸಿಎಂ ಜಗನ್ ಅನ್ನು ಹೀರೋ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ ಪಕ್ಷದ ಕಾರ್ಯಕರ್ತರ ಅಸಹನೆಗೆ ಕಾರಣವಾಗಿದೆ.

    ಚಂದ್ರಬಾಬು ನಾಯ್ಡು ಲಕ್ಕಿ ನಂಬರ್​ 23: ಆರ್​ಜಿವಿ ಗಣಿತ ಸೂತ್ರ ಭಾರಿ ವೈರಲ್..!​

    ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ವ್ಯೂಹಂ’ ಹೆಸರಿನ ಸಿನಿಮಾ ಫೆಬ್ರವರಿ 23 ರಂದು ಥಿಯೇಟರ್​ನಲ್ಲಿ ಬಿಡುಗಡೆಯಾಗಲಿದೆ. ಜನಸೇನ ಸಂಸ್ಥಾಪಕ, ಚಲನಚಿತ್ರ ನಟ ಪವನ್​ ಕಲ್ಯಾಣ್​ ಅವರನ್ನು ವಿಲನ್ ರೀತಿ ಬಿಂಬಿಸಿರುವ ಶಪಥಂ ಚಿತ್ರಿಸಲಾಗಿದೆ. ಈ ಸಿನಿಮಾ ಮಾರ್ಚ್​ 1 ರಂದು ಬಿಡುಗಡೆಯಾಗಲಿದೆ. ಇದಕ್ಕೆ ಟ್ಯಾಗ್​ಲೈನ್​ ಕುಂತ್ರಗಳಿಗೆ ಮತ್ತು ಆಲೋಚನೆಗಳಿಗೆ ಮಧ್ಯದಲ್ಲಿ ಎಂದು ಇಡಲಾಗಿದೆ.(ಕುಟ್ರಲಕಿ ಆಲೋಚನಲಕಿ ಮಧ್ಯ). ಎಂದು ಬರೆಯಲಾಗಿದೆ.

    ತಮ್ಮ ಎಕ್ಸ್​ ಖಾತೆಯಲ್ಲಿ ಟ್ವೀಟ್​ ಮಾಡಿರುವ ಆರ್​ಜಿವಿ, (ಚಂದ್ರಬಾಬು ನಾಯುಡು) ಸಿಬಿಎನ್ ಲಕ್ಕಿ ನಂಬರ್​ 23, ಚಂದ್ರಬಾಬು ನಾಯುಡು ವೈಸಿಪಿ ಪಕ್ಷದ 23 ಶಾಸಕರನ್ನು ಕರೆದುಕೊಂಡಿದ್ದರು. 2019ರ ಚುನಾವಣೆಯಲ್ಲಿ ಸೋಲು ಅನುಭವಿಸಿದ ದಿನ 23, ಚಂದ್ರಬಾಬು ಗೆದ್ದಿದ್ದು ಕೇವಲ 23 ಎಂಎಲ್ಎ ಸ್ಥಾನಗಳು, ಬಾಬು ಬಂಧನದ ದಿನಾಂಕ 9-9-23 ….ಈ ಎಲ್ಲಾ ಸಂಖ್ಯೆಗಳ ಮೊತ್ತ = 23, ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು 23ನೇ ಸೆಪ್ಟೆಂಬರ್ 2023 ರವರೆಗೆ ನ್ಯಾಯಾಂಗ ಬಂಧನವನ್ನು ನೀಡಿದೆ. ಬಾಬು ಜೈಲು ಸಂಖ್ಯೆ– 7691 …. ಈ ಎಲ್ಲಾ ಸಂಖ್ಯೆಗಳ ಮೊತ್ತ = 23, CBN ಮತ್ತು NTR ಅವರಿಂದ ಕದ್ದ ಪಕ್ಷದ ಉತ್ತರಾಧಿಕಾರಿಯಾಗಿ ಲೋಕೇಶ್ ಅವರ ಜನ್ಮದಿನ 23 ರಂದು, ವ್ಯೂಹಂ ಸಿನಿಮಾ ಜಗಗರ್ಜನ ಕಾರ್ಯಕ್ರಮ 23 ರಂದು, ವ್ಯೂಹಂ ಚಿತ್ರ ಬಿಡುಗಡೆ ಮಾರ್ಚ್​ 23 ರಂದು ಟ್ವೀಟ್​ ಮಾಡಿದ್ದಾರೆ.

    ಈ ಸಿನಿಮಾಗೆ ಸಂಬಂಧಿಸಿದಂತೆ ತೆಲುಗು ಟಿವಿ ಡಿಬೇಟ್​ನಲ್ಲಿ ಭಾಗವಹಿಸಿದ್ದ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ ನಾಯ್ಡು, ‘‘ರಾಮ್ ಗೋಪಾಲ್ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ’’ ಎಂದು ಘೋಷಿಸಿದ್ದರು. ಟಿವಿ ನಿರೂಪರು, ದಯವಿಟ್ಟು ಬೇಡ, ಕಾನೂನಿಗೆ ವ್ಯತಿರೇಕವಾದ ಮಾತುಗಳು ಬೇಡ’’ ಎಂದು ಮನವಿ ಮಾಡಿದ್ದರು ಇದು ಭಾರೀ ವೈರಲ್​ ಆಗಿತ್ತು.

    ಯೋಗಿ ಆದಿತ್ಯನಾಥ್​ ಪಶ್ಚಿಮ ಬಂಗಾಳಕ್ಕೆ ಬಂದರೆ….? ಮುಸ್ಲಿಂ ಮುಖಂಡನ ಹೇಳಿಕೆ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts