ಬ್ಯಾಕ್​​​ ಲೆಸ್​​ ಹೈ ಸ್ಲಿಟ್ ಗೌನ್‌ನಲ್ಲಿ ಕಾಣಿಸಿಕೊಂಡ ವಾಣಿ ಕಪೂರ್; 'ಅಬ್ಬಬ್ಬಾ ಏನ್​ ಕಿಲ್ಲರ್​ ಲುಕ್​ ಗುರೂ'!

vaani
Published on

ಮುಂಬೈ: ಪ್ರಸಿದ್ಧ ಬಾಲಿವುಡ್ ನಟಿಯರ ಬಗ್ಗೆ ಚರ್ಚಿಸುವುದಾದರೆ ವಾಣಿ ಕಪೂರ್ ಅವರ ಹೆಸರೂ ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ. ತನ್ನ ಅದ್ಭುತ ನಟನೆಯ ಜೊತೆಗೆ, ಸೌಂದರ್ಯಕ್ಕೂ ಹೆಸರುವಾಸಿಯಾಗಿದ್ದಾರೆ ವಾಣಿ. ಅಂದಹಾಗೆ ನಟಿಯ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ವಾಣಿ ತನ್ನ ಕಿಲ್ಲರ್​​​ ಲುಕ್​​​ನಿಂದ ಅಭಿಮಾನಿಗಳ ಹೃದಯವನ್ನು ಕದ್ದಿದ್ದಾರೆ.

ವಾಣಿ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವುದೇ. ಈ ಕಾರಣದಿಂದಾಗಿ ನಟಿಯ ಫೋಟೋ ಅಥವಾ ವಿಡಿಯೋಗಳು ಸದಾ ಚರ್ಚೆಯಲ್ಲಿರುತ್ತವೆ. ಮಂಗಳವಾರವೂ ಇದೇ ರೀತಿಯ ವಾಣಿ ಕಪೂರ್ ಅವರ ಫೋಟೋಗಳು ವೈರಲ್ ಆಗಿವೆ. ಹೌದು, ಇಂದು ವಾಣಿ ಕಪೂರ್ ತನ್ನ ಅಧಿಕೃತ ಇನ್ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಾಣಿ ಬ್ಯಾಕ್​​​ ಲೆಸ್​​ ಹೈ ಸ್ಲಿಟ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿಳಿ ಬಣ್ಣದ ಉಡುಪಿನಲ್ಲಿ ವಾಣಿ ಕಪೂರ್ ತುಂಬಾ ಸುಂದರವಾಗಿ ಮತ್ತು ಅದ್ಭುತವಾಗಿ ಕಾಣುತ್ತಾರೆ. ಅಷ್ಟೇ ಅಲ್ಲ, ಈ ಫೋಟೋದಲ್ಲಿ ಅವರ ಹಾಟ್‌ನೆಸ್ ತುಸು ಹೆಚ್ಚಾಗಿರುವುದನ್ನು ಸುಲಭವಾಗಿ ಊಹಿಸಬಹುದು. ವಾಣಿ ಕಪೂರ್ ತನ್ನ ಕಿಲ್ಲರ್ ಲುಕ್​​​​​ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ.

ಇದಕ್ಕೂ ಒಂದು ವಾರದ ಹಿಂದೆಯೂ ವಾಣಿ ಇಂತಹುದೇ ಉಡುಪಿನಲ್ಲಿ ತನ್ನ ಲುಕ್‌ನಿಂದ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ವಾಣಿ ಕಪೂರ್ ಅವರ ಈ ಫೋಟೋಗಳು ಎಷ್ಟು ಹಾಟ್ ಆಗಿವೆ ಎಂದರೆ ಅವುಗಳನ್ನು ನೋಡಿ ನೀವು ಬಾಲಿವುಡ್ ನಟಿ ದಿಶಾ ಪಟಾನಿಗಿಂತ ಒಂದು ಹೆಜ್ಜೆ ಮುಂದೆ, ಅಬ್ಬಬ್ಬಾ ಏನ್​ಕಿಲ್ಲರ್​ ಲುಕ್​ ಗುರೂ! ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ 2013 ರ ಚಿತ್ರ 'ಶುದ್ಧ್ ದೇಸಿ ರೊಮ್ಯಾನ್ಸ್' ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಾಣಿ ಕಪೂರ್, ತಮ್ಮ ವೃತ್ತಿಜೀವನದಲ್ಲಿ ಅನೇಕ ಉತ್ತಮ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ' ಖೇಲ್ ಖೇಲ್ ಮೇ ' ವಾಣಿ ಅವರ ಮುಂಬರುವ ಚಲನಚಿತ್ರವಾಗಿದೆ. ಇದರಲ್ಲಿ ವಾಣಿ ಕಪೂರ್ ಸೂಪರ್‌ಸ್ಟಾರ್‌ಗಳಾದ ಅಕ್ಷಯ್ ಕುಮಾರ್ ಮತ್ತು ಫರ್ದೀನ್ ಖಾನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. 
https://www.vijayavani.net/ujjain-mohan-yadav-becoming-cm-news-gets-doctor-akansha-yadav-during-operation
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net